ETV Bharat / state

ಐಸ್‌ಕ್ರೀಂ ಸವಿದು ಕರ್ನಾಟಕದ ಹೆಮ್ಮೆ, ನಂದಿನಿಯೇ ಬೆಸ್ಟ್ ಎಂದ ರಾಹುಲ್ ಗಾಂಧಿ - ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ನಂದಿನಿ ಐಸ್ ಕ್ರೀಂ ಹಾಗೂ ಪೇಡಾ ಸವಿದರು. ಈ ಕುರಿತಂತೆ ಟ್ವೀಟ್​ ಮಾಡಿ ನಂದಿನಿ ಬ್ರಾಂಡ್​ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

rahul-gandhi-visits-nandini-milk-parlour
ಐಸ್ ಕ್ರೀಮ್ ಸವಿದು ಕರ್ನಾಟಕದ ಹೆಮ್ಮೆ, ನಂದಿನಿಯೇ ಬೆಸ್ಟ್ ಎಂದ ರಾಹುಲ್ ಗಾಂಧಿ
author img

By

Published : Apr 16, 2023, 11:01 PM IST

ಬೆಂಗಳೂರು: ರಾಜ್ಯ ಭೇಟಿಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಇತರ ಕಾಂಗ್ರೆಸ್ ನಾಯಕರ ಜೊತೆ ನಂದಿನಿ ಐಸ್ ಕ್ರೀಂ ಹಾಗೂ ಪೇಡಾ ಸವಿದರು. ಬೆಂಗಳೂರಿನ ಜೆ.ಪಿ.ನಗರದ ನಂದಿನಿ ಪಾರ್ಲರ್​​​ಗೆ ಭಾನುವಾರ ಸಂಜೆ ಭೇಟಿ ನೀಡಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತಿತರ ನಾಯಕರು ಜೊತೆಗಿದ್ದರು.

ರಾಜ್ಯಕ್ಕೆ ಎರಡು ದಿನದ ಭೇಟಿ ಪ್ರಯುಕ್ತ ಆಗಮಿಸಿರುವ ರಾಹುಲ್ ಗಾಂಧಿ ಇಂದು ಮಧ್ಯಾಹ್ನ ಕೋಲಾರದಲ್ಲಿ ಜೈ ಭಾರತ್ ಸಮಾವೇಶದಲ್ಲಿ ಪಾಲ್ಗೊಂಡು ಬೆಂಗಳೂರಿಗೆ ಬಂದಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಪೌರಕಾರ್ಮಿಕರು ಹಾಗೂ ಬೀದಿಬದಿ ವ್ಯಾಪಾರಿಗಳ ಜೊತೆ ಸಂವಾದ ನಡೆಸಿದ್ದಾರೆ. ಬೇಸಿಗೆ ಬೇಗೆ ಹಿನ್ನೆಲೆಯಲ್ಲಿ ತುಂಬಾ ಒತ್ತಡದ ನಡುವೆಯೂ ಸಮಯ ಮಾಡಿಕೊಂಡು ಕಾಂಗ್ರೆಸ್ ನಾಯಕರ ಜೊತೆ ರಾಹುಲ್ ಗಾಂಧಿ ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.

ನಂದಿನಿ ಬೂತ್​ನಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪರಿಶೀಲನೆ ಮಾಡಿದರು. ತಮ್ಮ ಜೊತೆಗಿದ್ದ ಹಲವರಿಗೆ ನಂದಿನಿ ಐಸ್‌ಕ್ರೀಂಗಳನ್ನು ಕೊಡಿಸಿದರು. ಬೂತ್ ಮಾಲೀಕನೊಂದಿಗೆ ಮಾತುಕತೆ ನಡೆಸಿದ ರಾಹುಲ್ ಗಾಂಧಿ ನಂದಿನಿ ಉತ್ಪನ್ನಗಳು ಎಲ್ಲಿಂದ ಬರುತ್ತವೆ. ಎಷ್ಟು ವರ್ಷದಿಂದ ನೀವು ಈ ಕೆಲಸ ಮಾಡುತ್ತಿದ್ದೀರಿ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಂಗಡಿ ಮಾಲೀಕ ಬಳ್ಳಾರಿಯಿಂದ ನಂದಿನಿ ಉತ್ಪನ್ನಗಳು ಬರುತ್ತವೆ ಎಂದರು. ಕೊನೆಗೆ ರಾಹುಲ್ ಗಾಂಧಿ ಅವರೊಂದಿಗೆ ಬೂತ್‌ನ ಮಾಲೀಕ ಫೋಟೋ ಸಹ ತೆಗೆಸಿಕೊಂಡರು. ಅಲ್ಲದೆ, ಈ ಬಗ್ಗೆ ಟ್ವೀಟ್​ ಮಾಡಿರುವ ರಾಹುಲ್​ ಗಾಂಧಿ ''ಕರ್ನಾಟಕದ ಹೆಮ್ಮೆ, ನಂದಿನಿಯೇ ಬೆಸ್ಟ್​'' ಎಂದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಅತಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರುವ ವಿಚಾರ ನಂದಿನಿ ಉತ್ಪನ್ನಕ್ಕೆ ಗುಜರಾತ್ ಮೂಲದ ಅಮುಲ್ ಉತ್ಪನ್ನದ ಸ್ಪರ್ಧೆ. ಬೆಂಗಳೂರು ನಗರದ ಕೆಲ ಭಾಗಗಳಿಗೆ ಹಾಲು ಪೂರೈಸುವುದಾಗಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಅಮುಲ್ ಸಂಸ್ಥೆ ಪ್ರಕಟಿಸಿದ್ದು, ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ರಾಜ್ಯದ ನಂದಿನಿ ಉತ್ಪನ್ನವನ್ನು ಮುಗಿಸುವ ಸಂಚನ ಗುಜರಾತ್ ಮೂಲದ ಉದ್ಯಮಿಗಳು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಇದಕ್ಕೆ ಸಹಕಾರ ನೀಡುತ್ತಿದ್ದಾರೆ. ದೇಶದ ಸಹಕಾರಿ ಕ್ಷೇತ್ರದ ಸಂಪೂರ್ಣ ಹಿಡಿತವನ್ನು ಖಾಸಗಿಯವರಿಗೆ ವಹಿಸುವ ಹಾಗೂ ಗುಜರಾತ್ ಮೂಲದ ಉದ್ಯಮಿಗಳ ಏಕಸ್ವಾಮ್ಯವನ್ನು ದೇಶದಲ್ಲಿ ಸ್ಥಾಪಿಸುವಂತೆ ಮಾಡಲು ಇವರು ಸಹಕಾರ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಆರೋಪ ಮಾಡಿದ್ದವು. ಹಲವು ಕಾಂಗ್ರೆಸ್ ನಾಯಕರು ಇದನ್ನ ಖಂಡಿಸಿ ಸುದ್ದಿಗೋಷ್ಠಿ ನಡೆಸಿದ್ದರು ಮಾತ್ರವಲ್ಲದೆ ಅವಕಾಶ ಸಿಕ್ಕಲ್ಲೆಲ್ಲ ನಂದಿನಿ ಬೂತಿಗೆ ತೆರಳಿ ಉತ್ಪನ್ನವನ್ನು ಸವಿದಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.