ETV Bharat / state

ಎಸ್ಎಸ್ಎಲ್​ಸಿ ಫಲಿತಾಂಶದ ಬೆನ್ನಲ್ಲೇ ಪಿಯುಸಿ ದಾಖಲಾತಿ ಆರಂಭ: ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ - PU Board Orders uniform mandatory for students

ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಾಲೇಜುಗಳಲ್ಲಿ ಸಮವಸ್ತ್ರ ಗಲಾಟೆ ಆಗಿದ್ದು ಗೊತ್ತೇ ಇದೆ. ಹೀಗಾಗಿ, ಈ ಸಲ ಮುನ್ನೆಚ್ಚರಿಕೆ ವಹಿಸಿರುವ ಪಿಯು ಬೋರ್ಡ್ ಆಯಾ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧಾರದಂತೆ ಸಮವಸ್ತ್ರ ಕಡ್ಡಾಯ ಎಂದು ತಿಳಿಸಿದೆ.

ವಿದ್ಯಾರ್ಥಿಗಳು
ವಿದ್ಯಾರ್ಥಿಗಳು
author img

By

Published : May 19, 2022, 3:34 PM IST

ಬೆಂಗಳೂರು: ಎಸ್ಎಸ್ಎಲ್​ಸಿ ಪರೀಕ್ಷೆ ಫಲಿತಾಂಶ ಬೆನ್ನಲ್ಲೇ ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆ ಚುರುಕುಗೊಂಡಿದೆ. ಈಗಾಗಲೇ ಪಿಯುಸಿ ಪರೀಕ್ಷೆಗಳೆಲ್ಲವೂ ಮುಗಿದಿದ್ದು, ಇದರ ಬೆನ್ನಲ್ಲೇ ಪದವಿ ಪೂರ್ವ ಶಿಕ್ಷಣ ಇಲಾಖೆ ಶೈಕ್ಷಣಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಪ್ರಥಮ ಪಿಯುಸಿ ದಾಖಲಾತಿ ಪ್ರಕ್ರಿಯೆಯನ್ನ ಎಸ್ಎಸ್ಎಲ್​ಸಿ ಫಲಿತಾಂಶ ಪ್ರಕಟವಾದ ನಂತರ ಮೊದಲ ಕಾರ್ಯನಿರತ ದಿನದಿಂದ ಪ್ರಾರಂಭವಾಗಲಿದೆ. ಹಾಗೆಯೇ ದ್ವಿತೀಯ ಪಿಯುಸಿ ದಾಖಲಾತಿ ಪ್ರಕ್ರಿಯೆಯು ಜೂನ್ 1 ರಿಂದ ಶುರುವಾಗಲಿದೆ. ಹಾಗೆಯೇ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ತರಗತಿಗಳು ಜೂನ್ 9 ರಿಂದ ಶುರುವಾಗಲಿವೆ.

Academic schedule
ಶೈಕ್ಷಣಿಕ ವೇಳಾಪಟ್ಟಿ

ಕಳೆದ 3 ವರ್ಷಗಳಿಂದ ಶೂನ್ಯ ದಾಖಲಾತಿಯನ್ನು ಹೊಂದಿರುವ ಕಾಲೇಜುಗಳು ಯಾವುದೇ ಕಾರಣಕ್ಕೂ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ / ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಬಾರದು. ಅದಾಗಿಯೂ ಒಂದು ವೇಳೆ ದಾಖಲಾತಿ ಮಾಡಿಕೊಂಡಲ್ಲಿ ಮುಂದೆ ಸಂಭವಿಸುವ ಆಗು - ಹೋಗುಗಳಿಗೆ ಸಂಬಂಧಿಸಿದ ಕಾಲೇಜಿನ ಪ್ರಾಂಶುಪಾಲರನ್ನೇ ಆಡಳಿತ ಮಂಡಳಿ ನೇರಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧಾರದಂತೆ ಸಮವಸ್ತ್ರ: ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಾಲೇಜುಗಳಲ್ಲಿ ಸಮವಸ್ತ್ರ ಗಲಾಟೆ ಆಗಿದ್ದು ಗೊತ್ತೇ ಇದೆ. ಹೀಗಾಗಿ, ಈ ಸಲ ಮುನ್ನೆಚ್ಚರಿಕೆ ವಹಿಸಿರುವ ಪಿಯು ಬೋರ್ಡ್ ಆಯಾ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ನಿರ್ಧಾರದಂತೆ ಸಮವಸ್ತ್ರ ಕಡ್ಡಾಯ ಎಂದು ತಿಳಿಸಿದೆ. ಈಗಾಗಲೇ ಉಚ್ಚ ನ್ಯಾಯಾಲಯವು ಶಾಲಾ - ಕಾಲೇಜುಗಳಲ್ಲಿ ಸಮವಸ್ತ್ರ ಸಂಬಂಧ ಮಾರ್ಚ್ 15 ರಂದು ತೀರ್ಪು ನೀಡಿದೆ.‌

ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಸರ್ಕಾರದ ಆದೇಶವನ್ನು ಸಿಂಧುಗೊಳಿಸಿರುವ ಕಾರಣ, ಪದವಿ ಪೂರ್ವ ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಆಯಾ ಕಾಲೇಜು ಅಭಿವೃದ್ಧಿ ಸಮಿತಿಯು ನಿರ್ಧರಿಸಿರುವಂತಹ ಸಮವಸ್ತ್ರಗಳನ್ನು ಧರಿಸತಕ್ಕದ್ದು. ಆಡಳಿತ ಮಂಡಳಿಗಳು / ಸಿ.ಡಿ.ಸಿ ಸಮವಸ್ತ್ರವನ್ನು ನಿಗದಿಪಡಿಸದೇ ಇದ್ದಲ್ಲಿ ಸಮಾನತೆ ಮತ್ತು ಐಕ್ಯತೆ ಕಾಪಾಡಿಕೊಂಡು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪುಗಳನ್ನು ಧರಿಸುವಂತೆ ಸೂಚಿಸಿದೆ. ಹಾಗೆಯೇ ಈ ಸೂಚನೆಗಳನ್ನು ಉಲ್ಲಂಘಿಸಿದ್ದಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತೆ ಅಂತ ಎಚ್ಚರಿಕೆಯನ್ನ ನೀಡಿದೆ.

ಓದಿ: ಎಸ್​​ಎಸ್​​ಎಲ್​​ಸಿ ರಿಸಲ್ಟ್: ದ.ಕ ಜಿಲ್ಲೆಯ 17 ವಿದ್ಯಾರ್ಥಿಗಳಿಗೆ 625/625 ಅಂಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.