ಬೆಂಗಳೂರು: ಭಾರತದ ಎಲ್ಲ ಬ್ರಾಹ್ಮಣರು ಒಂದೇ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕದ ಬ್ರಾಹ್ಮಣರು ಎಂದು ವಿಂಗಡಣೆ ಮಾಡುತ್ತ, ನೀವು ಬ್ರಿಟೀಷರ ಹಾಗೆ ಒಡೆದು ಆಳುವ ನೀತಿ ಅನುಸರಿಸುತ್ತಿದ್ದೀರಿ ಎಂದು ಕಂದಾಯ ಸಚಿವ ಆರ್.ಅಶೋಕ್ ಟೀಕಿಸಿದ್ದಾರೆ.
ಕುಮಾರಸ್ವಾಮಿ ಹೇಳಿಕೆಯ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಅವರು, ರಾಷ್ಟ್ರಕ್ಕೆ, ರಾಜ್ಯಕ್ಕೆ ಎಲ್ಲರಂತೆ ಬ್ರಾಹ್ಮಣ ಸಮಾಜದ ಕೊಡುಗೆ ಸಾಕಷ್ಟಿದೆ. ಸ್ವಭಾವತಃ ಸಾಧುಗಳಾದ ಬ್ರಾಹ್ಮಣರ ಮೇಲೆ ಮಾತನಾಡಿ ಆ ಸಮಾಜಕ್ಕೆ ನೋವುಂಟು ಮಾಡಿದ್ದಕ್ಕಾಗಿ ನೀವು ತಕ್ಷಣ ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ಗೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವುದನ್ನು ತಿಳಿದು ಅಸಹಾಯಕತೆ ಹಾಗೂ ಹತಾಶೆಯಿಂದ ಮಾತನಾಡುತ್ತಿದ್ದಾರೆ ಅನಿಸುತ್ತದೆ ಎಂದು ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ.
-
ರಾಷ್ಟ್ರಕ್ಕೆ, ರಾಜ್ಯಕ್ಕೆ ಎಲ್ಲರಂತೆ ಬ್ರಾಹ್ಮಣ ಸಮಾಜದ ಕೊಡುಗೆಯು ಸಾಕಷ್ಟಿದೆ. ಸ್ವಭಾವತಃ ಸಾಧುಗಳಾದ ಬ್ರಾಹ್ಮಣರ ಮೇಲೆ ಮಾತನಾಡಿ, ಆ ಸಮಾಜಕ್ಕೆ ನೋವುಂಟುಮಾಡಿದ್ದಕ್ಕಾಗಿ ನೀವು ತಕ್ಷಣ ಕ್ಷಮೆ ಕೇಳಲೇಬೇಕು. (2/2)
— R. Ashoka (ಆರ್. ಅಶೋಕ) (@RAshokaBJP) February 7, 2023 " class="align-text-top noRightClick twitterSection" data="
">ರಾಷ್ಟ್ರಕ್ಕೆ, ರಾಜ್ಯಕ್ಕೆ ಎಲ್ಲರಂತೆ ಬ್ರಾಹ್ಮಣ ಸಮಾಜದ ಕೊಡುಗೆಯು ಸಾಕಷ್ಟಿದೆ. ಸ್ವಭಾವತಃ ಸಾಧುಗಳಾದ ಬ್ರಾಹ್ಮಣರ ಮೇಲೆ ಮಾತನಾಡಿ, ಆ ಸಮಾಜಕ್ಕೆ ನೋವುಂಟುಮಾಡಿದ್ದಕ್ಕಾಗಿ ನೀವು ತಕ್ಷಣ ಕ್ಷಮೆ ಕೇಳಲೇಬೇಕು. (2/2)
— R. Ashoka (ಆರ್. ಅಶೋಕ) (@RAshokaBJP) February 7, 2023ರಾಷ್ಟ್ರಕ್ಕೆ, ರಾಜ್ಯಕ್ಕೆ ಎಲ್ಲರಂತೆ ಬ್ರಾಹ್ಮಣ ಸಮಾಜದ ಕೊಡುಗೆಯು ಸಾಕಷ್ಟಿದೆ. ಸ್ವಭಾವತಃ ಸಾಧುಗಳಾದ ಬ್ರಾಹ್ಮಣರ ಮೇಲೆ ಮಾತನಾಡಿ, ಆ ಸಮಾಜಕ್ಕೆ ನೋವುಂಟುಮಾಡಿದ್ದಕ್ಕಾಗಿ ನೀವು ತಕ್ಷಣ ಕ್ಷಮೆ ಕೇಳಲೇಬೇಕು. (2/2)
— R. Ashoka (ಆರ್. ಅಶೋಕ) (@RAshokaBJP) February 7, 2023
ಸಚಿವ ಗೋವಿಂದ ಕಾರಜೋಳ ಕೂಡ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ. ಒಬ್ಬರಾದ ಮೇಲೊಬ್ಬರಂತೆ ಜೆಡಿಎಸ್ ಶಾಸಕರು ಪಕ್ಷ ತೊರೆಯುತ್ತಿರುವುದರಿಂದ ಹತಾಶರಾಗಿರುವ ಕುಮಾರಸ್ವಾಮಿಯವರು, ಬ್ರಾಹ್ಮಣ ನಿಂದನೆಯನ್ನು ಜಾತ್ಯತೀತ ಮನೋಭಾವ ಎಂದು ಭಾವಿಸಿರುವಂತಿದೆ. ಪ್ರಹ್ಲಾದ್ ಜೋಶಿಯವರು ಬಿಜೆಪಿಯ ಹಿರಿಯ ಗೌರವಾನ್ವಿತ ನಾಯಕರು. ಒಂದು ಜಾತಿಯನ್ನು ಪ್ರತಿನಿಧಿಸುವ ನಾಯಕರು ಅವರಲ್ಲ. ಸಂಕುಚಿತ ಭಾವನೆ ಅಥವಾ ಕುತ್ಸಿತ ಮನಸ್ಥಿತಿಯ ರಾಜಕೀಯ ಮಾಡುವ ವ್ಯಕ್ತಿತ್ವ ಅವರದಲ್ಲ ಎಂದಿದ್ದಾರೆ. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವ ಬಿಜೆಪಿಯ ಮನೋಭಾವದೊಂದಿಗೆ ಹಾಸುಹೊಕ್ಕಾಗಿರುವ ಹಿರಿಯ ನಾಯಕರನ್ನು ಜಾತಿಯ ಹೆಸರು ಹೇಳಿ ನಿಂದನೆ ಮಾಡಿರುವುದು ಕುಮಾರಸ್ವಾಮಿಯವರ ಘನತೆಗೆ ಶೋಭೆಯಲ್ಲ ಎಂದು ಹೇಳಿದ್ದಾರೆ.
