ETV Bharat / state

ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಟಿಪ್ಪು ಯುಗ ಆರಂಭ: ಆರ್.ಅಶೋಕ್ ಆರೋಪ - ಮತಾಂತರ

ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಟಿಪ್ಪು ಯುಗ ಆರಂಭ - ಮತಾಂತರದಿಂದ ಕರ್ನಾಟಕ ಉಳಿಸಿ ಅಭಿಯಾನ - ಮಾಜಿ ಡಿಸಿಎಂ ಆರ್.ಅಶೋಕ್.

R Ashok lashed out at the state govt
ಆರ್​ ಅಶೋಕ್​ ಸುದ್ದಿಗೋಷ್ಠಿ
author img

By

Published : Jun 16, 2023, 2:34 PM IST

ಆರ್​ ಅಶೋಕ್​ ಸುದ್ದಿಗೋಷ್ಠಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದ ನಂತರ ಮತ್ತೆ ಕರ್ನಾಟಕದಲ್ಲಿ ಟಿಪ್ಪು ಯುಗ ಆರಂಭಿಸಲು ಶಂಕುಸ್ಥಾಪನೆ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಮತಾಂತರದ ಬ್ರಾಂಡ್ ಅಂಬಾಸಿಡರ್ ಆಗಲು ಹೊರಟಿದೆ. ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಮತಾಂತರದ ಬಗ್ಗೆ ಬರೆದಿದ್ದಾರೆ. ಆದರೂ ಅನೇಕರ ಓಲೈಕೆಗೆ ಇದನ್ನ ಮಾಡುತ್ತಿದ್ದಾರೆ. ಮತಾಂತರ ಕಾಯ್ದೆ ವಾಪಸ್ ಪಡೆದಿದ್ದಲ್ಲಿ ದೊಡ್ಡ ಹೋರಾಟ ಮಾಡಲಿದ್ದೇವೆ. ಮತಾಂತರದಿಂದ ಕರ್ನಾಟಕ ಉಳಿಸಿ ಅಭಿಯಾನ ಮಾಡಲಿದ್ದೇವೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಎಚ್ಚರಿಕೆ ನೀಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವಾಮೀಜಿಗಳೂ ಕೂಡ ಮತಾಂತರ ಆಗೋದನ್ನ ತಡೆಯಬೇಕು ಅಂತಾ ಹೇಳಿದ್ದಾರೆ. 40 ಲಕ್ಷ ಜನ ಹಿಂದೂಗಳು ಮತಾಂತರ ಆಗಿದ್ದಾರೆ. ಲವ್, ಆಸ್ಪತ್ರೆ, ಹಣದ ಆಮಿಷಕ್ಕೆ ಹಿಂದೂಗಳು ಮತಾಂತರ ಆಗಿದ್ದಾರೆ. ನಾವು ಮಾಡಿದ ಕಾಯ್ದೆಯಲ್ಲಿ ಬಲವಂತವಾಗಿ ಮತಾಂತರ ಆಗಬಾರದು ಅಂತ ಹೇಳಿದ್ದಾರೆ, ಹೊರತು ಸ್ವಯಂ ಪ್ರೇರಿತ ಮತಾಂತರಕ್ಕೆ ನಿರ್ಬಂಧ ವಿಧಿಸಿಲ್ಲ. ಅಂಬೇಡ್ಕರ್ ಕೂಡ ಸಂವಿಧಾನದಲ್ಲಿ ಮತಾಂತರದ ಬಗ್ಗೆ ಬರೆದಿದ್ದಾರೆ. ಅದರಂತೆ ಬಲವಂತವಾಗಿ, ಉದ್ಯೋಗ, ಆಮಿಷಗಳಿಗೆ ಮತಾಂತರ ಆಗಬಾರದು ಅಂತ ಹೇಳಿದ್ದೇವೆ. ಇದರಲ್ಲಿ ತಪ್ಪೇನು?. ಮತಾಂತರ ಆಗಬೇಕಾದವರು ಅರ್ಜಿ ಹಾಕಿ ಕಾನೂನು ಪ್ರಕಾರ ಆಗಬೇಕು. ಬಾಬರ್ ಹಿಂದೆ ಮತಾಂತರ ಮಾಡಲು ಹೊರಟಿದ್ದ. ಟಿಪ್ಪು ಕೊಡಗಿನಲ್ಲಿ‌ 50-60 ಸಾವಿರ ಕೊಡವರ ಮತಾಂತರ ಮಾಡಿದ್ದಾರೆ. ಟಿಪ್ಪುವಿನ ಸಿದ್ದಾಂತ ಏನಿದೆಯೋ ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಸರ್ಕಾರ ಹೊರಟಿರುವುದು ಸ್ಪಷ್ಟವಾಗಿದೆ ಎಂದು ಆರೋಪಿಸಿದರು.

