ETV Bharat / state

ಬೆಂಗಳೂರಿಗೆ ಇಂದಿನಿಂದ 3 ದಿನ ಮಳೆ ಮುನ್ಸೂಚನೆ

ಇಂದಿನಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಹಗುರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಲಿಕಾನ್ ಸಿಟಿಯಲ್ಲಿ ಮುಂದಿನ ಮೂರು ದಿನ ಮಳೆ
ಲಿಕಾನ್ ಸಿಟಿಯಲ್ಲಿ ಮುಂದಿನ ಮೂರು ದಿನ ಮಳೆ
author img

By

Published : Mar 16, 2023, 6:45 AM IST

ಬೆಂಗಳೂರು: ಹವಾಮಾನ ವೈಪರೀತ್ಯದಿಂದಾಗಿ ಬೆಂಗಳೂರಿನಲ್ಲಿ ಇಂದಿನಿಂದ ಮೂರು ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕರ್ನಾಟಕ ಹಾಗೂ ಕರಾವಳಿಯ ಭಾಗದಲ್ಲಿ ಸಮುದ್ರ ಮಟ್ಟದಿಂದ 1.5 ಕಿಲೋ ಮೀಟರ್ ಎತ್ತರದವರೆಗೆ ಸುಳಿಗಾಳಿ ನಿರ್ಮಾಣವಾಗಿದೆ. ಎಲ್ಲೆಡೆ ಹೆಚ್ಚಾಗಿದ್ದ ತಾಪಮಾನ ತುಸು ಕಡಿಮೆ ಆಗಿದೆ. ಅಕಾಲಿಕ ಹವಾಮಾನ ಬದಲಾವಣೆಗಳ ಪರಿಣಾಮ ಮಾರ್ಚ್ ಇಂದಿನಿಂದ ನಗರದ ಅಲ್ಲಲ್ಲಿ ಹಗುರ ಮಳೆ ನಿರೀಕ್ಷೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ. ನಗರದಲ್ಲಿ ಕಳೆದ ಎರಡು ದಿನದಿಂದ ಮಧ್ಯಾಹ್ನ ಹೊರತುಪಡಿಸಿ ಉಳಿದ ಸಮಯದಲ್ಲಿ ತಾಪಮಾನದಲ್ಲಿ ಇಳಿಕೆಯಾಗಿದೆ.

ರಾಜ್ಯದಲ್ಲಿ ಸಾಧಾರಣ ಮಳೆ: ಇನ್ನು ರಾಜ್ಯದೆಲ್ಲೆಡೆ ಸಾಧಾರಣ ಮಳೆಯಾಗಲಿದೆ. ಬಹುತೇಕ ಕಡೆ ಬಿಸಿಲಿನ ಧಗೆ ಹೆಚ್ಚುತ್ತಿದ್ದು ಗುಡುಗು ಸಹಿತ ಮಳೆ ಬೀಳಲಿದೆ. ಮಂಗಳವಾರ ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು, ಆಗುಂಬೆ ಸೇರಿದಂತೆ ಕೆಲವೆಡೆಗಳಲ್ಲಿ ಜೋರು ಮಳೆಯಾಗಿತ್ತು. ಇದೇ ರೀತಿ ಮಾರ್ಚ್‌ 19ರವರೆಗೆ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಇಲಾಖೆ ಹೇಳಿದೆ.

ಕಲುಬುರಗಿಯಲ್ಲಿ ಹೆಚ್ಚು ತಾಪಮಾನ: ಬುಧವಾರ ಕಲುಬುರಗಿಯಲ್ಲಿ ಅತ್ಯಧಿಕ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಇನ್ನು, ರಾಯಚೂರಲ್ಲಿ ಗರಿಷ್ಠ 36.4, ಬಳ್ಳಾರಿಯಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು.

ಬುಧವಾರ ಬೆಂಗಳೂರು ನಗರದಲ್ಲಿ ಗರಿಷ್ಠ 33.6 ಮತ್ತು ಕನಿಷ್ಠ 19.8, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಭಾಗದಲ್ಲಿ ಗರಿಷ್ಠ 33.1, ಕನಿಷ್ಠ 19.8 ಹಾಗೂ ಬೆಂಗಳೂರು ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ಗರಿಷ್ಠ 32.5 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದೆ ಎಂದು ಹವಾಮಾನ ವರದಿ ತಿಳಿಸಿದೆ.

ಇದನ್ನೂ ಓದಿ: ಸಿಎಂ ಭಾಷಣದ ವೇಳೆ ಗುಡುಗು ಸಹಿತ ಮಳೆ.. ತಲೆ ಮೇಲೆ ಕುರ್ಚಿ​ ಹೊತ್ತು ನಿಂತ ಜನ

ಶಿವಮೊಗ್ಗ, ಹಾವೇರಿಯಲ್ಲಿ ಮಳೆ: ಬುಧವಾರ ಮಲೆನಾಡು ಪ್ರದೇಶ ಶಿವಮೊಗ್ಗದ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಹಾವೇರಿ ಜಿಲ್ಲೆಯ ಕೆಲವು ಭಾಗಗಳಲ್ಲಿಯೂ ಮಳೆಯಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಉತ್ತಮ ಮಳೆ..ಸಂತಸಗೊಂಡ ಜನ

ಬಿಸಿಲ ಬೇಗೆಯಿಂದ ಸುಡುತಿದ್ದ ಧರೆಗೆ ತಂಪೆರದ ವರುಣ: ಕೊಡಗಿನಲ್ಲಿ ಉತ್ತಮ ಮಳೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.