ಬೆಂಗಳೂರು: ರಾಜ್ಯ ವಿಧಾನಸಭೆ ಭರವಸೆ ಸಮಿತಿ ಶಾಸಕರ ನಿಯೋಗ ಕೈಗೊಂಡಿರುವ ಲಡಾಖ್ ಮತ್ತು ಲೇಹ್ ಪ್ರವಾಸ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಗುರುವಾರ ಬೆಳಗ್ಗೆ ಬಿಜೆಪಿ ಶಾಸಕ ರಘುಪತಿ ಭಟ್ ನೇತೃತ್ವದ 15 ಮಂದಿ ಶಾಸಕರ ನಿಯೋಗ 6 ದಿನಗಳ ಕಾಲ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ ಪ್ರವಾಸ ಕೈಗೊಂಡಿದೆ.
ಇದು ಕೊರೊನಾ ಲಾಕ್ಡೌನ್ ನಂತರ ಹೊರರಾಜ್ಯಕ್ಕೆ ಪ್ರವಾಸ ಹೊರಟ ಮೊದಲ ವಿಧಾನ ಮಂಡಲ ಸಮಿತಿಯಾಗಿದೆ. ವಿಧಾನಸಭೆಯಲ್ಲಿ ಸಚಿವರು ಕೊಡುವ ಭರವಸೆಗಳ ಬಗ್ಗೆ ಗಮನಹರಿಸುವ ಸಮಿತಿ ಇದಾಗಿದ್ದು, ಸಚಿವರು ಕೊಟ್ಟಿರುವ ಭರವಸೆಗಳಲ್ಲಿ ಎಷ್ಟು ಈಡೇರಿಸಿದ್ದಾರೆ?, ಎಷ್ಟು ಈಡೇರಿಸಿಲ್ಲ ಎಂಬುದನ್ನು ಸದನದಲ್ಲಿ ಸಮಿತಿ ಮಂಡಿಸಬೇಕು. ಹೀಗಾಗಿ ಬೇರೆ ರಾಜ್ಯಗಳ ವಿಧಾನಸಭೆ ಸಮಿತಿಗಳೊಂದಿಗೆ ಅಧ್ಯಯನಕ್ಕೆ ತೆರಳುವುದು ಸಾಮಾನ್ಯವಾಗಿದೆ. ಆದರೆ, ಈ ಪ್ರವಾಸಕ್ಕೀಗ ಆಕ್ಷೇಪ ವ್ಯಕ್ತವಾಗಿದೆ.
ಆಕ್ಷೇಪ ಏಕೆ?: ಲೇಹ್ನಲ್ಲಿರುವುದು ಲೆಫ್ಟಿನೆಂಟ್ ಗವರ್ನರ್ ಆಡಳಿತ. ಹೀಗಾಗಿ ಅಲ್ಲಿ ನಮ್ಮ ವಿಧಾನಸಭೆಯಲ್ಲಿರುವಂತೆ ಸರ್ಕಾರಿ ಭರವಸೆಗಳ ಸಮಿತಿ ಇಲ್ಲ. ಲೇಹ್‌ನಲ್ಲಿ ನಮ್ಮ ಶಾಸಕರ ಸರ್ಕಾರಿ ಭರವಸೆಗಳ ಸಮಿತಿ ಏನು ಅಧ್ಯಯನ ಮಾಡಲಿದೆ ಎಂಬ ಪ್ರಶ್ನೆಗಳು ಮೂಡಿವೆ.
ಅಧ್ಯಯನ ಮಾಡಲು ಅಲ್ಲಿಯೂ ಕೂಡ ಸರ್ಕಾರಿ ಭರವಸೆಗಳ ಸಮಿತಿ ಇರಬೇಕು. ಅವರೊಂದಿಗೆ ಸಂವಾದ ಮಾಡಿ ಅಧ್ಯಯನ ಮಾಡಬೇಕು. ಅಲ್ಲಿ ಭರವಸೆಗಳ ಸಮಿತಿಯೇ ಇಲ್ಲದಿರುವಾಗ ಅಧ್ಯಯನ ಪ್ರವಾಸದ ಜರೂರತ್ತೇನು ಎಂಬ ಪ್ರಶ್ನೆ ಸಾರ್ವಜನಿಕರದ್ದು. ಅಷ್ಟೇ ಅಲ್ಲ, ಕೆಲ ಸದಸ್ಯರು ಕುಟುಂಬದ ಸಮೇತರಾಗಿ ಪ್ರವಾಸ ಕೈಗೊಂಡಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ. ಜುಲೈ 5ರಂದು ಶಾಸಕರು ಬೆಂಗಳೂರಿಗೆ ಮರಳಲಿದ್ದಾರೆ.
