ETV Bharat / state

ನನ್ನ ವಿರುದ್ಧ ಮಾಡಿದ ಆರೋಪದ ಬಗ್ಗೆ ಡಿ.ರೂಪಾ ದಾಖಲೆ ಬಿಡುಗಡೆ ಮಾಡಲಿ: ರಾಘವೇಂದ್ರ ಶೆಟ್ಟಿ

ನಾನು ಡಿ. ರೂಪಾ ವಿರುದ್ಧದ ದಾಖಲೆ ಬಿಡುಗಡೆ ಮಾಡಬಹುದೆಂಬ ಭಯದಿಂದ ಮಾಧ್ಯಮಗಳ ಮುಂದೆ ಮೊದಲೇ ಹೋಗಿದ್ದಾರೆ ಎಂದು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಆರೋಪಿಸಿದ್ದಾರೆ.

Raghavendra Shetty reaction on allegations made by IPS officer D roopa
ಬೇಳೂರು ರಾಘವೇಂದ್ರ ಶೆಟ್ಟಿ
author img

By

Published : Jun 2, 2022, 3:37 PM IST

Updated : Jun 2, 2022, 4:09 PM IST

ಬೆಂಗಳೂರು: ಐಪಿಎಸ್​​ ಆಧಿಕಾರಿ ಡಿ. ರೂಪಾ ನನ್ನ ಮೇಲೆ ಐದು ಕೋಟಿ ರೂ. ಅವ್ಯವಹಾರ ಆರೋಪ ಮಾಡಿದ್ದಾರೆ. ಅವರ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಸವಾಲು ಹಾಕಿದ್ದಾರೆ.

ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಭೇಟಿಯಾಗಿ ನಿಗಮದ ಎಂಡಿ ರೂಪಾ ಮೌದ್ಗಿಲ್ ವಿರುದ್ಧದ ದೂರಿನ ಸಂಬಂಧ ಹೆಚ್ಚುವರಿ ದಾಖಲೆಗಳನ್ನು ನೀಡಲು ಆಗಮಿಸಿದ ಅವರು, ನನ್ನ ವಿರುದ್ಧ ಒಂದೇ ಒಂದು ದಾಖಲೆ ಇದ್ದರೂ ಅವರು ಬಿಡುಗಡೆ ಮಾಡಲಿ. ನಿಗಮದ ಮಾಜಿ ಎಂಡಿ ಕಿಶೋರ್ ಕುಮಾರ್ ಯಾರು ಅಂತಾನೇ ನನಗೆ ಗೊತ್ತಿಲ್ಲ.

ಮಹಿಳಾ ಸಿಬ್ಬಂದಿ ಕೇಳಿದ್ದೇನೆ ಅಂತ ಆರೋಪಿಸಿದ್ದಾರೆ. ನನ್ನ ಕಚೇರಿಗೆ ಟೈಪಿಸ್ಟ್ ಒಬ್ಬರು ಬೇಕಾಗಿತ್ತು. ಟೈಪಿಸ್ಟ್ ನೇಮಕ‌ ಮಾಡುವಂತೆ ಕೇಳಿದ್ದೆ, ಇದು ತಪ್ಪಾ?. ಮಹಿಳೆಯರಿಗೆ ಉದ್ಯೋಗ ಕೊಡೋದೇ ತಪ್ಪಾ?. ಇದರ‌ ಬಗ್ಗೆಯೂ ಇಷ್ಟು ಕೀಳಾಗಿ ಮಾತಾಡಿರೋದು ಎಷ್ಟು ಸರಿ? ಎಂದು ಕಿಡಿಕಾರಿದರು‌.

75 ನೋಟಿಸ್ ನೀಡಿದ್ದೇನೆ: ನಿಗಮದ ಮಳಿಗೆಗಳಲ್ಲಿ ಬೆಲೆ ಬಾಳುವ ವಸ್ತುಗಳನ್ನು ನಾನು ತೆಗೆದುಕೊಂಡು ಹೋಗಿಲ್ಲ. ಇನ್ನೂ ಐದಾರು ವಸ್ತುಗಳನ್ನು ಖರೀದಿ ಮಾಡಿದ್ದೇನೆ. ಅದಕ್ಕೆ ಬೇಕಾದ ಸ್ಲಿಪ್​ಗಳೂ ನನ್ನ ಬಳಿ ಇವೆ. ಅವ್ಯವಹಾರದ ಸಂಬಂಧ ನಾನು ಒಂದೂವರೆ ವರ್ಷದ ಹಿಂದೆಯೇ ಇವರಿಗೆ ನೋಟಿಸ್ ಕೊಟ್ಟಿದ್ದೇನೆ. ಇದೂವರೆಗೂ 75 ನೋಟಿಸ್ ನೀಡಿದ್ದೇನೆ.

