ಬೆಂಗಳೂರು: ಬಲವಂತವಾಗಿ ಸ್ವಾಬ್ ಟೆಸ್ಟ್ ಮಾಡಿಸುವಂತೆ ಒತ್ತಾಯ ಆರೋಪ ಹಿನ್ನೆಲೆ ಬಿಬಿಎಂಪಿ ಸಿಬ್ಬಂದಿ ಮತ್ತು ಸ್ಥಳೀಯರ ನಡುವೆ ಗಲಾಟೆ ನಡೆದ ಘಟನೆ ನಗರ್ತಪೇಟೆ ಬಳಿ ನಡೆದಿದೆ.
ನಗರ್ತಪೇಟೆ ಮುಖ್ಯರಸ್ತೆಯಲ್ಲಿ ಬಿಬಿಎಂಪಿಯು ಕೊರೊನಾ ಟೆಸ್ಟ್ ಕ್ಯಾಂಪ್ ಹಾಕಿತ್ತು. ಈ ವೇಳೆ ಏರಿಯಾದಲ್ಲಿ ಓಡಾಡುತ್ತಿದ್ದವರನ್ನು ಬಲವಂತವಾಗಿ ಸ್ವಾಬ್ ಟೆಸ್ಟ್ಗೆ ಎಳೆದು ತಂದಿದ ಆರೋಪದ ಹಿನ್ನೆಲೆ ಯುವಕರು ಮತ್ತು ಬಿಬಿಎಂಪಿ ಸಿಬ್ಬಂದಿ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಸ್ಥಳೀಯರ ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಗಲಾಟೆ ವಿಡಿಯೋ ವೈರಲ್ ಹಿನ್ನೆಲೆ ಕೋವಿಡ್ ಟೆಸ್ಟ್ ಕ್ಯಾಂಪ್ ಕ್ಲೋಸ್ ಮಾಡಲಾಗಿದೆ.
ಇನ್ನೂ ಕೊರೊನಾ ಪರೀಕ್ಷೆಗೆ ಒಳಪಡದ ಕಿಶನ್ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಿಬಿಎಂಪಿ ಅಧಿಕಾರಿ ವಿರುದ್ಧ ನಾಗಭೂಷಣ್ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ.
ಮದುವೆ ಮಧರಂಗಿ ಬಣ್ಣ ಮಾಸುವ ಮುನ್ನ ಹಣಕ್ಕಾಗಿ ವಧುವಿಗೆ ಮತ್ತೊಂದು ವಿವಾಹ: ಹೊಂಚು ಹಾಕಿ ಹಿಡಿದ ವರ!