-
ಸರ್ಕಾರಿ ಭರವಸೆಗಳ ಸಮಿತಿ ಕೇಂದ್ರಾಡಳಿತ ಪ್ರದೇಶ ಲಡಾಖ್ ಅಧ್ಯಯನ ಪ್ರವಾಸ ಕೈಗೊಂಡಿದ್ದು ಇಂದು ಲಡಾಖ್‌ನ ರಾಜಧಾನಿ ಲೇಹ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಮುಖ್ಯ ಸಲಹೆಗಾರರಾದ ಶ್ರೀ ಉಮಂಗ್ ನೂರುಲ್ಹಾ ಅವರನ್ನು ಲಡಾಖ್ ಸಂಸದರಾದ ಶ್ರೀ ಜಮ್ಯಂಗ್ ತ್ಸೇರಿಂಗ್ ನಾಮ್ಗ್ಯಾಲ್ ಅವರೊಂದಿಗೆ ಭೇಟಿ ಮಾಡಿತು.@jtnladakh pic.twitter.com/uI96RJpBpO
— Raghupathi Bhat (@RaghupathiBhat) July 1, 2022 " class="align-text-top noRightClick twitterSection" data="
">ಸರ್ಕಾರಿ ಭರವಸೆಗಳ ಸಮಿತಿ ಕೇಂದ್ರಾಡಳಿತ ಪ್ರದೇಶ ಲಡಾಖ್ ಅಧ್ಯಯನ ಪ್ರವಾಸ ಕೈಗೊಂಡಿದ್ದು ಇಂದು ಲಡಾಖ್‌ನ ರಾಜಧಾನಿ ಲೇಹ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಮುಖ್ಯ ಸಲಹೆಗಾರರಾದ ಶ್ರೀ ಉಮಂಗ್ ನೂರುಲ್ಹಾ ಅವರನ್ನು ಲಡಾಖ್ ಸಂಸದರಾದ ಶ್ರೀ ಜಮ್ಯಂಗ್ ತ್ಸೇರಿಂಗ್ ನಾಮ್ಗ್ಯಾಲ್ ಅವರೊಂದಿಗೆ ಭೇಟಿ ಮಾಡಿತು.@jtnladakh pic.twitter.com/uI96RJpBpO
— Raghupathi Bhat (@RaghupathiBhat) July 1, 2022ಸರ್ಕಾರಿ ಭರವಸೆಗಳ ಸಮಿತಿ ಕೇಂದ್ರಾಡಳಿತ ಪ್ರದೇಶ ಲಡಾಖ್ ಅಧ್ಯಯನ ಪ್ರವಾಸ ಕೈಗೊಂಡಿದ್ದು ಇಂದು ಲಡಾಖ್‌ನ ರಾಜಧಾನಿ ಲೇಹ್‌ನಲ್ಲಿ ಲೆಫ್ಟಿನೆಂಟ್ ಗವರ್ನರ್ ಮುಖ್ಯ ಸಲಹೆಗಾರರಾದ ಶ್ರೀ ಉಮಂಗ್ ನೂರುಲ್ಹಾ ಅವರನ್ನು ಲಡಾಖ್ ಸಂಸದರಾದ ಶ್ರೀ ಜಮ್ಯಂಗ್ ತ್ಸೇರಿಂಗ್ ನಾಮ್ಗ್ಯಾಲ್ ಅವರೊಂದಿಗೆ ಭೇಟಿ ಮಾಡಿತು.@jtnladakh pic.twitter.com/uI96RJpBpO
— Raghupathi Bhat (@RaghupathiBhat) July 1, 2022
ಪ್ರವಾಸ ಹೋದ ಶಾಸಕರು ಯಾರು?: ರಘುಪತಿ ಭಟ್ (ಸಮಿತಿ ಅಧ್ಯಕ್ಷ), ಬಿ.ಎಂ.ಸುಕುಮಾರ ಶೆಟ್ಟಿ, ನಾರಾಯಣ ಸ್ವಾಮಿ ಕೆ.ಎಂ., ಎಸ್.ಎನ್.ಸುಬ್ಬಾರೆಡ್ಡಿ, ದತ್ತಾತ್ರೇಯ ಪಾಟೀಲ ರೇವೂರ್, ಕೆ.ಶ್ರೀನಿವಾಸ್ ಮೂರ್ತಿ, ಮಹದೇವಪ್ಪ ಶಿವಲಿಂಗಪ್ಪ ಯದವಾಡ, ಗಣೇಶ್ ಹುಕ್ಕೇರಿ, ಶ್ರೀಮಂತ ಪಾಟೀಲ, ಸೋಮನಗೌಡ ಪಾಟೀಲ, ಉದಯ ಗರುಡಾಚಾರ್, ಎಸ್.ರಾಮಪ್ಪ, ರವೀಂದ್ರ ಶ್ರೀಕಂಠಯ್ಯ, ಹರೀಶ್ ಪೂಂಜಾ, ವೆಂಕಟರೆಡ್ಡಿ ಮುದ್ನಾಳ್ ಅಧ್ಯಯನದ ಹೆಸರಲ್ಲಿ ಪ್ರವಾಸಕ್ಕೆ ಹೋಗಿದ್ದಾರೆ.