ಬೆಂಗಳೂರು: ಭಾನುವಾರ ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ ಸಮೀಪದ ಕುಂದಲಹಳ್ಳಿ ಜಂಕ್ಷನ್ ಸಮೀಪ ಕಳಪೆ ಕಾಮಗಾರಿ ಪರಿಣಾಮದಿಂದಾಗಿ ರಸ್ತೆ ಕುಸಿದಿದೆ. ಪರಿಣಾಮ ಬಿಜೆಪಿ 40% ಕಮಿಷನ್ಗೆ ಇದು ಸೂಕ್ತ ಉದಾಹರಣೆಯಾಗಿದೆ ಎಂದು ಜನ ಆರೋಪ ಮಾಡುತ್ತಿದ್ದಾರೆ.
ತಿಂಗಳ ಹಿಂದೆಯಷ್ಟೇ ಈ ಅಂಡರ್ ಪಾಸ್ ಅನ್ನು ಉದ್ಘಾಟಿಸಿಲಾಗಿತ್ತು. 2019 ರಲ್ಲಿ 25 ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಇತ್ತೀಚೆಗಷ್ಟೇ ವಾಹನ ಸಂಚಾರಕ್ಕೆ ಅನುಕೂಲ ಮಾಡಲಾಗಿತ್ತು. ಆದ್ರೆ ಭಾನುವಾರ ಅಂಡರ್ ಪಾಸ್ನ ಮೇಲ್ಭಾಗದ ರಸ್ತೆಯಲ್ಲಿ ಬೃಹತ್ ಗುಂಡಿಯನ್ನು ಕಂಡ ಸಾರ್ವಜನಿಕರು ಮತ್ತು ವಿರೋಧ ಪಕ್ಷದವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದು ಮಾರತ್ತಹಳ್ಳಿಯಿಂದ ವೈಟ್ ಫೀಲ್ಡ್ ಹಾಗೂ ವರ್ತೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚಾರಿಸುತ್ತವೆ. ಈ ರಸ್ತೆಯಲ್ಲಿ ಕಾವೇರಿ ನೀರಿನ ಪೈಪ್ ಲೈನ್ ಒಡೆದ ಪರಿಣಾಮದಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಸದ್ಯಕ್ಕೆ ಅಧಿಕಾರಿಗಳು ಪೈಪ್ಲೈನ್ ದುರಸ್ತಿಗೊಳಿಸಿ, ರಸ್ತೆ ಕುಸಿತ ಜಾಗದಲ್ಲಿ ಜೆಲ್ಲಿಕಲ್ಲು ತುಂಬಿ ಒಂದು ಹಂತಕ್ಕೆ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿದ್ದಾರೆ. ಆದರೆ ಸಾರ್ವಜನಿಕರು ಮಾತ್ರ ಅಧಿಕಾರಿಗಳ ವೈಫಲ್ಯತೆಯಿಂದ, ರಸ್ತೆ ಕಳಪೆ ಕಾಮಗಾರಿಯಿಂದ ಕೂಡಿದೆ. ಈ ಸಮಸ್ಯೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.
ಓದಿ: ರಸ್ತೆ ಅಪಘಾತ.. ಸಿಐಡಿ ಮಹಾನಿರ್ದೇಶಕ ಗೋವಿಂದ್ ಸಿಂಗ್ ಪತ್ನಿ ಸಾವು