ETV Bharat / state

ಪಿಯುಸಿ ಫಲಿತಾಂಶ ಗೊಂದಲ: 3 ಸಲಹೆ, 6 ಸವಾಲುಗಳನ್ನು ಮುಂದಿಟ್ಟ ರುಪ್ಸಾ

ಎಸ್ಎಸ್ಎಲ್​ಸಿ ಫಲಿತಾಂಶ ಮತ್ತು ಪ್ರಥಮ ಪಿಯು ಫಲಿತಾಂಶವನ್ನು ಅವಲೋಕಿಸಿ ದ್ವಿತೀಯ ಫಲಿತಾಂಶವನ್ನು ನೀಡಿ ಎಂದು ಶಿಕ್ಷಣ ಸಚಿವರು ಸೂಚಿಸಿದ್ದಾರೆ. ಆದರೂ ಈ ಬಗ್ಗೆ ಗೊಂದಲಗಳು ಹೆಚ್ಚಾಗಿದ್ದು, ಫಲಿತಾಂಶ ಬಗ್ಗೆ ಶಿಕ್ಷಣ ಇಲಾಖೆಗೆ ರುಪ್ಸಾ ಸಲಹೆಯನ್ನು ನೀಡಿದೆ.

Bangalore
ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ
author img

By

Published : Jun 7, 2021, 11:06 AM IST

ಬೆಂಗಳೂರು: ಪಿಯುಸಿ ಫಲಿತಾಂಶ ವಿಚಾರ ಇನ್ನೂ ಬಗೆಹರಿಯುತ್ತಿಲ್ಲ ಎನ್ನುವಂತಾಗಿದ್ದು, ಪರೀಕ್ಷೆ ಬರೆಯದೆ ಫಲಿತಾಂಶ ನೀಡುವ ಬಗ್ಗೆ ಚರ್ಚೆ ಹೆಚ್ಚಾಗುತ್ತಿದೆ. ಫಲಿತಾಂಶದ ಬಗ್ಗೆ ಶಿಕ್ಷಣ ಇಲಾಖೆಗೆ ಸಲಹೆ ನೀಡಿರುವ ರುಪ್ಸಾ (ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಒಕ್ಕೂಟ) ರಾಜ್ಯದ 200ಕ್ಕೂ ಹೆಚ್ಚು ಖಾಸಗಿ ಕಾಲೇಜುಗಳ ಅಭಿಪ್ರಾಯ ಪಡೆದಿದೆ. ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಪ್ರಾಂಶುಪಾಲರ ಜೊತೆ ಅಭಿಪ್ರಾಯ ಮತ್ತು ವಿಚಾರ ವಿನಿಮಯ ಮಾಡಿ ಮೂರು ಪ್ರಮುಖ ಸಲಹೆ ಹಾಗೂ ಆರು ಸವಾಲುಗಳ ಪ್ರಸ್ತಾಪ ಮಾಡಿದೆ.

ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯೆ

ಪಿಯುಸಿ ಫಲಿತಾಂಶಕ್ಕೆ ಮೂರು ವರ್ಷಗಳ ಅಂಕ ಪರಿಗಣಿಸಿ ಎಂದಿದೆ. ಶೇ.30ರಷ್ಟು SSLC, ಶೇ.50ರಷ್ಟು ಪ್ರಥಮ ಪಿಯುಸಿ, ಶೇ.20ರಷ್ಟು ದ್ವಿತೀಯ ಪಿಯುಸಿ ಅಂಕ ಪರಿಗಣಿಸಿ. ಅಲ್ಲದೇ ಇಷ್ಟು ಪ್ರತಿಶತ ಅಂಕ ನೀಡುವ ಕುರಿತು ವಿವರಣೆ ಕೂಡ ರುಪ್ಸಾ ಸಂಘಟನೆ ನೀಡಿದೆ.

Bangalore
ಶಿಕ್ಷಣ ಇಲಾಖೆಗೆ ರುಪ್ಸಾ ನೀಡಿದ ಸಲಹೆಗಳು
Bangalore
ಶಿಕ್ಷಣ ಇಲಾಖೆಗೆ ರುಪ್ಸಾ ನೀಡಿದ ಸಲಹೆಗಳು

ಎಸ್​​ಎಸ್​​ಎಲ್​​ಸಿ ಪ್ರತಿ ವಿಷಯದ ಶೇ.30ರಷ್ಟು ಅಂಕ, ಪ್ರಥಮ ಪಿಯುಸಿ ವಿಷಯವಾರು ಶೇ‌.50ರಷ್ಟು ಅಂಕ ಹಾಗೂ ದ್ವೀತಿಯ ಪಿಯುಸಿಯಲ್ಲಿ ಪ್ರಾಯೋಗಿಕ ತರಗತಿ, ಮಧ್ಯ ವಾರ್ಷಿಕ ಹಾಗೂ ಜರುಗಿದ ಇತರೆ ಪರೀಕ್ಷೆಯಿಂದ‌ ಶೇ.20ರಷ್ಟು ಅಂಕ ಪರಿಗಣಿಸಿದರೆ ಒಳ್ಳೆಯದು ಎಂದು ರುಪ್ಸಾ ಅಭಿಪ್ರಾಯಪಟ್ಟಿದೆ.

Bangalore
ಶಿಕ್ಷಣ ಇಲಾಖೆಗೆ ರುಪ್ಸಾ ನೀಡಿದ ಸಲಹೆಗಳು

ಪರೀಕ್ಷೆ ಇಲ್ಲದ ಫಲಿತಾಂಶದ ಸವಾಲುಗಳೇನು?

1. ವಿದ್ಯಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ.
2. ಈ ಮೊದಲು ಅಂಕದ ಆಧಾರ, ಇದೀಗ ಗ್ರೇಡ್ ಆಧಾರ - ನೌಕರಿ ಪಡೆಯಲು ಹಳಬರೊಂದಿಗೆ ಸಂಘರ್ಷದ ಸ್ಪರ್ಧೆ.
3. ಸಿಇಟಿ, ಕಾಮೇಡ್ ಕೆ (COMED-K ) ಪರೀಕ್ಷೆಗೆ ಪಿಯುಸಿ ಅಂಕ ಪರಿಗಣಿಸುವುದು ತಾರತಮ್ಯ ಮಾಡಿದಂತೆ.
4. ಕೇಂದ್ರಿಯ ವಿದ್ಯಾರ್ಥಿಗಳ 10ನೇ ತರಗತಿಯ ಅಂಕ‌ ಹೆಚ್ಚು. ರಾಜ್ಯ ಪಠ್ಯ ಓದುವ ಮಕ್ಕಳ ಅಂಕ ಕಡಿಮೆ. ಪಿಯುಸಿ ಫಲಿತಾಂಶ ಪ್ರಕ್ರಿಯೆಯಿಂದ ರಾಜ್ಯದ ಮಕ್ಕಳಿಗೆ ಅನ್ಯಾಯ.
5. ಪಿಯುಸಿ ವಿಷಯಗಳು ಹತ್ತನೆಯ ತರಗತಿ ವಿಷಯಗಳು ಒಂದೇ ರೀತಿ ಇರದೇ ಇರುವುದು.
6. ಪಿಯುಸಿಯಲ್ಲಿ ನಿರಂತರ ಮೌಲ್ಯಮಾಪನ ಇರದೇ ಇರುವುದು.

ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶಕ್ಕೆ ಎಸ್​ಎಸ್​ಎಲ್​ಸಿ ಅಂಕಗಳ ಪರಿಗಣನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.