ETV Bharat / state

ಟ್ವಿಟರ್​ನಲ್ಲಿ ಕಮಿಷನರ್ - ನೆಟ್ಟಿಗರ ನಡುವೆ ಜಟಾಪಟಿ: ಸಿಸಿಬಿ ತನಿಖೆಗೆ ನಗರಾಯುಕ್ತರ ಆದೇಶ - bangalore latest news

ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್​ನಲ್ಲಿದ್ದ ಶೇ 97ರಷ್ಟು ಮಂದಿ ‌ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆಂಬ ಮಾಹಿತಿ ಸುದ್ದಿ ಮೂಲಗಳಿಂದ ತಿಳಿದುಬರುತ್ತಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾಸ್ಕರ್ ರಾವ್, ಎಚ್ಚರಿಕೆ ನೀಡಿದ್ದಾರೆ.

quarrel-between-netizens-and-commissioner
ಟ್ವಿಟರ್​ನಲ್ಲಿ ಕಮಿಷನರ್ - ನೆಟ್ಟಿಗರ ನಡುವೆ ಜಟಾಪಟಿ
author img

By

Published : Jul 22, 2020, 7:09 AM IST

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ಕುರಿತು ತಪ್ಪು ಸಂದೇಶ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ನಗರ ಆಯಕ್ತ ಭಾಸ್ಕರ್​​​​​ರಾವ್ ಅವರು ಈಗಾಗಲೇ ಸೂಚನೆ ನೀಡಿದ್ದರು. ಆದರೆ, ಟ್ವಿಟರ್​ನಲ್ಲೇ ಕಮಿಷನರ್​ ಹಾಗೂ ನೆಟ್ಟಿಗರ ನಡುವೆ ಜಟಾಪಟಿ ಏರ್ಪಟ್ಟಿದೆ.

ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್​ನಲ್ಲಿದ್ದ ಶೇ 97ರಷ್ಟು ಮಂದಿ ‌ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸುದ್ದಿ ಮೂಲಗಳಿಂದ ತಿಳಿದುಬರುತ್ತಿದೆ ಎಂದು ನೆಟ್ಟಿಗರೊಬ್ಬರು ಟ್ವೀಟ್​ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾಸ್ಕರ್​​ರಾವ್, ನೀವು ಟ್ವೀಟ್ ಮಾಡಿದ ಮಾಹಿತಿ ಬಗ್ಗೆ ತನಿಖೆ ಮಾಡ್ತೀವಿ. ಹಾಗೆಯೇ ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಈ ವಿಚಾರದ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ಸಹ ಕೊಟ್ಟಿದ್ದಾರೆ.

ಟ್ವೀಟ್​
ಟ್ವೀಟ್​

ನೀವು ಕಳುಹಿಸಿರುವ ಮಾಹಿತಿ ಸರಿ ಇದ್ದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಒಂದು ವೇಳೆ ನೀವು ಕಳುಹಿಸಿದ ಮಾಹಿತಿ ತಪ್ಪಿದ್ದರೆ. ಮುಂದಿನ ತನಿಖೆ ಎದುರಿಸಲು ರೆಡಿಯಾಗಿ ಎಂದು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಮತ್ತೊಮ್ಮೆ ಯುವಕ ಟ್ವೀಟ್ ಮಾಡಿ, ಸುದ್ದಿ ಮಾಧ್ಯಮದ ಆಧಾರದ ಮೇರೆಗೆ ಟ್ವೀಟ್ ಮಾಡಿದ್ದೇನೆ ಎಂದಿದ್ದಾರೆ. ಈ ತರದ ಸುದ್ದಿಗಳನ್ನ ಲೈಕ್ ಮಾಡಿ ಮರು ಟ್ವೀಟ್ ಮಾಡಿದರೆ ಸಿಸಿಬಿ ವಿಭಾಗ ಕ್ರಮ ಕೈಗೊತ್ತದೆ ಎಂದು ಕಮಿಷನರ್​ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಗಮನಕ್ಕೆ ತಪ್ಪು ಸುದ್ದಿಗಳನ್ನು ತರಬಾರದೇ? ಎಂದು ಇತರ ನೆಟ್ಟಿಗರು ಕಮಿಷನರ್​ ಅವರನ್ನು ಪ್ರಶ್ನಿಸಿದ್ದಾರೆ. ಸದ್ಯ ವಿಕ್ಟೋರಿಯಾ ಬಗ್ಗೆ ಹರಿದಾಡುವ ಸುದ್ದಿ ಕುರಿತು ಗಂಭೀರವಾಗಿ ತನಿಖೆ ನಡೆಸುವಂತೆ ಸಿಸಿಬಿಗೆ ಸೂಚಿಸಿದ್ದು, ಸಿಸಿಬಿ ತಾಂತ್ರಿಕ ವಿಭಾಗ ಈ ಕುರಿತು ತನಿಖೆ ಕೈಗೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.