ಸರ್ಕಾರದ ವಿರುದ್ಧ ಬೃಹತ್​ ಹೋರಾಟ: ಬಿಜೆಪಿ ಮತಾಂತರ ಕಾಯ್ದೆ ವಾಪಸ್ ಪಡೆಯದಂತೆ ಆಗ್ರಹಿಸುತ್ತದೆ. ಮುಂದಿನ ದಿನದಲ್ಲಿ ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆದಲ್ಲಿ ಸರ್ಕಾರದ ವಿರುದ್ಧ ದೊಡ್ಡ ಹೋರಾಟ ಮಾಡಲಿದ್ದೇವೆ. ಅನೇಕರ ಓಲೈಕೆಗಾಗಿ ಕಾಂಗ್ರೆಸ್ ನವರು ಇದನ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಮತಾಂತರ ಆಗಬಾರದು ಅಂತ ಸಹಿ ಹಾಕಿದ್ದರು. ಈಗ ಏಕಾಏಕಿ ಬದಲಾವಣೆ ಆಗಿದ್ದಾರೆ. ಕಾಂಗ್ರೆಸ್ ನವರು ಓಟಿಗಾಗಿ ಏಕಾಏಕಿ ಹೇಗೆ ಬೇಕಾದರೂ ಬದಲಾಗಲಿದ್ದಾರೆ ಎಂದು ಟೀಕಿಸಿದರು.

ಮಿನಿ ಪಾಕಿಸ್ತಾನ ಮಾಡಲು ಹೊರಟಂತಿದೆ: ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವ ಮೂಲಕ ಕಾಂಗ್ರೆಸ್ ಸರ್ಕಾರ ಬೆಂಗಳೂರನ್ನ ಮಿನಿ ಪಾಕಿಸ್ತಾನ ಮಾಡಲು ಹೊರಟಂತಿದೆ. ನಾವು ಕಾಯ್ದೆ ತಂದಾಗ ಯಾರಾದರೂ ಒಬ್ಬ ಮಠಾಧೀಶರಾದರೂ ವಿರೋಧ ಮಾಡಿದ್ದಾರಾ?. ನಾವು ಕಾಯ್ದೆ ತಂದಾಗ ಕೆಎಫ್​ಡಿ, ಪಿಎಫ್ಐನವರು ವಿರೋಧ ಮಾಡಿದ್ದರು. ಹಾಗಾದರೆ ನೀವು ಅವರ ಪರವಾಗಿದ್ದೀರಾ.? ಎಂದು ಅಶೋಕ್ ಪ್ರಶ್ನಿಸಿದರು.

