ಬೆಂಗಳೂರು : ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದೆ. ಅವರ ನಿಧನವನ್ನು ಕನಸಿನಲ್ಲೂ ಯಾರು ನೆನಸಿರಲಿಲ್ಲ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಇಂದು ಸದಾಶಿವನಗರದ ಪುನೀತ್ ರಾಜ್ ಕುಮಾರ್ ಕುಟುಂಬವನ್ನ ಭೇಟಿ ಮಾಡಿ, ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ಪುನೀತ್ ಅವರು ಸೇವಾ ಮನೋಭಾವ ಹಾಗೂ ಪರೋಪಕಾರಕ್ಕೆ ಹೆಸರು ಆದವರು.
ಸೇವೆಯನ್ನು ಕೆಲವರು ಪ್ರಚಾರಕ್ಕಾಗಿ ಮಾಡ್ತಾರೆ. ಆದರೆ, ಪುನೀತ್ ಬಲಗೈನಲ್ಲಿ ಕೊಟ್ಟಿದ್ದು, ಎಡಗೈ ತಿಳಿಯದಂತೆ ಸೇವೆ ಮಾಡಿದ್ದಾರೆ ಎಂದು ಸ್ಮರಿಸಿದರು.
ಸಾವಿರಾರು ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಇಡೀ ರಾಜ್ ಕುಮಾರ್ ಕುಟುಂಬ ಭಾಷೆ, ಗಡಿ ಎಲ್ಲ ಕೆಲಸದಲ್ಲೂ ಮುಂದೆ ಇದ್ದಾರೆ. ರಾಜ್ ಕುಟುಂಬದ ದುಃಖಕ್ಕೆ ಇಡೀ ರಾಜ್ಯವೇ ಭಾಗಿಯಾಗಿದೆ. ಪುನೀತ್ ನಿಧನವು ಅವರ ಪರಿವಾರಕ್ಕೆ ಶಕ್ತಿ ಕೊಡಲಿ, ಅವರ ಆದರ್ಶಗಳು ಯುವಕರಿಗೆ ಪ್ರೇರಣೆ ಆಗಲಿ ಎಂದು ಹೇಳಿದರು.