ETV Bharat / state

ಡಿಕೆಶಿ ಮನೆ ಮೇಲಿನ ಐಟಿ ದಾಳಿಯೇ ಕಾಫಿ ದೊರೆಯ ಸಂಕಷ್ಟಕ್ಕೆ ಕಾರಣವಾಯ್ತೇ..? - ಕೆಫೆ ಕಾಫಿ ಡೇ

ಡಿ.ಕೆ.ಶಿವಕುಮಾರ್ ಜೊತೆ ವಿ.ಜಿ.ಸಿದ್ಧಾರ್ಥ್​ ಆರ್ಥಿಕ ವ್ಯವಹಾರ ಹೊಂದಿದ್ದರು. ಹೀಗಾಗಿ ಐಟಿ ಅಧಿಕಾರಿಗಳು ಕಾಫಿ ದೊರೆ ಬೆನ್ನು ಬಿದ್ದಿದ್ದರು ಎಂದು ಹೇಳಲಾಗುತ್ತಿದೆ.

ಡಿ.ಕೆ.ಶಿವಕುಮಾರ್, ವಿ.ಜಿ.ಸಿದ್ಧಾರ್ಥ್
author img

By

Published : Aug 1, 2019, 12:52 PM IST

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ ನಡೆಸಿದಾಗಿನಿಂದ ವಿ.ಜಿ.ಸಿದ್ಧಾರ್ಥ್​ಗೆ ಸಂಕಷ್ಟಗಳು ಶುರುವಾದವು ಎಂಬ ಮಾತು ಬೆಂಗಳೂರಿನ ಉದ್ಯಮಿ ಮತ್ತು ರಾಜಕಾರಣಿಗಳ ವಲಯದಲ್ಲಿ ಕೇಳಿಬರುತ್ತಿದೆ.

ತೆರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಸಿದ್ಧಾರ್ಥ್​ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಆರ್ಥಿಕ ವ್ಯವಹಾರವಿತ್ತು ಎಂದು ಹೇಳಲಾಗುತ್ತಿದೆ. 2017 ಆಗಸ್ಟ್​ 2 ರಂದು ಡಿಕೆಶಿ ಮತ್ತು ಅವರ ಆರ್ಥಿಕ ಸಲಹೆಗಾರ ಚಂದ್ರಶೇಖರ್​ ಸುಕಪುರಿ ಮನೆ ಮೇಲೆ ದಾಳಿ ನಡೆಸಿ, ದಾಖಲೆಗಳನ್ನ ಪರಿಶೀಲನೆ ನಡೆಸಿದಾಗ ಕೆಫೆ ಕಾಫಿ ಡೇ ಲಿಮಿಟೆಡ್ ಮತ್ತು ಎಂ ಸೋಲ್ ಸ್ಪೇಸ್‌ ನೊಂದಿಗೆ ಹಣಕಾಸಿನ ವಹಿವಾಟು ಇರುವುದು ಬೆಳಕಿಗೆ ಬಂದಿದೆ.

ಇದೇ ಮಾಹಿತಿಯನ್ನ ಆಧರಿಸಿ ಐಟಿ ಅಧಿಕಾರಿಗಳು ಸಿದ್ಧಾರ್ಥ್​ ಬೆನ್ನಿಗೆ ಬೀಳುತ್ತಾರೆ. ಹೀಗಾಗಿ ಸಾವಿಗೆ ಮುನ್ನ ಸಿದ್ಧಾರ್ಥ​ ಬರೆದ ಪತ್ರದಲ್ಲಿ ಐಟಿ ಡಿಜಿ ತುಂಬಾ ಕಿರುಕುಳ ನೀಡುತ್ತಿದ್ದಾರೆ ಎಂದು ಉಲ್ಲೇಖಿಸಿರುತ್ತಾರೆ. ಈ ಬಗ್ಗೆ ಮಾತನಾಡಿದ್ದ ಐಟಿ ಡಿಜಿ ಪಿ.ಆರ್.ಬಾಲಕೃಷ್ಣನ್ ನಮಗೆ ಸಿಕ್ಕ ದಾಖಲೆಗಳ ಆಧಾರದ ಮೇಲೆ ತನಿಖೆ ನಡೆಸುವುದು ಸಹಜ. ಅದೇ ರೀತಿ ಸಿದ್ಧಾರ್ಥ್ ಪ್ರಕರಣದಲ್ಲಿ ತನಿಖೆ ನಡೆಸಿದ್ದೆವು ಯಾವುದೇ ರೀತಿಯ ಕಿರುಕುಳ ನೀಡಿಲ್ಲ ಎಂದಿದ್ದರು.

ಮೈಂಡ್ ಟ್ರೀ ಕಂಪನಿಯಲ್ಲಿ ಸಿದ್ಧಾರ್ಥ್​ ಹೊಂದಿದ್ದ ಷೇರುಗಳನ್ನ ಐಟಿ ಇಲಾಖೆ ವಶಪಡಿಸಿಕೊಂಡಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಐಟಿ ಇಲಾಖೆ ಮೈಂಡ್ ಟ್ರೀ ಕಂಪನಿ ಷೇರ್​ ಡೀಲ್​​ನಲ್ಲಿ ಸಿದ್ಧಾರ್ಥ್​​ ಅವರಿಗೆ ತೊಂದರೆ ಕೊಟ್ಟಿಲ್ಲ. ಅವರ ಮನವಿಯಂತೆ ಷೇರು ರಿಲೀಸ್ ಮಾಡಿದ್ವಿ, ಆ ನಂತರ ಸಿದ್ದಾರ್ಥ್​ ತಮ್ಮಿಚ್ಚೆ ಯಂತೆ ಷೇರು ಮಾರಾಟ ಮಾಡಿದ್ದಾರೆ ಎಂದಿದೆ.