ಕಾಂಗ್ರೆಸ್ ದಲ್ಲಾಳಿಗಳ ಪರವಾಗಿ ನಿಂತಿದೆ ?: ರೈತರು ಬೆಳೆದ ಉತ್ಪನ್ನ ಮಾರಾಟಕ್ಕೆ ಎಪಿಎಂಸಿ ಕಾಯ್ದೆ ತಂದಿದ್ದರೂ ದಲ್ಲಾಳಿಗಳು ಹೇಳಿದ ಬೆಲೆಗೆ ಬೆಳಗಳು ,ಧಾನ್ಯಗಳ ಕೊಡಬೇಕಿತ್ತು. ಮೊದಲೇ ರೇಟ್ ಫಿಕ್ಸ್ ಮಾಡಲಾಗುತ್ತಿತ್ತು. ಆದರೆ ನಾವು ತಂದ ಕಾಯ್ದೆಯಿಂದಾಗಿ ರೈತರು ಆನ್ ಲೈನ್‌ನಲ್ಲಿ ಕೃಷಿ ಉತ್ಪನ್ನ ಮಾರಬಹುದಿತ್ತು. ಹೊರ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಮಾರಲು ಅವಕಾಶ ಇದೆ. ಹೊಸ ಕಾಯ್ದೆಯಿಂದ ಎಳನೀರು ದೊಡ್ಡ ಬೆಲೆಗೆ ಸಿಗುತ್ತಿತ್ತು. ಇದು ದಲ್ಲಾಳಿ ಇಲ್ಲದೇ ರೈತರಿಗೆ ಅನುಕೂಲ ಆಗುತ್ತಿತ್ತು. ಹಾಗಾಗಿ ಈ ಕಾಯ್ದೆ ಪರಾಮರ್ಶೆ ಮಾಡೋದಕ್ಕೆ ನಮ್ಮ‌ವಿರೋಧ ಇದೆ. ಎಪಿಎಂಸಿಗಳಲ್ಲಿ ತಕ್ಕಡಿಯ ತೂಕದಲ್ಲಿ ಮೋಸ ಅಂತ ನೀವೇ ಬರೆದಿದ್ದೀರಿ. ದಲ್ಲಾಳಿಗಳ ಪರವಾಗಿ ಕಾಂಗ್ರೆಸ್ ನಿಂತಿದೆ ಎಂದು ಅಶೋಕ್ ಆರೋಪಿಸಿದರು.

ಪಠ್ಯಪುಸ್ತಕ ಕೂಡ ಹಾಗೆ ಮಾಡಿದ್ದಾರೆ. ಹೆಡ್ಗೆವಾರ್ ಸೇರಿದಂತೆ ಅನೇಕ ಪಠ್ಯ ತೆಗೆಯುವ ಪ್ರಯತ್ನ ಮಾಡಿದ್ದಾರೆ. ನಿಮ್ಮ ಸರ್ಕಾರ ಬಂದಿದೆ ಬದಲಾವಣೆ ಮಾಡಿ. ಆದರೆ ಜನರ ಅಭಿಪ್ರಾಯ ಕೇಳಿ. ಜನರ ಮನಸ್ಸಿಗೆ ಕೆಟ್ಟ ಅಭಿಪ್ರಾಯ ತರುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.

ಕರೆಂಟ್ ಬಿಲ್ ಬಗ್ಗೆ ಬಹಳ ವಿರೋಧ ಇದೆ. ಕಾಂಗ್ರೆಸ್ ಕೊಡೋದ್ರಲ್ಲಿ ಚೌಕಾಸಿ ಮಾಡುತ್ತಿದೆ. ಉಚಿತವಾಗಿ ಕೊಟ್ಟಂಗೂ ಆಗಬೇಕು, ಕೊಡದಂಗೂ ಆಗಬೇಕು. ಎಲ್ಲರಿಗೂ ಉಚಿತ ಅಂತ ಹೇಳಿದ್ದರು. ಈಗ ಷರತ್ತು ಅಂತ ಹೇಳುತ್ತಿದ್ದಾರೆ. ಚೆಕ್ಕಿಗೆ ಸೈನ್ ಹಾಕಿದಾಗ ಷರತ್ತು ಹಾಕಬೇಕಿತ್ತು. ಈಗ ಚೆಕ್‌ಬೌನ್ಸ್ ಆದಂತಾಗಿದೆ. ಹೊಸ ಮನೆ ಕಟ್ಟುವವರಿಗೆ ಮೀಟರ್ ಡೆಪಾಸಿಟ್ ಹೆಚ್ಚಳ ಮಾಡಲಾಗಿದೆ. ಜನರಿಗೆ ಗೊಂದಲ ಮಾಡಿದ್ದಾರೆ. ಜತೆಗೆ 70 ಪೈಸೆ ಏರಿಕೆ ಮಾಡಲಾಗಿದೆ. ಅದಕ್ಕೆ ಬಿಜೆಪಿ ಕಾರಣ ಅಂತ ಹೇಳ್ತಾರೆ. 12ಕ್ಕೆ ಬಿಜೆಪಿ ಸರ್ಕಾರ ಇತ್ತಾ.? ಮಹದೇವಪ್ಪ, ರಾಮಲಿಂಗಾ ರೆಡ್ಡಿ ಬಿಜೆಪಿಯ ಎಲ್ಲಾ ಯೋಜನೆ ಸ್ಟಾಪ್ ಎಂದರು. ಡಿ.ಕೆ‌ ಶಿವಕುಮಾರ್ ಕೂಡ ಅದನ್ನೇ ಹೇಳಿದ್ದರು. ಕರೆಂಟ್ ಬಿಲ್ ಹೆಚ್ಚಳ ಯಾಕೆ ಸ್ಟಾಪ್ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ಈಗ ಹೇಗೆ ಕಾರಣ.?: ಸುರ್ಜೇವಾಲಾ ಈಗ ಎಂಟ್ರಿ ಆಗಿದ್ದಾರೆ. ಅವರು ಕ್ಯಾಬಿನೆಟ್ ಸಚಿವರ ರೀತಿ ಆಡುತ್ತಿದ್ದಾರೆ. 10ಕೆ.ಜಿ ಅಕ್ಕಿ ಫ್ರೀ ಎಂದರು. ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಅಕ್ಕಿ ಕೊಡುತ್ತೇವೆ ಅಂತ ಸಹಿ ಹಾಕಿದಾಗ ನಿಮಗೆ ಗೊತ್ತಾಗಲಿಲ್ವಾ.? ಕೇಂದ್ರ ಸರ್ಕಾರ ಈಗ ಹೇಗೆ ಕಾರಣ?. ಕೇಂದ್ರ ಸರ್ಕಾರ 5 ಕೆ.ಜಿ ಕೊಡುತ್ತಿದೆ ಅಂತ ಯಾಕೆ ಹೇಳಲಿಲ್ಲ ಎಂದು ವಾಗ್ದಾಳಿ ನಡೆಸಿದರು.

