ಬೆಂಗಳೂರು: ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಮುಗಿಸಿ ಮಾಧ್ಯಮದವರೊಂದಿಗೆ ಮಾತನಾಡಲು ಬಂದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜತೆ ಕಾಣಿಸಿಕೊಳ್ಳಬೇಕೆಂಬ ತವಕದಿಂದ ಕೈ ಕಾರ್ಯಕರ್ತರು ಜಗಳವಾಡಿಕೊಂಡ ಘಟನೆ ಬುಧವಾರ ನಡೆದಿದೆ.
ಈ ವಿಷಯವಾಗಿ ಬಿರುಸಿನ ಮಾತಿನ ಚಕಮಕಿ ನಡೆಯಿತು. ಪ್ರತಿ ಭಾರಿಯು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದೀರಾ. ನಮಗೂ ಅವಕಾಶ ಕೊಡಿ ಎಂದು ಕಾರ್ಯಕರ್ತರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಸಭೆಯ ವಿವರವನ್ನು ಮಾಧ್ಯಮದರಿಗೆ ತಿಳಿಸಿ ದಿನೇಶ್ ಗುಂಡೂರಾವ್ ಅಲ್ಲಿಂದ ಹೊರಡುತ್ತಿದ್ದಂತೆ, ಇತ್ತ ಕಾರ್ಯಕರ್ತರ ಮುನಿಸು ಹೆಚ್ಚಾಗಿದೆ. ಪ್ರತಿ ಭಾರಿಯು ನೀನೇ ಕಾಣಿಸಿಕೊಳ್ಳಬೇಕು ಎಂದರೆ ನಿನ್ನದೇ ಚಾನಲ್ವೊಂದನ್ನು ಪ್ರಾರಂಭಿಸು ಎಂದು ಪರಸ್ಪರ ಕಾರ್ಯಕರ್ತರು ರೇಗಿದ್ದಾರೆ.