ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಭಯದ ನಡುವೆ ಹಕ್ಕಿ ಜ್ವರದ ಭೀತಿಯೂ ಎದುರಾಗಿದೆ. ಆದ್ರೂ ಕೂಡಾ ಜನ ಮಾತ್ರ ಯಾವುದಕ್ಕೂ ಕ್ಯಾರೆನ್ನುಲ್ಲಿಲ್ಲ. ಯುಗಾದಿಯ ನಂತರದ ಹೊಸತೊಡಕು(ಮಾಂಸದೂಟ) ಆಚರಣೆಗೆ ಮಾಂಸ ಖರೀದಿಗಾಗಿ ಮಾಂಸದಂಗಡಿಗಳ ಮುಂದೆ ಸರತಿಯಲ್ಲಿ ನಿಂತಿದ್ದಾರೆ.
ನಗರದಲ್ಲಿ ಯುಗಾದಿ ಹಬ್ಬದ ಹೊಸತೊಡಕಿಗೆ ಮಾಂಸದಂಗಡಿಗಳನ್ನು ತೆರೆಯಲಾಗಿದೆ. ಮುಂಜಾನೆಯೇ ಮಟನ್, ಚಿಕನ್ ಸ್ಟಾಲ್‌ಗಳೆದುರು ಜನರು ಕ್ಯೂ ನಿಂತಿದ್ದ ದೃಶ್ಯ ಕಂಡುಬಂತು.
ಮತ್ತೊಂದೆಡೆ ಪೊಲೀಸರು ಜನರನ್ನು ಗುಂಪುಗೂಡಲು ಬಿಡದೆ ಒಂದೊಂದು ಮೀಟರ್ ಅಂತರದಲ್ಲಿ ಸೂಚಿಸಲಾದ ಬಾಕ್ಸ್‌ನಲ್ಲಿ ನಿಲ್ಲಿಸಿ ಖರೀದಿಗೆ ಅನುವು ಮಾಡಿ ಕೊಡುತ್ತಿದ್ದಾರೆ.
ಜೊತೆಗೆ ಜನರಿಗೆ ಮುಖಕ್ಕೆ ಮಾಸ್ಕ್ ಧರಿಸುವಂತೆ ತಿಳಿ ಹೇಳುತ್ತಿದ್ದಾರೆ.