ETV Bharat / state

ಕರಾವಳಿ ಹೊರತುಪಡಿಸಿ ಇತರ ಜಿಲ್ಲೆಗಳಿಗೆ ಜೂನ್ 8ರವರೆಗೆ ಮಳೆ ಸಾಧ್ಯತೆ ಕಡಿಮೆ.. - ಜೂನ್ 8ರವರೆಗೆ ಮಳೆ

ಗಾಳಿಯ ವೇಗ 110 ಕಿ.ಮೀ ವೇಗ ಇದೆ. ಸಮುದ್ರದ ಅಲೆಗಳ ಉಬ್ಬರವೂ ಹೆಚ್ಚಿದೆ. ಮುಂಬೈನ ಕೆಲ ಭಾಗಗಳಲ್ಲಿ 200 ಮಿ.ಮೀನಷ್ಟು ಮಳೆಯಾಗಬಹುದು. ಇನ್ನೂ 4 ಗಂಟೆ ಇದೇ ತೀವ್ರತೆಯಲ್ಲಿ ಮುಂದುವರೆದು ಸಂಜೆ ವೇಳೆಗೆ ಕಡಿಮೆಯಾಗಲಿದೆ ಎಂದರು.

ಮಳೆ ಸಾಧ್ಯತೆ
ಮಳೆ ಸಾಧ್ಯತೆ
author img

By

Published : Jun 3, 2020, 4:50 PM IST

ಬೆಂಗಳೂರು : ನಿಸರ್ಗ ಚಂಡಮಾರುತದ ಪ್ರಭಾವದಿಂದ ರಾಜ್ಯದ ಹಲವೆಡೆ ಮಳೆಯಾಗಿತ್ತು. ಆದರೆ, ಈಗ ಈ ಚಂಡಮಾರುತ ಮಹಾರಾಷ್ಟ್ರದ ಮುಂಬೈ ಕಡೆಗೆ ಚಲಿಸಿದೆ. ಹೀಗಾಗಿ ರಾಜ್ಯದ ಕರಾವಳಿಯಲ್ಲಿ ಒಂದೆರಡು ದಿನ ಮಳೆ ಮುಂದುವರಿಯಲಿದೆ. ಉಳಿದಂತೆ ಬೇರೆ ಜಿಲ್ಲೆಗಳಿಗೆ ಜೂನ್ 8ರವರೆಗೆ ಮಳೆ ಸಾಧ್ಯತೆ ಕಡಿಮೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ ಶ್ರೀನಿವಾಸ ರೆಡ್ಡಿ ತಿಳಿಸಿದರು.

ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ನಿಸರ್ಗ ಚಂಡಮಾರುತ ವಿವಿಧ ಹಂತ ತಲುಪಿ ಮುಂಬೈ ಕರಾವಳಿ ತೀರಕ್ಕೆ ಇಂದು ಮಧ್ಯಾಹ್ನ ಅಪ್ಪಳಿಸಿದೆ. ಗಾಳಿಯ ವೇಗ 110 ಕಿ.ಮೀ ವೇಗ ಇದೆ. ಸಮುದ್ರದ ಅಲೆಗಳ ಉಬ್ಬರವೂ ಹೆಚ್ಚಿದೆ. ಮುಂಬೈನ ಕೆಲ ಭಾಗಗಳಲ್ಲಿ 200 ಮಿ.ಮೀನಷ್ಟು ಮಳೆಯಾಗಬಹುದು. ಇನ್ನೂ 4 ಗಂಟೆ ಇದೇ ತೀವ್ರತೆಯಲ್ಲಿ ಮುಂದುವರೆದು ಸಂಜೆ ವೇಳೆಗೆ ಕಡಿಮೆಯಾಗಲಿದೆ ಎಂದರು.

ಮಳೆಯ ಕುರಿತು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ..

ಇನ್ನೂ ಎರಡು ಮೂರು ದಿನ ಈ ಚಂಡಮಾರುತದ ಪ್ರಭಾವ ಇರಲಿದೆ. ಆದರೆ, ಕರ್ನಾಟಕದ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ. ಮಂಗಳವಾರ ಮತ್ತು ಇಂದು ಕರಾವಳಿಯಲ್ಲಿ ಮಳೆಯಾಗಿದೆ. ಇನ್ನು ಮುಂದೆಯೂ ಸಾಧಾರಣ ಮಳೆ ಮುಂದುವರಿಯಲಿದೆ. ಸದ್ಯ ಬೆಂಗಳೂರಿಗೆ ಮಳೆಯಿಲ್ಲ. ಬಂಗಾಳಕೊಲ್ಲಿಯಲ್ಲಿ ವಾಯವ್ಯ ದಿಕ್ಕಿನಲ್ಲಿ ಜೂನ್‌ 8ರಂದು ವಾಯುಭಾರ ಕುಸಿತವಾಗಲಿದೆ. ಇದರಿಂದ ದಕ್ಷಿಣ ಒಳನಾಡು, ಕರಾವಳಿ ಭಾಗಕ್ಕೆ ಮಳೆಯಾಗಲಿದೆ ಎಂದರು.

ಮುಂಗಾರು ಪ್ರವೇಶ ಘೋಷಣೆಯಾಗಿಲ್ಲ. ರಾಜ್ಯಕ್ಕೆ ಮುಂಗಾರು ಪ್ರವೇಶದ ಬಗ್ಗೆ ಇನ್ನೂ ಭಾರತೀಯ ಹವಾಮಾನ ಇಲಾಖೆ ಘೋಷಿಸಿಲ್ಲ. ವಾಡಿಕೆಯಂತೆ ಐದರ ನಂತರ ಮಳೆಯಾಗಬಹುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.