ಬೇಳೂರು ರಾಘವೇಂದ್ರ ಶೆಟ್ಟಿ ಪ್ರತಿಕ್ರಿಯೆ

ಈಗ ನನ್ನ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ನಾನು ಅವರ ವಿರುದ್ಧದ ದಾಖಲೆ ಬಿಡುಗಡೆ ಮಾಡಬಹುದು ಎಂಬ ಭಯದಿಂದ ಮಾಧ್ಯಮಗಳ ಮುಂದೆ ಮೊದಲೇ ಹೋಗಿದ್ದಾರೆ. 24 ಕೋಟಿ ಹಗರಣ ನನ್ನ ಅವಧಿಯಲ್ಲಿ ಆಗಿಲ್ಲ. ಎಲ್ಲ ಮಾಹಿತಿಯನ್ನು ಸಿಎಂ ಹಾಗೂ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದೇನೆ ಎಂದರು.

ಕಡತ ತಿರುಚುವ ಹುನ್ನಾರ: ಮುಖ್ಯ ಕಾರ್ಯದರ್ಶಿಗೆ 6 ಕೋಟಿ ಅವ್ಯವಹಾರದ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರಾದ ಡಿ. ರೂಪಾ ವಿರುದ್ಧ ದೂರು ಕೊಟ್ಟ ಮೇಲೆ ಒಂದೂವರೆ ವರ್ಷದಿಂದ ಆಫೀಸ್‌ಗೆ ವಾರಕ್ಕೆ ಎರಡು ದಿನ ಬಂದರೂ, ಎರಡು ಗಂಟೆ ಮಾತ್ರ ಕೆಲಸ ಮಾಡಿದ್ದಾರೆ. ದೂರು ಕೊಟ್ಟ ನಂತರ ಎರಡು ದಿನದಿಂದ ಬೆಳಗ್ಗೆಯಿಂದ ಸಂಜೆಯವರೆಗೂ ಆಫೀಸ್‌ನಲ್ಲಿದ್ದು, ಕಡತಗಳನ್ನು ತಿರುಚುವ ಹುನ್ನಾರವನ್ನು ಸಿಬ್ಬಂದಿ ಬಳಸಿಕೊಂಡು ಮಾಡುತ್ತಿದ್ದಾರೆ. ಮತ್ತು ಎರಡು ದಿನದಿಂದ ಅಧ್ಯಕ್ಷರ ಕಚೇರಿಯ ಒಳಗಡೆ ಇರುವ ಸಿಸಿ ಕ್ಯಾಮೆರಾ ಸಂಪರ್ಕ ಕಡಿತ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ನಿಗಮಕ್ಕೆ ಕೋಟಿಗೂ ಹೆಚ್ಚು ಹೊರೆ: ಎಂಡಿ ಒಂದು ಹೊಸ ಇನ್ನೋವಾ ಕ್ರಿಸ್ತಾ ಅವರ ಉಪಯೋಗಕ್ಕೆ, ಇನ್ನೊಂದು ಇನ್ನೋವಾ ಅವರ ಮನೆಯ ಬಳಕೆಗೆ, ಸನ್ನಿನಿಸಾನ್ ಮತ್ತು ಒಂದು ದ್ವಿಚಕ್ರವಾಹನಗಳನ್ನು ಮನೆ ಬಳಕೆಗೆ ಉಪಯೋಗಿಸಿ ನಿಗಮಕ್ಕೆ ಹೊರೆ ಮಾಡಿರುತ್ತಾರೆ ಎಂದು ದೂರು ನೀಡಿದ್ದಾರೆ. ಟಿಎ - ಡಿಎ ಮತ್ತು ಇವರ ವೈಯಕ್ತಿಕ ಕೆಲಸಕ್ಕೆ ಹೋಗುವುದಕ್ಕೆ ವಿಮಾನದ ವೆಚ್ಚ, ಹೋಟೆಲ್‌ನಲ್ಲಿ ಉಳಿದುಕೊಳ್ಳುವ ವೆಚ್ಚ ಮತ್ತು ಆಫೀಸಿನ ಸಿಬ್ಬಂದಿಯ ಲೆಕ್ಕ ತೋರಿಸಿ ಮನೆ ಕೆಲಸಕ್ಕಾಗಿ ನಿರ್ಮಿಸಿಕೊಂಡು ಮತ್ತು ಮೂರು ಡ್ರೈವರ್‌ಗಳನ್ನು ನೇಮಕ ಮಾಡಿಕೊಂಡು ಸುಮಾರು ಒಂದು ಕಾಲು ಕೋಟಿಗೂ ಹೆಚ್ಚು ನಿಗಮಕ್ಕೆ ಹೊರೆ ಮಾಡಿರುವುದಕ್ಕೆ ನಿಗಮದಲ್ಲಿ ದಾಖಲೆಗಳು ಇವೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ರಾಘವೇಂದ್ರ ಶೆಟ್ಟಿ ಮನವಿ ಮಾಡಿದ್ದಾರೆ.

