ETV Bharat / state

ಐಟಿ ಕಚೇರಿಗೆ ಹುಸಿ ಬಾಂಬ್ ಸಂದೇಶ: ಪೊಲೀಸರಿಗೆ ಸಿಕ್ಕಿದೆಯಂತೆ ಮಹತ್ವದ ಸುಳಿವು

author img

By

Published : Oct 24, 2019, 7:37 PM IST

ಆರೋಪಿಯ ಇ-ಮೇಲ್ ವಿಳಾಸ ಹಾಗೂ ಆತ ಎಲ್ಲಿಂದ ಇ-ಮೇಲ್ ಮಾಡಿದ್ದಾನೆ, ಎಲ್ಲಿ‌ ಕೆಲಸ ಮಾಡುತ್ತಾನೆ ಎಂಬುದರ ಬಗ್ಗೆ ಪೊಲೀಸರು ವೈಜ್ಞಾನಿಕವಾಗಿ ಪತ್ತೆ ಹಚ್ಚಿದ್ದಾರೆ. ಜೆ.ಪಿ.ನಗರದಿಂದ‌ ಹುಸಿ ಬಾಂಬ್ ಸಂದೇಶ ಕಳಿಸಿದ್ದಾನೆ ಎಂದು ಗೊತ್ತಾಗಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು‌ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ತಿಳಿಸಿದ್ದಾರೆ.

ಶೀಘ್ರದಲ್ಲೇ ಆರೋಪಿ ಬಂಧನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು: ನಗರದ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಸಂದೇಶ ರವಾನಿಸಿದ್ದ ಖದೀಮನ ಬಗ್ಗೆ ಸುಳಿವುದು ಸಿಕ್ಕಿರುವುದಾಗಿ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾಹಿತಿ ನೀಡಿದ್ದಾರೆ.

ಬುಧವಾರ ರಾತ್ರಿ ಸುಮಾರು 11.30ಕ್ಕೆ ಬಾಂಬ್ ಇಟ್ಟಿರುವುದಾಗಿ ಐಟಿ ಕಚೇರಿಯ ಹಿರಿಯ‌ ಅಧಿಕಾರಿಗಳಿಗೆ ಇ-ಮೇಲ್ ಬಂದಿತ್ತು. ಕೂಡಲೇ ಜಾಗೃತರಾಗಿ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ‌ ಹಾಗೂ ಶ್ವಾನದಳ ತಂಡಗಳಿಂದ ರಾತ್ರಿಯೆಲ್ಲ ಶೋಧ ನಡೆಸಿದ್ದೇವೆ. ಆರೋಪಿಯ ಇ-ಮೇಲ್ ವಿಳಾಸ ಹಾಗೂ ಆತ ಎಲ್ಲಿಂದ ಇ-ಮೇಲ್ ಮಾಡಿದ್ದಾನೆ, ಎಲ್ಲಿ‌ ಕೆಲಸ ಮಾಡುತ್ತಾನೆ ಎಂಬುದರ ಬಗ್ಗೆ ಪೊಲೀಸರು ವೈಜ್ಞಾನಿಕವಾಗಿ ಪತ್ತೆ ಹಚ್ಚಿದ್ದಾರೆ. ಜೆ.ಪಿ.ನಗರದಿಂದ‌ ಹುಸಿ ಬಾಂಬ್ ಸಂದೇಶ ರವಾನಿಸಿದ್ದಾನೆ ಎಂದು ಗೊತ್ತಾಗಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಪೊಲೀಸ್​ ಆಯುಕ್ತರು ತಿಳಿಸಿದ್ದಾರೆ.

