ETV Bharat / state

ಸಚಿವರು ಇರುತ್ತಾರಾ, ಬದಲಾಗುತ್ತಾರಾ..?: ಬಿಜೆಪಿ ಶಾಸಕರಿಂದಲೇ ಸದನದಲ್ಲಿ ಪ್ರಶ್ನೆ

ವಿಧಾನಸಭೆಯಲ್ಲಿಂದು ಕಾವೇರಿ ನದಿ ಕಲುಷಿತ ಆಗುತ್ತಿರುವ ವಿಚಾರದ ಬಗ್ಗೆ ಪರಿಸರ ಖಾತೆ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಮುಜುಗರ ಆಗುವಂತ ಪ್ರಶ್ನೆ ಕೇಳಿದರು.

MLA appachu ranjan
ಶಾಸಕ ಅಪ್ಪಚ್ಚು ರಂಜನ್
author img

By

Published : Feb 4, 2021, 12:58 PM IST

Updated : Feb 4, 2021, 3:11 PM IST

ಬೆಂಗಳೂರು: ಸಚಿವರು ಇರುತ್ತಾರಾ, ಬದಲಾಗುತ್ತಾರಾ? ಎಂದು ಆಡಳಿತ ಪಕ್ಷದ ಶಾಸಕ ಅಪ್ಪಚ್ಚು ರಂಜನ್ ಅವರು ಮುಜುಗರ ಆಗುವಂತೆ ಪ್ರಶ್ನಿಸಿದ ಪ್ರಸಂಗ ವಿಧಾನಸಭೆಯಲ್ಲಿಂದು ನಡೆಯಿತು.

ಕಾವೇರಿ ನದಿ ಕಲುಷಿತ ಆಗುತ್ತಿರುವ ವಿಚಾರದ ಬಗ್ಗೆ ಪರಿಸರ ಖಾತೆ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಪ್ರಶ್ನೆ ಕೇಳಿದರು. ಆದರೆ ಈ ಪ್ರಶ್ನೆಗೆ ಸಚಿವರು, ಬೇರೆಯದೇ ಉತ್ತರ ಒದಗಿಸಿದ್ದಾರೆ. ಕೊಟ್ಟ ಉತ್ತರಕ್ಕೆ ಸಚಿವರ ಸಹಿಯೂ ಇರಲಿಲ್ಲ ಎಂದು ಹೇಳಿದರು. ಇದರಿಂದ ಸಿಟ್ಟಾದ ಅಪ್ಪಚ್ವು ರಂಜನ್, ನನಗೆ ಉತ್ತರ ಬದಲಾಯಿಸಿ ಕೊಟ್ಟಿದ್ದಾರೆ. ಈ ಉತ್ತರದಲ್ಲಿ ಸಚಿವರ ಸಹಿಯೂ ಇಲ್ಲ. ಈ ಉತ್ತರವನ್ನು ನಾನು ಒಪ್ಪಬೇಕಾ?. ಸ್ಪೀಕರ್ ಅವರೇ ನೀವೇ ಹೇಳಿ ಎಂದು ಪ್ರಶ್ನೋತ್ತರ ಅವಧಿಯಲ್ಲಿ ಸರ್ಕಾರವನ್ನೇ ಕೆಣಕಿದರು.

ಶಾಸಕ ಅಪ್ಪಚ್ಚು ರಂಜನ್ ಅವರಿಂದ​​ ಸಚಿವ ಯೋಗೇಶ್ವರ್​ ಪ್ರಶ್ನೆ

ಸಚಿವ ಸ್ಥಾನ ಸಿಗದಿದ್ದರಿಂದ ಅಸಮಾಧಾನಗೊಂಡಿರುವ ಅಪ್ಪಚ್ಚು ರಂಜನ್, ಖಾತೆ ಬದಲಾವಣೆಗೆ ಈಗಾಗಲೇ ಬೇಸರದಲ್ಲಿರುವ ಸಚಿವ ಯೋಗೀಶ್ವರ್​​ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು. ಇದರಿಂದ ಸಚಿವರು ಮುಜುಗರಕ್ಕೊಳಗಾದರು.

ಓದಿ: ರೈತರು ಸ್ವಾವಲಂಬಿಯಾಗಲು ಕಳೆದ ಐದು ವರ್ಷಗಳಿಂದ ಕ್ರಮ ಕೈಗೊಂಡಿದ್ದೇವೆ: ಪಿಎಂ ಮೋದಿ

ಅಪ್ಪಚ್ಚು ರಂಜನ್ ಹೇಳಿಕೆಗೆ ಎಚ್ಚೆತ್ತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವರು ಸಹಿ ಹಾಕಿದ್ದಾರೆ. ನಿಮ್ಮ ಉತ್ತರದಲ್ಲಿ ಸಹಿ ಇಲ್ಲದಿರಬಹುದು. ಆದರೆ ನನಗೆ ಕಳುಹಿಸಿರುವುದರಲ್ಲಿ ಸಹಿ ಇದೆ ಎಂದರು. ನಂತರ ಅಪ್ಪಚ್ಚು ರಂಜನ್ ಪ್ರಶ್ನೆಗೆ ಎದ್ದು ನಿಂತು ಸಚಿವ ಸಿ.ಪಿ. ಯೋಗೇಶ್ವರ್ ಉತ್ತರ ನೀಡಿದರು.

Last Updated : Feb 4, 2021, 3:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.