ETV Bharat / state

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ: ಸಿಎಂ ಜೊತೆ ಚರ್ಚಿಸಿ ನಿರ್ಧಾರವೆಂದ ಅಶೋಕ್

author img

By

Published : Aug 23, 2022, 5:36 PM IST

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಕೂರಿಸುವ ವಿಚಾರ ಕುರಿತು ನನಗೆ ಯಾವುದೇ ಮನವಿ ಪತ್ರ ಬಂದಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.

ಕಂದಾಯ ಸಚಿವ ಆರ್ ಅಶೋಕ್
ಕಂದಾಯ ಸಚಿವ ಆರ್ ಅಶೋಕ್

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಮುಖ್ಯಮಂತ್ರಿ ಜೊತೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬರುತ್ತೇವೆ. ಹಾಗಾಗಿ, ಯಾರೂ ಕಿಡಿ ಹೊತ್ತಿಸುವ ಕೆಲಸ ಮಾಡಬಾರದು ಎಂದು ಕಂದಾಯ ಸಚಿವ ಆರ್ ಅಶೋಕ್ ಮನವಿ ಮಾಡಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಕೂರಿಸುವ ವಿಚಾರ ಕುರಿತು ನನಗೆ ಯಾವುದೇ ಮನವಿ ಪತ್ರ ಬಂದಿಲ್ಲ. ಜಿಲ್ಲಾಧಿಕಾರಿಗಳಿಗೆ ಬಂದಿರಬಹುದು. ಕೆಲ ಮಾದ್ಯಮದಲ್ಲಿ ಬೇರೆ ರೀತಿ ಸುದ್ದಿ ಬರುತ್ತಿದೆ. ಇದುವರೆಗೂ ಯಾವುದೇ ಅನುಮತಿ ಕೊಟ್ಟಿಲ್ಲ. ಸರ್ಕಾರ ಯಾವುದೇ ತೀರ್ಮಾನ ಮಾಡಿಲ್ಲ. ಗಣಪತಿ ಹಬ್ಬದ ಬಗ್ಗೆ ಮತ್ತೊಂದು ಚರ್ಚೆಯಾಗಬೇಕಿದೆ ಎಂದರು.

ಚಾಮರಾಜಪೇಟೆ ಸರ್ವೆ ನಂ‌. 40 ರಲ್ಲಿ ಯಾವುದೇ ನಿರ್ಧಾರ ಮಾಡಿಲ್ಲ. ಗಣೇಶ ಹಬ್ಬ ಮಾಡಬೇಕಾ? ಬೇಡವಾ ಅನ್ನೋ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಅದುವರೆಗೂ ಯಾವುದೇ ಚರ್ಚೆ ಬೇಡ. ಯಾವುದೇ ಸಮುದಾಯದವರು ಕಿಡಿ ಹೊತ್ತಿಸುವ ಕೆಲಸ ಮಾಡಬಾರದು. ನಮ್ಮ ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳಲಿದೆ. ಸದ್ಯ ಈ ಬಗ್ಗೆ ಯಾರೂ ನನ್ನ ಭೇಟಿ ಮಾಡಿಲ್ಲ‌‌. ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಕಂದಾಯ ಸಚಿವ ಆರ್ ಅಶೋಕ್ ಅವರು ಮಾತನಾಡಿದರು

ಎಸಿಬಿ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಸರ್ಕಾರ ತನ್ನ ನಿಲುವನ್ನು ತಿಳಿಸಿದೆ. ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ಕೊಡಲು ನಮ್ಮ ಒಪ್ಪಿಗೆ ಇದೆ. ಅದಕ್ಕೆ ನಾವು ಬದ್ದರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.

ನಿಯಮ ಇದೆ: ಮಡಿಕೇರಿಯಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪ್ರತಿಭಟನೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಅಶೋಕ್, ಪ್ರತಿದಿನ ಸಿದ್ದರಾಮಯ್ಯ ಹಿಂದೂಗಳ ಅವಹೇಳನ ಮಾಡುತ್ತಾರೆ. ಮಾಂಸ ತಿನ್ನಬಾರದಾ.? ಸಂಜೆ ಹೋಗಬಾರದಾ ? ಅಂತ ಪ್ರಶ್ನೆ ಮಾಡ್ತಾರೆ. ಈ ರೀತಿಯ ಹೇಳಿಕೆಗಳನ್ನ ಕೊಟ್ಟು ಗೊಂದಲ ಸೃಷ್ಟಿಸಿದ್ದಾರೆ. ಅವರವರ ಆಹಾರ ಪದ್ಧತಿ ಇದೆ. ಅದಕ್ಕೆ ವಿರೋಧ ಇಲ್ಲ. ದೇವಸ್ಥಾನಕ್ಕೆ ಹೋಗಲು ಕೆಲ ನಿಯಮಗಳಿವೆ. ಅಡುಗೆ ಮನೆಯಲ್ಲಿ, ಬಚ್ಚಲ ಮನೆಯಲ್ಲಿ ಏನು ಮಾಡಬೇಕೋ ಅದನ್ನು ಅಲ್ಲಿ ಮಾಡಬಹುದು. ದೇವಸ್ಥಾನಕ್ಕೆ ಹೋಗಲು ಮಡಿ ಇರುತ್ತದೆ. ಮಾಂಸ ತಿನ್ನಬಾರದು ಅಂತ ನಿಯಮ ಇದೆ ಎಂದರು.

