ETV Bharat / state

ವೀರೇಶ್ ಚಿತ್ರಮಂದಿರದಲ್ಲಿ ಜೇಮ್ಸ್​​ ಸಿನಿಮಾ ವೀಕ್ಷಿಸಿದ ರಾಘಣ್ಣ, ಮುರಳಿ.. ಪಟಾಕಿ ಸಿಡಿಸಿ ಫ್ಯಾನ್ಸ್​ ಸಂಭ್ರಮ - ದೇಶಾದ್ಯಂತ ಜೇಮ್ಸ್​​ ಸಿನಿಮಾ ಬಿಡುಗಡೆ

ಪುನೀತ್​ ರಾಜ್​ ಕುಮಾರ್ ಅಭಿನಯದ ಜೇಮ್ಸ್​ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಇಂದು ರಾಘವೇಂದ್ರ ರಾಜ್​ ಕುಮಾರ್ ಕುಟುಂಬ​ ಮತ್ತು ಮುರಳಿ ವೀರೇಶ್ ಥಿಯೇಟರ್​​ನಲ್ಲಿ ಸಿನಿಮಾ ವೀಕ್ಷಿಸಿದರು.

Raghavendra Rajkumar and Sri murali watched James movie in Veeresh theater
ವೀರೇಶ್ ಚಿತ್ರಮಂದಿರದಲ್ಲಿ ಜೇಮ್ಸ್​​ ಸಿನಿಮಾ ವೀಕ್ಷಿಸಿದ ರಾಘಣ್ಣ, ಮುರುಳಿ
author img

By

Published : Mar 17, 2022, 9:37 AM IST

ಬೆಂಗಳೂರು: ಇಂದಿನಿಂದ ವಿಶ್ವದಾದ್ಯಂತ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಜೇಮ್ಸ್ ಸಿನಿಮಾ ಆರ್ಭಟ ಶುರುವಾಗಿದೆ. ನಗರದ ವೀರೇಶ್ ಥಿಯೇಟರ್​​ನಲ್ಲಿ ಚಿತ್ರದ ಬಿಡುಗಡೆ ಸಂಭ್ರಮ ಜೋರಾಗಿದೆ.

ವೀರೇಶ್ ಚಿತ್ರಮಂದಿರದಲ್ಲಿ ಜೇಮ್ಸ್​​ ಸಿನಿಮಾ ವೀಕ್ಷಿಸಿದ ರಾಘಣ್ಣ, ಮುರುಳಿ

ವೀರೇಶ್ ಥಿಯೇಟರ್​​ನಲ್ಲಿ ಅಪ್ಪು ನಟನೆಯ 30 ಸಿನಿಮಾಗಳ ಕಟೌಟ್ಸ್​ಗಳನ್ನು ನಿರ್ಮಿಸಿ ಕ್ರೇನ್ ಮೂಲಕ ಹೂವಿನ‌ ಹಾರ ಹಾಕಿ ಸಿಂಗಾರ ಮಾಡಲಾಗಿದ್ದು, ಅಭಿಮಾನಿಗಳು ಜೈಕಾರ ಕೂಗಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಇನ್ನು ವೀರೇಶ್ ಚಿತ್ರಮಂದಿರಕ್ಕೆ ದೊಡ್ಮನೆ ರಾಘವೇಂದ್ರ ರಾಜ್​​ಕುಮಾರ್ ಕುಟುಂಬಸ್ಥರು ಹಾಗೂ ನಟ ಶ್ರೀಮುರಳಿ ಆಗಮಿಸಿ ಸಿನಿಮಾ ವೀಕ್ಷಿಸಿದರು. ಥಿಯೇಟರ್ ಅಂಗಳದಲ್ಲಿ ಅಭಿಮಾನಿಗಳು ದೇವಸ್ಥಾನ ‌ಮಾದರಿಯ ಸೆಟ್ ಹಾಕಿದ್ದಾರೆ. ವೀರೇಶ್ ಥಿಯೇಟರ್​​ನಲ್ಲಿ ಇವತ್ತಿನ 6 ಶೋಗಳು ಹೌಸ್ ಫುಲ್ ಆಗಿವೆ.

ಇದನ್ನೂ ಓದಿ: ರಾಮನಗರ ಚಿತ್ರಮಂದಿರದಲ್ಲಿ 'ಜೇಮ್ಸ್' ಚಿತ್ರ ವೀಕ್ಷಿಸಿದ ಅಪ್ಪು ಅಭಿಮಾನಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.