ಬೆಂಗಳೂರು: ಸೋಷಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇತ್ತೀಚಿನ ಹೋಟೆಲ್ನಲ್ಲಿ ಉಪಹಾರ ಸೇವಿಸಿದ ಪೋಟೋ ಒಂದನ್ನು ಶೇರ್ ಮಾಡಿದ್ದರು. ಈ ಹಿನ್ನೆಲೆ ಟ್ವೀಟಿಗರು ಇದೆಲ್ಲದರ ಬದಲು ಉಪಯುಕ್ತ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ.
ಇತ್ತೀಚೆಗೆ ಶಿವಾನಂದ ವೃತ್ತದ ಸಮೀಪದಲ್ಲಿರುವ ಜನಾರ್ದನ ಹೋಟೆಲ್ನಲ್ಲಿ ಸಿಎಂ ಉಪಹಾರ ಸೇವಿಸಿದ್ದರು. ಅದರ ಫೋಟೋವನ್ನು ಸಿಎಂ ಆಫ್ ಕರ್ನಾಟಕ ಹೆಸರಿನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಬಗ್ಗೆ ಸಾಕಷ್ಟು ಚರ್ಚೆ ಟ್ವಿಟರ್ ನಲ್ಲೇ ನಡೆದಿದೆ. ಹಲವಾರು ಜನರು ಪರ-ವಿರೋಧದ ಕಮೆಂಟ್ ಮಾಡಿದ್ದು, ಕುಮಾರಸ್ವಾಮಿ ಬೆಸ್ಟೋ, ಯಡಿಯೂರಪ್ಪ ಬೆಸ್ಟೋ ಅಂತಾ ಆನ್ ಲೈನ್ ಸಮೀಕ್ಷೆಯನ್ನೇ ಮಾಡಿಬಿಟ್ಟಿದ್ದಾರೆ.
-
ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ಸಂಜೆ ನಗರದ ಜನಾರ್ದನ ಹೋಟೆಲ್ ಗೆ ಭೇಟಿ ನೀಡಿ ಉಪಾಹಾರ ಸೇವಿಸಿದರು.@BSYBJP pic.twitter.com/B45wGEkzJL
— CM of Karnataka (@CMofKarnataka) January 11, 2020 " class="align-text-top noRightClick twitterSection" data="
">ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ಸಂಜೆ ನಗರದ ಜನಾರ್ದನ ಹೋಟೆಲ್ ಗೆ ಭೇಟಿ ನೀಡಿ ಉಪಾಹಾರ ಸೇವಿಸಿದರು.@BSYBJP pic.twitter.com/B45wGEkzJL
— CM of Karnataka (@CMofKarnataka) January 11, 2020ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ಸಂಜೆ ನಗರದ ಜನಾರ್ದನ ಹೋಟೆಲ್ ಗೆ ಭೇಟಿ ನೀಡಿ ಉಪಾಹಾರ ಸೇವಿಸಿದರು.@BSYBJP pic.twitter.com/B45wGEkzJL
— CM of Karnataka (@CMofKarnataka) January 11, 2020
ಇಂತಹದ್ದನ್ನೆಲ್ಲಾ ಯಾಕೆ ಪೋಸ್ಟ್ ಮಾಡಬೇಕು, ನಿಮ್ಮ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿರುವುದು ಯಾರು?, ಉಪಯುಕ್ತ ಮಾಹಿತಿ ನೀಡಿ ಎಂಬೆಲ್ಲಾ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ.