ETV Bharat / state

'ಜಾನುವಾರು ಹತ್ಯೆ ನಿಷೇಧ ಕಾನೂನು ರದ್ದುಗೊಳಿಸದಿದ್ದರೆ ಕ್ವಿಟ್ ಇಂಡಿಯಾ ಮಾದರಿ ಚಳವಳಿ' - Demand to cancel cow slaughter act

ಜನ ವಿರೋಧಿಯಾದ ಕಾನೂನುಗಳನ್ನು ನಿರಾಕರಿಸುವ ಹಕ್ಕು ಪ್ರಜೆಗಳಿಗಿದೆ. ಅಸಿಂಧುತ್ವ ಹೊಂದಿದ ಈ ಜಾನುವಾರು ಹತ್ಯೆ ನಿಷೇಧ ಕಾನೂನನ್ನು ರದ್ದುಗೊಳಿಸದಿದ್ದರೆ ಕ್ವಿಟ್ ಇಂಡಿಯಾ ಮಾದರಿಯ ಚಳವಳಿ ನಡೆಯುತ್ತದೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ವಿ.ಗೋಪಾಲ ಗೌಡ ಎಚ್ಚರಿಸಿದ್ದಾರೆ.

ವಿಚಾರ ಸಂಕಿರಣ
ವಿಚಾರ ಸಂಕಿರಣ
author img

By

Published : Jan 11, 2021, 4:26 PM IST

ಬೆಂಗಳೂರು : ಜಾನುವಾರು ಹತ್ಯೆ ನಿಷೇಧ ಕಾನೂನು ಸಂವಿಧಾನಕ್ಕೆ ವಿರುದ್ಧವಾಗಿದ್ದು ರೈತರಿಗೆ ಇದು ಮಾರಕವಾಗಿದೆ. ಕೂಡಲೇ ಈ ಕಾನೂನು ಹಿಂಪಡೆಯದಿದ್ದರೆ ನಾವೇ ಅವುಗಳನ್ನು ಅರಬ್ಬಿ ಸಮುದ್ರಕ್ಕೆ ಬಿಸಾಡುತ್ತೇವೆ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ವಿ. ಗೋಪಾಲ ಗೌಡ ಕಿಡಿಕಾರಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಏರ್ಪಡಿಸಿದ್ದ ‘ಜಾನುವಾರು ಹತ್ಯೆ ನಿಷೇಧ ಕಾನೂನು ರೈತರಿಗೆ ಮರಣ ಶಾಸನವಾಗಲಿದೆಯೇ?’ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಜನ ವಿರೋಧಿಯಾದ ಕಾನೂನುಗಳನ್ನು ನಿರಾಕರಿಸುವ ಹಕ್ಕು ಪ್ರಜೆಗಳಿಗಿದೆ. ಅಸಿಂಧುತ್ವ ಹೊಂದಿದ ಈ ಜಾನುವಾರು ಹತ್ಯೆ ನಿಷೇಧ ಕಾನೂನನ್ನು ರದ್ದುಗೊಳಿಸದಿದ್ದರೆ ಕ್ವಿಟ್ ಇಂಡಿಯಾ ಮಾದರಿಯ ಚಳವಳಿ ನಡೆಯುತ್ತದೆ ಎಂದು ಎಚ್ಚರಿಸಿದ್ದಾರೆ.

ವಿಚಾರ ಸಂಕಿರಣ
ವಿಚಾರ ಸಂಕಿರಣ

ನಾಡಿನ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ರೈತ ವಿರೋಧಿ ಕಾನೂನುಗಳನ್ನು ಹೇರುತ್ತಾ ಅಸಂಬದ್ಧವಾಗಿ ಮಾತನಾಡುವ ರಾಜಕೀಯ ಪಕ್ಷಗಳು ನಮ್ಮನ್ನಾಳುತ್ತಿರುವುದು ನಾಚಿಗೆಕೇಡಿನ ವಿಷಯವಾಗಿದೆ. ಪ್ರಜಾಪ್ರಭುತ್ವ, ಸಂವಿಧಾನ ಉಲ್ಲಂಘಿಸುವವರನ್ನು ನಾವು ದೂರ ಇಡಬೇಕಿದೆ. ಸಂವಿಧಾನವು ನಮಗೆ ಎಲ್ಲ ರೀತಿಯ ಹಕ್ಕುಗಳನ್ನು ನೀಡಿದೆ. ಆದರೆ ಯಾವ ಆಹಾರ ತಿನ್ನಬೇಕು ಎಂದು ನಿರ್ಧರಿಸಲು ಇವರು ಯಾರು. ಇಂತಹ ಕಾನೂನುಗಳನ್ನು ಕಿತ್ತು ‌ಹಾಕಬೇಕು. ಜನರನ್ನು ವಿರೋಧಿಸುವ ಯಾವುದೇ ಪಕ್ಷಗಳಾಗಲಿ ಅವನ್ನು ಸೋಲಿಸಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಜೊತೆಗೆ ಬಂದ 17 ಜನರಲ್ಲಿ ಯಾರನ್ನೂ ಸಿಎಂ ಕೈ ಬಿಡುವುದಿಲ್ಲ: ಸಚಿವ ರಮೇಶ್ ಜಾರಕಿಹೊಳಿ

ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಅನಸೂಯಮ್ಮ, ರಾಜ್ಯ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ, ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ, ಕರ್ನಾಟಕ ಜನಶಕ್ತಿಯ ಗೌರವಾಧ್ಯಕ್ಷೆ ಸಿರಿ ಗೌರಿ, ಎ. ಗಾಯತ್ರಿ, ರೈತ ಮುಖಂಡರು ಈ‌ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.