ಬೆಂಗಳೂರು: ತಮ್ಮ ರಾಜ್ಯವಾದ ಒಡಿಶಾಗೆ ತೆರಳಲು ಟಿಕೆಟ್ಗೆ ಕಾಸಿಲ್ಲದೇ ಪರದಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ಹಾಗೂ ಅವರ ಮಗಳಿಗೆ ಸ್ವಂತ ದುಡ್ಡಿನಿಂದ ಮಹಿಳಾ ಪಿಎಸ್ಐ ಒಬ್ಬರು ಟಿಕೆಟ್ ಕೊಡಿಸಿ ಕಳಿಸಿದ್ದಾರೆ.
ತಕ್ಷಣ ಅಲ್ಲೆ ಭದ್ರತೆಗೆ ನಿಯೋಜನೆ ಹೊಂದಿದ್ದ ಮಾರತ್ ಹಳ್ಳಿ ಠಾಣಾ ಪಿಎಸ್ಐ ಅನಿತಾ ಈ ವಿಚಾರ ಅರಿತು ತಮ್ಮ ಕಿಸೆಯಿಂದ 1600 ರೂ ಹಣ ನೀಡಿ ರೈಲು ಹೊರಡುವ ಕೊನೆ ಕ್ಷಣದಲ್ಲಿ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇನ್ನು ಇವರ ಕಾರ್ಯಕ್ಕೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹಾಗೂ ವೈಟ್ ಫೀಲ್ಡ್ ವಿಭಾಗದ ಅನುಚೇತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.