ತಪ್ಪು ಮಾಹಿತಿ ನೀಡಿ ಹಣ ಖರ್ಚು: ಶೋರೂಂಗಳಲ್ಲಿ ಅವರ ಹೊರ ದೇಶದ ಸ್ನೇಹಿತರು ಮತ್ತು ಬೆಂಗಳೂರಿನ ಸ್ನೇಹಿತರಿಗೆ ನಿಗಮದಲ್ಲಿ ಶೇ. 30ರಷ್ಟು ಡಿಸ್ಕೌಂಟ್ ಕೊಟ್ಟು, ಬೋರ್ಡ್‌ಗೆ ಹೊರೆಯಾಗಿಸಿದ್ದಾರೆ. 5 ಲಕ್ಷಕ್ಕೆ ಮಿತಿಗೊಳಿಸಿ, ಕೆಟಿಪಿಪಿ ನಿಯಮಗಳನ್ನು ಪಾಲಿಸದೇ ತುಂಡು ಗುತ್ತಿಗೆ ನೀಡಿ, ಬೋರ್ಡ್‌ ನಿರ್ದೇಶಕರ ಮತ್ತು ಬೋರ್ಡ್ ಗಮನಕ್ಕೆ ತರದೇ ಬಿಲ್‌ಗಳನ್ನು ನೀಡಿರುತ್ತಾರೆ. ಕೇಂದ್ರ ಸರ್ಕಾರದಿಂದ 75 ಲಕ್ಷ ರೂ. ಅನುದಾನ ಬರುತ್ತದೆ ಎಂದು ತಪ್ಪು ಮಾಹಿತಿ ನೀಡಿ, 58 ಲಕ್ಷಗಳನ್ನು ನಿಗಮದ ಹಣವನ್ನು ಹೈದರಾಬಾದ್ ಶೋರೂಂ ಉದ್ಘಾಟನೆಗೆಂದು ಖರ್ಚು ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ರೂಪಾ ವಿರುದ್ಧ ದೂರು ನೀಡಿದ ನಂತರ ಮೇಲಿಂದ ಮೇಲೆ ಕಡತಗಳನ್ನು ತರಸಿಕೊಂಡು ಕಡತಗಳನ್ನು ತಿದ್ದುಪಡಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ತಕ್ಷಣ ಸಂಬಂಧಿತ ಕಡತಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾಗೆ ರಾಘವೇಂದ್ರ ಮನವಿ ಮಾಡಿದ್ದಾರೆ.

ಪಿಎಸ್ಐ ಅಕ್ರಮದಲ್ಲಿ ಬೇಳೂರು ಪಾತ್ರದ ಆರೋಪ ವಿಚಾರವಾಗಿ ಮಾತನಾಡಿದ ಅವರು, ಶ್ರೀಕಾಂತ್ ಎಂಬ ಪಿಎ ಬಳಿ ಇದ್ದಿದ್ದು ನಿಜ. ಅವನ ಮೇಲೆ ಆರೋಪ ಬಂದ ನಂತರ ಅವನನ್ನು ಕೆಲಸದಿಂದ ವಜಾ ಮಾಡಿದ್ದೆ. ಈಗ ಅವನನ್ನು ತನಿಖೆಗೆ ಒಳಪಡಿಸಿದಾಗ ಇದರಲ್ಲಿ ಭಾಗಿಯಾಗಲ್ಲ ಎಂಬುದು ಗೊತ್ತಾಗಿದೆ. ಪೊಲೀಸರು ಅವನನ್ನು ಬಿಟ್ಟು ಕಳುಹಿಸಿದ್ದಾರೆ. ಆದರೆ, ರೂಪಾ ಏನು ಇಲ್ಲ ಅಂತಾ ನನ್ನ ಮೇಲೆ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಇದು ಅವರಿಗೆ ನಿಜಕ್ಕೂ ಕೂಡ ಶೋಭೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಕರಕುಶಲ ಅಭಿವೃದ್ಧಿ‌ ನಿಗಮ ಅಧ್ಯಕ್ಷರಿಂದ ಅಧಿಕಾರ ದುರ್ಬಳಕೆ ಆರೋಪ: ಐಪಿಎಸ್ ಅಧಿಕಾರಿ ಡಿ.ರೂಪಾ ದೂರು

Last Updated : Jun 2, 2022, 4:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.