ETV Bharat / state

'ದ್ವೇಷದ ಬಜಾರ್ ಬಂದ್​, ಪ್ರೀತಿಯ ಅಂಗಡಿ ಆರಂಭ': ಫಲಿತಾಂಶದ ಬಗ್ಗೆ ರಾಹುಲ್​ ಗಾಂಧಿ ಖುಷ್​ - assembly election 2023

ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಪಕ್ಷದ ನಾಯಕ ರಾಹುಲ್​ ಗಾಂಧಿ ಕೊಟ್ಟ ಭರವಸೆಗಳನ್ನು ಮೊದಲ ಕ್ಯಾಬಿನೆಟ್​ನಲ್ಲಿ ಈಡೇರಿಸಲಾಗುವುದು ಎಂದು ದೆಹಲಿಯಲ್ಲಿ ಘೋಷಿಸಿದ್ದಾರೆ.

ಫಲಿತಾಂಶದ ಬಗ್ಗೆ ರಾಹುಲ್​ ಗಾಂಧಿ ಖುಷ್​
ಫಲಿತಾಂಶದ ಬಗ್ಗೆ ರಾಹುಲ್​ ಗಾಂಧಿ ಖುಷ್​
author img

By

Published : May 13, 2023, 3:12 PM IST

ನವದೆಹಲಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯುವ ಲಕ್ಷಣಗಳು ದಟ್ಟವಾಗಿದ್ದು, ಪಕ್ಷದ ನಾಯಕ ರಾಹುಲ್​ ಗಾಂಧಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ರಾಜ್ಯದಲ್ಲಿ ದ್ವೇಷದ ಬಜಾರ್​ ಬಂದ್​ ಆಗಿ, ಪ್ರೀತಿಯ ಅಂಗಡಿ ತೆರೆಯಲಾಗಿದೆ ಎಂದು ಹೇಳಿದರು.

ದೆಹಲಿಯಲ್ಲಿ ಕರ್ನಾಟಕದ ವಿಕ್ಟರಿ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ ರಾಹುಲ್​ ಗಾಂಧಿ, ಕರ್ನಾಟಕದಲ್ಲಿ ಸರ್ವಾಧಿಕಾರಿ ಪಕ್ಷ ಅಧಿಕಾರದಲ್ಲಿತ್ತು. ಇನ್ನೊಂದೆಡೆ ಸಾಮಾನ್ಯ ಜನರ ಶಕ್ತಿ ಅದನ್ನು ಹೋಗಲಾಡಿಸಿದೆ. ಪ್ರೀತಿ, ವಿಶ್ವಾಸದಿಂದ ನಾವು ಈ ಚುನಾವಣೆಯನ್ನು ಎದುರಿಸಿದ್ದೆವು. ಅದು ರಾಜ್ಯದಲ್ಲಿ ಯಶಸ್ವಿಯಾಯಿತು. ಕೊನೆಗೂ ಪ್ರೀತಿ ಗೆದ್ದಿದೆ ಎಂದು ಬಣ್ಣಿಸಿದರು.

ರಾಜ್ಯದಲ್ಲಿ ದ್ವೇಷದ ಸಂತೆ ಬಂದ್​ ಆಗಿದೆ. ಪ್ರೀತಿಯ ಅಂಗಡಿ ಆರಂಭವಾಗಿದೆ. ಇದು ರಾಜ್ಯದ ಎಲ್ಲ ಜನರ ಗೆಲುವಾಗಿದೆ. ನಾವು ಜನರಿಗೆ 5 ಗ್ಯಾರಂಟಿಗಳ ಭರವಸೆ ನೀಡಿದ್ದೆವು. ಚುನಾವಣಾ ಪ್ರಚಾರ ವೇಳೆ ನಾವು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಸೇರಿದಂತೆ ಎಲ್ಲ ನಾಯಕರು ಮೊದಲ ಕ್ಯಾಬಿನೆಟ್​ನಲ್ಲಿ ಎಲ್ಲ ಭರವಸೆಗಳನ್ನು ಜಾರಿ ಮಾಡಲಾಗುವುದು ಎಂದು ಹೇಳಿದ್ದೆವು. ಕೊಟ್ಟ ಮಾತಿನಂತೆ ಮೊದಲ ಸಂಪುಟದಲ್ಲೇ ಭರವಸೆಗಳನ್ನು ಈಡೇರಿಸಲಾಗುವುದು. ನಾವು ಅವುಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಪುನರುಚ್ಚರಿಸಿದರು.

ಕರ್ನಾಕದ ಜನರಿಗೆ ಧನ್ಯವಾದ: ರಾಜ್ಯದಲ್ಲಿ ಜನರು ಕಾಂಗ್ರೆಸ್​ ಪಕ್ಷಕ್ಕೆ ನಿಚ್ಚಳ ಬಹುಮತ ನೀಡಿದ್ದಕ್ಕೆ ಧನ್ಯವಾದಗಳು. ಚುನಾವಣೆಗಾಗಿ ದುಡಿದ ಎಲ್ಲ ಕಾರ್ಯಕರ್ತರು, ನಾಯಕರು, ಜನರಿಗೂ ಧನ್ಯವಾದಗಳು. ನಿಮ್ಮೆಲ್ಲರ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ರಾಜ್ಯದಲ್ಲಿ ಪ್ರೀತಿಯ ಆರಂಭವಾಗಿದೆ. ದ್ವೇಷ ಮುಗಿದಿದೆ ಎಂದು ರಾಹುಲ್​ ಗಾಂಧಿ ಹೇಳಿದರು.

ಓದಿ: ಮರುಕಳಿಸಿದ ಇತಿಹಾಸ: ಆಡಳಿತ ಪಕ್ಷಕ್ಕೆ ಸೋಲು, 1999ರ ನಂತರ ಕಾಂಗ್ರೆಸ್​ಗೆ ಹೆಚ್ಚು ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.