ETV Bharat / state

ವಿಧಾನಸೌಧಕ್ಕೂ ನುಗ್ಗಿದ ಮಳೆ ನೀರು! - ಈಟಿವಿ ಭಾರತ ಕನ್ನಡ

ನಿನ್ನೆ ಸುರಿದ ಬಾರಿ ಮಳೆಯಿಂದಾಗಿ ವಿಧಾನಸೌಧ ಒಳಗೆ ಮಳೆ ನೀರು ನುಗ್ಗಿದ್ದು, ವಿಧಾನಸೌಧದ ಕ್ಯಾಂಟೀನ್​ ನಲ್ಲಿದ್ದಂತ ಆಹಾರ ತಯಾರಿಸುವ ಉಪಕರಣಗಳು ನೀರಿಗೆ ಒದ್ದೆಯಾಗಿವೆ.

KN_BNG_02_Rain
ವಿಧಾನಸೌಧದ ಕ್ಯಾಂಟೀನ್​ ಒಳಗೆ ಮಳೆ ನೀರು
author img

By

Published : Sep 5, 2022, 4:25 PM IST

ಬೆಂಗಳೂರು: ನಗರದಲ್ಲಿ ನಿನ್ನೆ ಇಡೀ ರಾತ್ರಿ ಮಳೆ ಸುರಿದಿದ್ದು, ವಿಧಾನಸೌಧದ ಒಳಗೂ ಮಳೆ ನೀರು ನುಗ್ಗಿವೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ಸಮೀಪದ ನೆಲ ಮಹಡಿಯಲ್ಲಿನ ಕ್ಯಾಂಟೀನ್ ಒಳಗೆ ಮಳೆ ನೀರು ನುಗ್ಗಿದ್ದು, ಕ್ಯಾಂಟೀನ್ ಸಿಬ್ಬಂದಿ ಬೆಳಗ್ಗೆ ಬಂದು ನೋಡಿದಾಗ ಇಡೀ ಕ್ಯಾಂಟೀನ್​ನಲ್ಲಿ ನೀರು ತುಂಬಿರುವುದು ಕಂಡು ಬಂದಿದೆ.

ಮಳೆ ನೀರಿಗೆ ಕುರ್ಚಿ, ಕ್ಯಾಂಟೀನ್​ನ​ ಆಹಾರ ತಯಾರಿಸುವ ಉಪಕರಣಗಳು ಒದ್ದೆಯಾಗಿದ್ದವು. ಬಳಿಕ ಅಲ್ಲಿನ ಸಿಬ್ಬಂದಿ ಪಂಪ್​ ಮೂಲಕ ಮಳೆ ನೀರು ಹೊರ ಹಾಕಿದ್ದಾರೆ. ಸಂಪ್​ಗೆ ಮಳೆ ನೀರು ನುಗ್ಗಿದ್ದರಿಂದ ಈ ಅನಾಹುತವಾಗಿದೆ ಎಂದು ಸಿಬ್ಬಂದಿ ಹೇಳಿದರು.

ಪೊಲೀಸ್​ ಠಾಣೆಗೂ ನುಗ್ಗಿದ ನೀರು: ವಿಧಾನಸೌಧ ಆವರಣದಲ್ಲಿರುವ ಪೊಲೀಸ್ ಠಾಣೆಗೂ ನೀರು ನುಗ್ಗಿದ್ದು, ಬಳಿಕ ಪೊಲೀಸ್ ಸಿಬ್ಬಂದಿ ಮಳೆ ನೀರು ಹೊರ ಹಾಕಿದರು.

ಇದನ್ನೂ ಓದಿ: ಚಾಮರಾಜನಗರ: ಇಂದಿರಾ ಕ್ಯಾಂಟೀನ್, ಕಲ್ಯಾಣ ಮಂಟಪ, ದೇಗುಲವೂ ಜಲಾವೃತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.