'ಕರ್ನಾಟಕ ಉಳಿಸಿ ಅಭಿಯಾನ': ಗ್ಯಾರಂಟಿ ಷರತ್ತುಗಳ ವಿರುದ್ಧ ಹೋರಾಟ ಮಾಡುವ ಬಗ್ಗೆ ರಾಜ್ಯಾಧ್ಯಕ್ಷರ ಜತೆ ಚರ್ಚೆಯಾಗಿದೆ. ಇನ್ನೊಂದು ವಾರದಲ್ಲಿ ಸಭೆ ಮಾಡಲಿದ್ದೇವೆ. 19ರಂದು ಸಭೆ ಮಾಡಿ, ನಂತರ ಪ್ರತಿಭಟನೆ ಮಾಡುತ್ತೇವೆ. ಉಚಿತ ಕೊಡುಗೆಗಳಿಗೆ ಕಂಡೀಷನ್ ಮೇಲೆ ಕಂಡೀಷನ್ ಹಾಕುತ್ತಿದ್ದಾರೆ. ಸುರ್ಜೇವಾಲಾ ಬಿಬಿಎಂಪಿ ಸಭೆ ಮಾಡ್ತಾರೆ. ಇದು ಅರಾಜಕತೆ ಸೃಷ್ಟಿ ಮಾಡುವ ಕೆಲಸ. ಟಿಪ್ಪು ಯುಗ ತರುವ ಕೆಲಸ ಮಾಡುತ್ತಿದ್ದಾರೆ. 'ಮತಾಂತರದಿಂದ ಕರ್ನಾಟಕವನ್ನು ಉಳಿಸಿ ಅಭಿಯಾನ' ಮಾಡಲಿದ್ದೇವೆ ಎಂದರು.

ಆನೆ ನಡೆದಿದ್ದೇ ದಾರಿ ಅನ್ನುವಂತಿದೆ: ನಂತರ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ, ರಾಜ್ಯ ಕಾಂಗ್ರೆಸ್ ಪಕ್ಷದ ಧೋರಣೆ ನೋಡಿದರೆ ನಮಗೆ ಸಂಪೂರ್ಣ ಬಹುಮತ ಬಂದಿದೆ. ನಾವು ಖುಷಿ ಬಂದಂಗೆ ಆಡಳಿತ ನಡೆಸುತ್ತೇವೆ. ಆನೆ ನಡೆದಿದ್ದೇ ದಾರಿ ಅನ್ನುವಂತಿದೆ. ರಾಜ್ಯದ ಜನ ಇದನ್ನ ಗಮನಿಸುತ್ತಿದ್ದಾರೆ. ಚುನಾವಣೆಗೆ ಮುನ್ನ ಐದು ಗ್ಯಾರಂಟಿ ಕಾರ್ಡ್ ಘೋಷಣೆ ಮಾಡಿದ್ದರು. ಇದು ರಾಜ್ಯ ನಾಯಕರು, ಕಾಂಗ್ರೆಸ್ ನಾಯಕರಿಗೆ ಅರ್ಥವಾಗಿದೆ.

