ಬೆಂಗಳೂರು: ವೀರ ಮದಕರಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ನಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟಿ ರಾಗಿಣಿ ದ್ವಿವೇದಿ, ಸದ್ಯ ಕೊರೊನಾ ಸಂದರ್ಭದಲ್ಲಿ ಕಳೆದ ಒಂದು ತಿಂಗಳಿಂದ ಕೂಲಿ ಕಾರ್ಮಿಕರಿಗೆ, ಭಿಕ್ಷುಕರಿಗೆ ಊಟ ನೀಡುತ್ತಾ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ
ಇಂದು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ರಾಗಿಣಿ ಹುಟ್ಟು ಹಾಕಿರುವ ಜಿನೆಕ್ಟ್ ಚಾರಿಟೇಬಲ್ ಟ್ರಸ್ಟ್ನಿಂದ 150 ಮಾವಿನ ಸಸಿಗಳನ್ನ ನೆಡುವ ಕೆಲಸಕ್ಕೆ ಕೈ ಹಾಕಿದ್ದಾರೆ.
ವಿಶ್ವ ಪರಿಸರ ದಿನವಾದ ಇಂದು ಕೋಡಿಗೆಹಳ್ಳಿಯ ರಸ್ತೆ ಬದಿ ಹಾಗೂ ಮರಗಳು ಇಲ್ಲದ ಖಾಲಿ ಜಾಗದಲ್ಲಿ ರಾಗಿಣಿ ದ್ವಿವೇದಿ ಮಾವಿನ ಸಸಿಗಳನ್ನ ನೆಟ್ಟಿದ್ದಾರೆ.
ಇಂದು ಹತ್ತಕ್ಕೂ ಹೆಚ್ಚು ಮಾವಿನ ಗಿಡಗಳನ್ನ ನೆಟ್ಟಿದ್ದು, ಮುಂದಿನ ದಿನಗಳಲ್ಲಿ ನಾವು ಅಂದುಕೊಂಡಿರುವ 140 ಸಸಿಗಳನ್ನ ನೆಡುವ ಕೆಲಸಕ್ಕೆ ಮುಂದಾಗುತ್ತೇವೆ. ಹಾಗೇ ಇಂದಿನ ಈ ಕಾಲಘಟ್ಟದಲ್ಲಿ ನಾವೆಲ್ಲರೂ ಪರಿಸರ ರಕ್ಷಣೆ, ಸ್ವಚ್ಛತೆ, ಮರಗಿಡ ಹಾಗೂ ಕಾಡುಪ್ರಾಣಿಗಳ ರಕ್ಷಣೆ ಮಾಡಬೇಕಿದೆ ಎಂದು ರಾಗಿಣಿ ದ್ವಿವೇದಿ ಹೇಳಿದ್ದಾರೆ.