ಬೆಂಗಳೂರು : 'ಆರ್.ಹೆಚ್ 100' ಎಂಬ ವಿಭಿನ್ನ ಹೆಸರಿಟ್ಟುಕೊಂಡು ಹೊಸ ಸಿನಿಮಾ ತಂಡ ಬರ್ತಿದ್ದು, ಕನ್ನಡ ಚಿತ್ರರಂಗ ಬಾಲಿವುಡ್ ಇಂಡಸ್ಟ್ರಿಯ ದಾಖಲೆ ಮುರಿಯುವ ಮಾತುಗಳು ಕೇಳಿ ಬರ್ತಿವೆ.
ಕಿರುತೆರೆಯಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ಮಹೇಶ್ ಹಾಗು ಇಂಜಿನಿಯರಿಂಗ್ ಓದಿರುವ ಯುವ ನಟ ಗಣೇಶ್, ನಟಿ ಕಾವ್ಯ ಹಾಗೂ ವಕೀಲ ವೃತ್ತಿ ಮಾಡುತ್ತಿರುವ ನಿರ್ಮಾಪಕರು, 'ಆರ್.ಹೆಚ್ 100' ಎಂಬ ಹಾರರ್ ಸಿನಿಮಾ ಮಾಡಿದ್ದಾರೆ. ಆರು ಜನ ಜರ್ನಲಿಸಂ ವಿದ್ಯಾರ್ಥಿಗಳು ರಿಸರ್ಚ್ ಮಾಡೋದಕ್ಕೆ ದಟ್ಟ ಕಾಡಿಗೆ ಹೋದಾಗ, ಆ ಕಾಡಿನಲ್ಲಿ ಏನಾಗುತ್ತೆ? ಅನ್ನೋದು ಆರ್.ಹೆಚ್ 100 ಸಿನಿಮಾದ ಕಥೆಯ ತಿರುಳು.
ಆರು ಜನ ಹುಡುಗರ ಪೈಕಿ, ಗಣೇಶ್ ಸಂಶೋಧಕನ ಪಾತ್ರ ಮಾಡಿದ್ರೆ, ವಕೀಲ ವೃತ್ತಿ ಮಾಡುತ್ತಿರುವ ಹರೀಶ್ ಕುಮಾರ್, ಸೋಮಶೇಖರ್ ಸ್ನೇಹಿತನ ಪಾತ್ರ ಮಾಡಿದ್ದಾರೆ. ಚಿತ್ರ ಮತ್ತು ಕಾವ್ಯ ಎಂಬಿಬ್ಬರು ಬಬ್ಲಿ ಕ್ಯಾರೆಕ್ಟರ್ ಮಾಡಿದ್ದಾರೆ. ಕೊಡಚಾದ್ರಿ, ಬೆಂಗಳೂರು, ನಂದಿ ಬೆಟ್ಟದಲ್ಲಿ ಫಿಲಂ ಶೂಟ್ ಮಾಡಲಾಗಿದೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು, ಮೆಲ್ವಿನ್ ಮೈಕಲ್ ಸಂಗೀತ ನೀಡಿದ್ದಾರೆ. ಕೃಷ್ಣ ಕ್ಯಾಮರಾ ವರ್ಕ್ ಮಾಡಿದ್ದಾರೆ. ಹಾರರ್ ಜೊತೆಗೆ ಸೋಶಿಯಲ್ ಮೆಸೇಜ್ ಹೊಂದಿರುವ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.