ರಾಜ್ಯಕ್ಕೆ ಹೋಗುವ ಅನಿವಾರ್ಯ ಏನಿದೆ?: ಕಾಂಗ್ರೆಸ್ ಅವರು ಚುನಾವಣೆಗೆ ಮುನ್ನ ಬಹುಮತ ಬರೋದಿಲ್ಲ ಅನ್ನೋ ವಿಚಾರ ಗೊತ್ತಿತ್ತು. ಹಾಗಾಗಿ ಮನಸೋ ಇಚ್ಚೆ ಘೋಷಣೆ ಮಾಡಿದ್ದಾರೆ. ಅವರು ಘೋಷಣೆ ಮಾಡಿದ ವಿಚಾರಗಳನ್ನು ಈಗ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಅವರ ಮನಸ್ಸಿಗೆ ಈಗ ಅಸಾಧ್ಯ ಅಂತ ಗೊತ್ತಾಗಿದೆ. ಹಾಗಾಗಿ ಮೊನ್ನೆ ಸಿಎಂ ತುರ್ತು ಸುದ್ದಿಗೋಷ್ಠಿ ಕರೆದು ಅಕ್ಕಿ ವಿಚಾರದಲ್ಲಿ ಮೋದಿ ಅವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ಕೇಂದ್ರ ಈಗಾಗಲೇ 5 ಕೆ.ಜಿ ಅಕ್ಕಿ ಕೊಡ್ತಿದೆ. ಉಳಿದ 5 ಕೆ.ಜಿ ಅಕ್ಕಿ ಬೇರೆ ರಾಜ್ಯದಿಂದ ಖರೀದಿ ಮಾಡುತ್ತೇವೆ ಅಂತ ಈಗ ಹೇಳುತ್ತಿದ್ದಾರೆ. ನಮ್ಮ ರಾಜ್ಯದಲ್ಲಿರೋ ಅಕ್ಕಿ ಬಿಟ್ಟು, ನೆರೆ ರಾಜ್ಯಕ್ಕೆ ಹೋಗಿ ಖರೀದಿ ಮಾಡ್ತಾರಂತೆ. ಇದು ದುಡ್ಡು ಹೊಡೆಯುವ ಕೆಲಸ ಅಷ್ಟೇ. ನಮ್ಮ ರಾಜ್ಯದ ರೈತರಿಂದಲೇ ಖರೀದಿ ಮಾಡಿದರೆ ನಮ್ಮ ರೈತರಿಗೆ ಅನುಕೂಲ ಆಗಲಿದೆ. ಹೊರ ರಾಜ್ಯಕ್ಕೆ ಹೋಗುವ ಅನಿವಾರ್ಯ ಏನಿದೆ? ಎಂದು ಪ್ರಶ್ನಿಸಿದರು.