ಕಂದಾಯ ಸಚಿವ ಆರ್ ಅಶೋಕ್ ಅವರು ಮಾತನಾಡಿದರು

ಅವಹೇಳನ ಮಾಡ್ತಾರೆ: ಮುಸ್ಲಿಂ ಸಮುದಾಯದಲ್ಲೂ ಕೆಲ ಆಚರಣೆಗಳಿವೆ. ರಂಜಾನ್ ಬಂದಾಗ ಉಪವಾಸ ಇರ್ತಾರೆ. ಅದನ್ನು ಸಿದ್ದರಾಮಯ್ಯ ಯಾಕೆ ಪ್ರಶ್ನೆ ಮಾಡಲ್ಲ?. ಉಪವಾಸ ಮಾಡಬೇಡಿ, ತಿನ್ನಿ ಏನೂ ಆಗಲ್ಲ ಅಂತ ಹೇಳಲಿ. ಕ್ರಿಶ್ಚಿಯನ್ ಅವರದ್ದು ಗುಡ್ ಫ್ರೈಡೇ ಇದೆ. ಅವರಿಗೆ ಅದನ್ನು ಮಾಡಬೇಡಿ ಅಂತ ಹೇಳಲ್ಲ. ಹಿಂದೂ ಧರ್ಮದ ಬಗ್ಗೆ ಮಾತ್ರ ಅವಹೇಳನ ಮಾಡ್ತಾರೆ. ಹಿಂದೂಗಳಿಗೆ ಮಾತ್ರ ಯಾಕೆ ಹೇಳ್ತೀರಾ? ಎಂದು ಕಿಡಿಕಾರಿದರು.

ಡೋಂಗಿತನ ಬಿಡಬೇಕು: ಕೊಡಗಿನಲ್ಲಿ ಟಿಪ್ಪು ಜಯಂತಿ ಮಾಡಿದಿರಿ. ಅದರಿಂದ ಸಾವು ಕೂಡ ಆಯ್ತು. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಹಾಕ್ತೀರಾ ಅಂತೀರಾ.? ಅವರಿಗೆ ಮುಸ್ಲಿಂ ವೋಟ್ ಬ್ಯಾಂಕ್ ಒಂದೇ ಕಾಣೋದು. ಸಾವರ್ಕರ್ ಅಷ್ಟೇ ಅವರಿಗೆ ಕಾಣೋದು. ಸಾವರ್ಕರ್ ಬ್ರಿಟಿಷ್ ಪರವಾಗಿದ್ದರೆ 50 ವರ್ಷ ಕರಿ ನೀರಿನ ಶಿಕ್ಷೆ ಯಾಕೆ ಅನುಭವಿಸಿದರು.? ನಿಮ್ಮ ನಾಯಕರಿಗೆ ಎಷ್ಟು ವರ್ಷ ಶಿಕ್ಷೆ, ಯಾವ ಶಿಕ್ಷೆ ಅನುಭವಿಸಿದ್ದಾರೆ.? ನೆಹರು 50 ವರ್ಷ ಜೈಲಿಗೆ ಹೋಗಿದ್ರಾ? ಟಿಪ್ಪುನ ವೈಭವೀಕರಿಸೋದು, ಸಾವರ್ಕರ್‌ನ ಅವಹೇಳನ ಮಾಡೋದು. ಈ ಡೋಂಗಿತನ ಬಿಡಬೇಕು. ಸಿದ್ದರಾಮಯ್ಯ ಮತ್ತು ಡಿಕೆಶಿ ಡೋಂಗಿತನ ಬಿಡಬೇಕು. ಟಿಪ್ಪು ಜಯಂತಿ ಎಲ್ಲಿ ಬೇಕೋ ಅಲ್ಲಿ ಮಾಡುತ್ತಿದ್ದರು. ಅದಕ್ಕೆ ಯಾರು ಹೋಗಬೇಕಿತ್ತೋ ಹೋಗ್ತಿದ್ರು. ಅದನ್ನು ವೈಭವೀಕರಿಸಲು ಹೋಗಿ ಟಿಪ್ಪುನೂ ವಿಲನ್ ಮಾಡಿದರು ಎಂದು ಟೀಕಿಸಿದರು.

ರ್ಯಾಲಿಗೆ ಅವಕಾಶ ಕೊಡಬಾರದು: ಕೊಡಗಿನಲ್ಲಿ 144 ಸೆಕ್ಷನ್ ಜಾರಿ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಅಶೋಕ್, ಕೊಡಗು ಒಂದು ಪ್ರವಾಸಿ ತಾಣ. ಇಲ್ಲಿ ಬಂದು ಗಲಾಟೆ ಆದರೆ ಪ್ರವಾಸ ಕುಸಿಯುತ್ತದೆ. ಜನಗಳು ಮತ್ತೆ ಬರೋದಿಲ್ಲ. ಇಲ್ಲಿ ಪ್ರವಾಸೋದ್ಯಮ ಕುಸಿಯುತ್ತದೆ ಅಂತ ಆತಂಕ ವ್ಯಕ್ತವಾಗಿತ್ತು. ಸ್ಥಳೀಯ ಸಂಘದವರು ಡಿಸಿಗೆ ಮನವಿ ಮಾಡಿದ್ರು. ಹಾಗಾಗಿ ಡಿಸಿ ಮತ್ತು ಪೊಲೀಸ್ ಇಲಾಖೆ ಯಾವುದೇ ರ್ಯಾಲಿಗೆ ಅವಕಾಶ ಕೊಡಬಾರದು ಅಂತ ನಿರ್ಧಾರ ಮಾಡಿದೆ ಎಂದು ಹೇಳಿದರು.

ಓದಿ: ಎಸಿಬಿ ರದ್ದು ತೀರ್ಪು ವಿರುದ್ಧ ಸುಪ್ರೀಂ ಕೋರ್ಟ್​ಗೆ​ ಮನವಿ ಸಲ್ಲಿಸಲ್ಲ.. ಸಿದ್ದರಾಮಯ್ಯ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.