ಬೆಂಗಳೂರು: ದೇವೇಗೌಡರು ಪ್ರಧಾನಿ ಆಗಿದ್ದು ಹೇಗೆ?, ಕಾಂಗ್ರೆಸ್ ಬೆಂಬಲದಿಂದ ಅನ್ನೋದನ್ನು ಅವರು ಅರಿತುಕೊಳ್ಳಲಿ ಎಂದು ಮಾಜಿ ಸಚಿವ ಆರ್.ಬಿ. ತಿಮ್ಮಾಪುರ ತಿಳಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿವಾಸದ ಮುಂಭಾಗ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, 'ಕುಮಾರಸ್ವಾಮಿ ಸಿಎಂ ಆಗಿದ್ದು ಕಾಂಗ್ರೆಸ್ ಬೆಂಬಲದಿಂದ. ಆದರೆ, ಈಗ ವ್ಯತಿರಿಕ್ತವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ಸಖ್ಯ ಮಾಡಿ ನಿಮಗೆ ಹೊರಗೆ ಹೋಗುವುದು, ಒಳಗೆ ಬರುವುದು ರೂಢಿ ಆಗಿದೆ. ಬಿಜೆಪಿ ಜತೆ ಹೋಗಿ ಏನೆಲ್ಲ ಆಯಿತು ಅನ್ನೋದನ್ನ ಹೇಳಲಿ' ಎಂದರು.
ಓದಿ: ಕಾಂಗ್ರೆಸ್ ನಾಯಕರ ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ ಸಿದ್ದರಾಮಯ್ಯ
'ನನಗೆ ಎಐಸಿಸಿಯವರು ಬಂದರು ಹಾಗೂ ಒಳನಾಡು ಜಲಸಾರಿಗೆ ಖಾತೆ ಕೊಟ್ಟಿದ್ದರು. ಆದ್ರೆ, ಅದನ್ನು ರೇವಣ್ಣ ಯಾಕೆ ಇಟ್ಟುಕೊಂಡ್ರು?, ಪಂಚತಾರಾ ಹೋಟೆಲ್ನಲ್ಲಿ ಕುಳಿತು ರಾಜಕಾರಣ ಮಾಡುವವರು ನಮ್ಮ ಮಾಜಿ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುವುದು ಬೇಡ' ಎಂದು ತಿಮ್ಮಾಪುರ ಎಚ್ಚರಿಸಿದರು.