ಸಚಿವ ಅಶ್ಚತ್ಥ್ ನಾರಾಯಣ್ ಅವರು ಹೆಚ್‌ಡಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ, ಜಾತಿ ವಿರುದ್ಧ ಕೊಟ್ಟ ಹೇಳಿಕೆಯನ್ನು ಖಂಡಿಸುತ್ತೇವೆ. ಅವರು ಕ್ಷಮೆ ಯಾಚಿಸುವುದು ಸೂಕ್ತ. ನಮ್ಮದು ಜಾತಿ ಮೀರಿದ ಪಕ್ಷ. ನಮ್ಮದು ಕನ್ನಡಿಗರ, ಭಾರತೀಯರ ಪಕ್ಷ. ಅವರು ಅಷ್ಟು ಕೀಳು ಮಟ್ಟಕ್ಕೆ ಹೋಗಿರುವುದು ನಿಜಕ್ಕೂ ಆಶ್ಚರ್ಯಕರ. ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಹೆಚ್‌ಡಿಕೆ ವಿವಾದಿತ ಹೇಳಿಕೆ: ಇತ್ತೀಚೆಗೆ ದಾಸರಹಳ್ಳಿ ಮತಕ್ಷೇತ್ರದಲ್ಲಿ ತಮ್ಮ ಪಕ್ಷದ ವತಿಯಿಂದ ನಡೆದ ಪಂಚರತ್ನ ರಥ ಯಾತ್ರೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕುಮಾರಸ್ವಾಮಿ, "ಪ್ರಹ್ಲಾದ್ ಜೋಶಿಯವರನ್ನು ಮುಂದಿನ ಸಿಎಂ ಮಾಡಲು ಆರ್ಎಸ್ಎಸ್ ನಿರ್ಧಾರ ಮಾಡಿದೆ. ಜೋಶಿಯವರನ್ನು ಸಿಎಂ ಮಾಡಿ 8 ಮಂದಿ ಉಪ ಮುಖ್ಯಮಂತ್ರಿ ಮಾಡುವ ಚರ್ಚೆ ನಡೆದಿದೆ. ಹೀಗಾಗಿ ನಮ್ಮ ಮೇಲೆ ಗದಾ ಪ್ರಹಾರ ಶುರು ಮಾಡಿದ್ದಾರೆ. ಅವರು ಶೃಂಗೇರಿ ಮಠ ಧ್ವಂಸ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ. ನಮ್ಮ ಭಾಗದ ಹಳೆ ಮೈಸೂರು ಭಾಗದ ಬ್ರಾಹ್ಮಣ ವರ್ಗಕ್ಕೆ ಸೇರಿದವರಲ್ಲ" ಎಂದು ವಾಗ್ದಾಳಿ ನಡೆಸಿದ್ದರು.
ಹೆಚ್‌ಡಿಕೆ ಸಮರ್ಥನೆ: ಈ ಬಗ್ಗೆ ಆಕ್ರೋಶ ವ್ಯಕ್ತವಾದ ಬಳಿಕ, ಮರಾಠಿ ಪೇಶ್ವೆಗಳ ಡಿಎನ್ಎ ಇರುವ ವ್ಯಕ್ತಿಯನ್ನು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು ಬಿಜೆಪಿ ಮತ್ತು ಆರ್ಎಸ್ಎಸ್ ಹೊರಟಿವೆ ಎಂದು ಹೇಳಿದ್ದೇನೆಯೇ ಹೊರತು ರಾಜ್ಯದ ಬ್ರಾಹ್ಮಣ ಸಮುದಾಯವನ್ನು ನಾನೆಲ್ಲೂ ನಿಂದಿಸಿಲ್ಲ ಎಂದು ಹೇಳುವ ಮೂಲಕ ತಮ್ಮ ಹೇಳಿಕೆಯನ್ನು ಹೆಚ್‌ಡಿಕೆ ಸಮರ್ಥಿಸಿಕೊಂಡಿದ್ದರು.