ಕೊಟ್ಟ ಭರವಸೆ ಈಡೇರಿಸಬೇಕು: ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆ ತೆಗೆಯುವ ಅನಿವಾರ್ಯ ಏನಿದೆ?.ಇದಕ್ಕಾಗಿ ರಾಜ್ಯದ ಜನ ನಿಮಗೆ ಮತ ಕೊಟ್ಟು ಗೆಲ್ಲಿಸಿ ಕಳಿಸಿದ್ರಾ?. ಕುಣಿಯಲಾರದವನಿಗೆ ನೆಲ ಡೊಂಕು ಅನ್ನುವಂತಾಗಿದೆ. ಕೇಂದ್ರ ಸರ್ಕಾರ ಸಹಕಾರ ಕೊಡುತ್ತಿಲ್ಲ ಅನ್ನೋದು ಸರಿಯಲ್ಲ. ಸಂಪೂರ್ಣ ಬಹುಮತ ಬಂದಿದೆ ಅಂತ‌ ಹೇಗೆ ಬೇಕಾದರೂ ಅಧಿಕಾರ ನಡೆಸುತ್ತೇವೆ ಅನ್ನೋದು ಸರಿಯಲ್ಲ. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಒಬ್ಬರೆ ಇದ್ದಾಗ ಸದನದ ಒಳಗೆ, ಹೊರಗೆ ಹೋರಾಟ ಮಾಡಿದ್ದರು. ಯಡಿಯೂರಪ್ಪ ಗುಡುಗಿದರೆ, ವಿಧಾನಸೌಧ ನಡುಗುವುದು ಅನ್ನುವಂತೆ ಮಾಡಿದ್ದರು. ನೀವು ಕೊಟ್ಟ ಭರವಸೆ ಈಡೇರಿಸಬೇಕು. ವಿಪಕ್ಷವಾಗಿ ನಾವು ಸುಮ್ಮನೆ ಕೂರಲ್ಲ. ಗ್ಯಾರಂಟಿ ಜಾರಿ ಸಾಧ್ಯವಿಲ್ಲ ಎಂದರೆ ರಾಜ್ಯದ ಜನರ ಮುಂದೆ ಕ್ಷಮೆ ಕೇಳಿ. ಚಲುವರಾಯಸ್ವಾಮಿ ಹೇಳಿದ್ರಲ್ಲ ಇದೆಲ್ಲಾ ಗಿಮಿಕ್ ಅಂತ, ಅದನ್ನ ಒಪ್ಪಿಕೊಳ್ಳಿ. ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಈ ರೀತಿ ಮಾಡಿದೆವು ಅಂತ‌ ಒಪ್ಪಿಕೊಳ್ಳಿ ಎಂದರು.

ಡಿ.ಕೆ ಶಿವಕುಮಾರ್ ಪ್ರತಿಭಟನೆಗೆ ಬಿಜೆಪಿ ಆಹ್ವಾನ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಕಾಂಗ್ರೆಸ್ ಅವರಿಗೆ ಶಾಮಿಯಾನ ಕೊರತೆಯಾದರೆ ಹೇಳಲಿ ಹಾಕಿಸಿಕೊಡುತ್ತೇವೆ. ಮೊದಲು ಅವರು ಕೊಟ್ಟಿರುವ ಐದು ಭರವಸೆಯನ್ನು ಷರತ್ತು ಇಲ್ಲದೆ ಈಡೇರಿಸಲಿ. ಆ ನಂತರ ದಮ್ಮು, ತಾಕತ್ತು ಅಂತ ಬಳಸಿದ್ದಾರಲ್ಲ ನಾವು ಏನು ಅಂತ ತೋರಿಸುತ್ತೇವೆ ಎಂದರು.

20ರಂದು ರಾಜ್ಯವ್ಯಾಪಿ ಕೇಂದ್ರದ ವಿರುದ್ಧ ಪ್ರತಿಭಟನೆ ಅಂತ ಕರೆ ಕೊಟ್ಟಿದ್ದಾರೆ. ಎಲ್ಲವನ್ನೂ ಕೇಂದ್ರದ ಅನುಮತಿ ಪಡೆದು ಮಾಡಿದ್ರಾ.? ಕೇಂದ್ರದ ಕರ್ತವ್ಯ ಅಲ್ಲ,‌ನಿಮ್ಮ‌ಕರ್ತವ್ಯ. ನಿಮ್ಮ ಕೈಯಲ್ಲಿ ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಿ. ಶಿವಕುಮಾರ್ ಅಣ್ಣ ನೀವು ಕೊಟ್ಟಿರೋ ಭರವಸೆ. ಯಾರೋ ಕೊಟ್ಟಿರೋ ಭರವಸೆ, ಇನ್ಯಾರನ್ನೋ ತೋರಿಸಬೇಡಿ. ನಿಮ್ಮ ಭರವಸೆ ವೈಫಲ್ಯ, ನೀವೇ ಉಳಿಸಿಕೊಳ್ಳಿ ಎಂದರು.

ಇದನ್ನೂ ಓದಿ: 'ಅನ್ನಭಾಗ್ಯ ಯೋಜನೆ'ಯಡಿ ಅಕ್ಕಿ ನೀಡಲು ನಿರಾಕರಣೆ.. ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್ ಪ್ರತಿಭಟನೆ: DCM

ETV Bharat Logo

Copyright © 2025 Ushodaya Enterprises Pvt. Ltd., All Rights Reserved.