ಒಟ್ಟಾರೆಯಾಗಿ ಡಿಕೆಶಿ ಮೇಲೆ ಐಟಿ ದಾಳಿ ನಡೆದ ನಂತರದಿಂದ ಕಾಫಿ ದೊರೆಗೆ ಸಂಕಷ್ಟ ಶುರುವಾಗಿದ್ದು ಎಂಬುದು ಈಗ ಚರ್ಚಿತ ವಿಷಯವಾಗಿದೆ.

Intro:Body:ಕಾಫಿ ದೊರೆ ತೆರಿಯ ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದ್ದು ಡಿ ಕೆ ಶಿವಕುಮಾರ್ ಮೇಲೆ ದಾಳಿಯ ವೇಳೆ ಸಿಕ್ಕ ದಾಖಲೆ ಮೇಲೆ

ಬೆಂಗಳೂರು: ಬೆಂಗಳೂರಿನ ಉದ್ಯಮಸ್ತ್ರರಲ್ಲಿ ಹಾಗೂ ರಾಜಕಾರಿಗಳಲ್ಲಿ ಒಂದು ದೃಢ ಭಾವನೆ ಇದೆ , ಅದು ವಿ ಜಿ ಸಿದಾರ್ಥ್ ತೊಂದರೆಗಳು ಶುರುವಾಗಿರುವಿದೆ ಡಿ ಕೆ ಶಿವಕುಮಾರ್ ಮನೆ ಹಾಗೂ ಕಚೇರಿಯ ಮೇಲೆ ನಡೆಸಿದ ರೈಡ್ ನಿಂದ ಅಂತ.

ಸಹಜವಾಗಿ ಒಂದು ತೆರಿಗೆ ಇಲಾಖೆ ದಾಳಿಯನ್ನು ನಡೆಸಿದರೆ , ಸ್ಥಳದಲ್ಲಿ ಇರುವ ಎಲ್ಲಾ ಆರ್ಥಿಕ ಕಾಗಜಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ, ಅದರ ಪ್ರಕಾರ ಡಿ ಕೆ ಶಿ ಮನೆಯಲ್ಲಿ ಸಿಕ್ಕ ದಾಖಲೆಗಳ ಪ್ರಕಾರ ಕಾಫಿ ದೊರೆ ಸಿದಾರ್ಥ್ ಹಾಗೂ ಡಿ ಕೆ ಶಿವಕುಮಾರ್ ಗೂ ಆರ್ಥಿಕ ವ್ಯವಹಾರ ಇತ್ತು, ಜೊತೆಗೆ ಇಂಡಿಯಾ ಐ ಎನ್ ಸಿ ಸಂಸ್ಥೆಯಲ್ಲಿ ಮಾಡಿರುವ ಸಾಲ ರಹಸ್ಯ ಅಲ್ಲ. ಈ ಎಲ್ಲಾ ವ್ಯವಹಾರಗಳೇ ಸಿಸಿಡಿ ಸಂಸ್ಥಾಪಕ, ಐ ಟಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದು .

ಡಿ ಕೆ ಶಿವಕುಮಾರ್ ನ ಆರ್ಥಿಕ ಸಲಹೆಗಾರ ಎನ್ ಚಂದ್ರಶೇಖರ್ ಸುಕಾಪುರಿಯ ಮೇಲೆ ನಡೆಸಿದ ದಾಳಿಯಲ್ಲಿ ಸಿಕ್ಕ ದಾಖಲೆಗಳು ಡಿಕೆಶಿ ಹಾಗೂ ಸಿದಾರ್ಥ್ ನಡುವೆ ಇದ್ದಂತ ವ್ಯವಹಾರಗಳ ಬಗ್ಗೆ ಸುಳಿವು ಸಿಗುತ್ತದೆ, ಅಲ್ಲಿಂದ ಐ ಟಿ ಅಧಿಕಾರಿಗಳು ಕಾಫಿ ದೊರೆಯ ಬೆನ್ನು ಹತ್ತುವುದು. ಇದಕ್ಕೆ ಸಂಬಂಧಿಸಿದಂತೆ ಬುಧವಾರ ನಿವೃತ್ತ ಪಡೆದ ಕರ್ನಾಟಕ ಹಾಗೂ ಗೋವಾ ರಾಜದ ಮುಖ್ಯ ಆಯುಕ್ತರಾದ ಪಿ ಆರ್ ಬಾಲಕೃಷ್ಣನ್ ಒಬ್ಬರ ದಾಖಲೆಯನ್ನು ಆಧರಿಸಿ ಸಂಬಂಡಪಟ್ಟವರ ತನಿಖೆ ಮಾಡುವುದು ಸಹಜ ಪ್ರಕ್ರಿಯೆ, ಇದು ಅದೇ ರೀತಿ ಎಂದು ತಿಳಿಸಿದರು.ಸಿದಾರ್ಥ್ ಕೊನೆಯ ಪಾತ್ರದಲ್ಲಿ ಐ ಟಿ ಅಧಿಕಾರಿಗಳಿಂದ ಬಹಳ ಶೋಷಣೆ ಆಗುತ್ತಿದೆ ಎಂದು ಉಲ್ಲೇಖಿಸಿದ್ದರು, ಹಾಗೂ ಡಿಜಿ ಐಟಿ ಎಂದು ಸಹ ಹೇಳಿದ್ದರು ಆ ಡಿ ಜಿ ಐಟಿ ಇದೆ ಬಾಲಕೃಷ್ಣನ್.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.