ಶೀಘ್ರದಲ್ಲೇ ಆರೋಪಿ ಬಂಧನ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಹೆಚ್ಚಿನ ಓದಿಗಾಗಿ: ಬೆಂಗಳೂರಿನ ಐಟಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ: 300 ಪೊಲೀಸರಿಂದ ತಲಾಶ್

ಆರೋಪಿಯ ಹಿಂದಿರುವ ಪ್ರಮುಖ‌ ವ್ಯಕ್ತಿಯು ಪೊಲೀಸರ ಸಂಪರ್ಕಕ್ಕೆ ಸಿಕ್ಕಿದ್ದು, ಶರಣಾಗುವಂತೆ ಹೇಳಿದಾಗ ಅರೆಸ್ಟ್ ಮಾಡಲು ವಾರೆಂಟ್ ಇದೆಯಾ ಎಂದು ಅಸಂಬದ್ಧವಾಗಿ ಪ್ರಶ್ನಿಸಿ ಕರೆಕಡಿತಗೊಳಿಸಿದ್ದಾನೆ. ಸಾಮಾನ್ಯವಾಗಿ ತಮ್ಮ ಪ್ರತಾಪ ತೋರಿಸಲು, ಹುಡುಗಿ ಮೆಚ್ಚಿಸಲು ಹುಸಿ ಬಾಂಬ್ ಬೆದರಿಕೆಗಳನ್ನು ಹಾಕುತ್ತಾರೆ. ಇಂತಹ ಕರೆ ಮಾಡಿದವರನ್ನು ಈ ಹಿಂದೆ ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದೆವು. ಅದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ. ಬೆದರಿಕೆ ಕರೆ ಅಥವಾ ಬೆದರಿಕೆ ಸಂದೇಶ ಕಳಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭಾಸ್ಕರ್ ರಾವ್​ ಎಚ್ಚರಿಕೆ ರವಾನಿಸಿದ್ದಾರೆ.

Intro:Body:Mojo byte barutte

ಐಟಿ ಕಚೇರಿಗೆ ಹುಸಿ ಬಾಂಬ್ ಕರೆ: ಶೀಘ್ರದಲ್ಲೇ ಆರೋಪಿ ಬಂಧನ- ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

ಬೆಂಗಳೂರು: ಆದಾಯ ತೆರಿಗೆ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಈಮೇಲ್ ಬಾಂಬ್ ಕರೆ ಹಿನ್ನೆಲೆ ಕುರಿತಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯಿಸಿದ್ದಾರೆ.

ನಿನ್ನೆ ರಾತ್ರಿ ಸುಮಾರು 11.30ಕ್ಕೆ ಬಾಂಬ್ ಇಟ್ಟಿರುವುದಾಗಿ ಐಟಿ ಕಚೇರಿಯ ಹಿರಿಯ‌ ಅಧಿಕಾರಿಗಳು ಈ‌ಮೇಲ್ ಕರೆ ಬಂದಿದೆ. ಕೂಡಲೇ ಜಾಗೃತರಾಗಿ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ‌ ಹಾಗೂ ಶ್ವಾನದಳ ತಂಡಗಳು ರಾತ್ರಿಯೆಲ್ಲ ಶೋಧ ನಡೆಸಿದ್ದೇವೆ. ಆರೋಪಿಯ ಈಮೇಲ್ ವಿಳಾಸ ಹಾಗೂ ಆತ ಎಲ್ಲಿಂದ ಮೇಲ್ ಮಾಡಿದ್ದಾನೆ...‌ಆತ ಎಲ್ಲಿ‌ ಕೆಲಸ ಮಾಡುತ್ತಾನೆ.. ಎಂಬುದರ ನಮ್ಮ‌ ಪೊಲೀಸರು ವೈಜ್ಞಾನಿಕವಾಗಿ ಪತ್ತೆ ಹಚ್ಚಿದ್ದಾರೆ.‌‌ ಜೆ.ಪಿ.ನಗರದಲ್ಲಿ‌ ಹುಸಿ ಬಾಂಬ್ ಈ ಮೇಲ್ ಮಾಡಿದ್ದಾನೆ ಎಂದು ಗೊತ್ತಾಗಿದೆ ಶೀಘ್ರದಲ್ಲೇ ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು‌ ಮಾಹಿತಿ ನೀಡಿದ್ದಾರೆ.
ಆರೋಪಿಯ ಹಿಂದಿರುವ ಪ್ರಮುಖ‌ ವ್ಯಕ್ತಿಯು ಪೊಲೀಸರ ಸಂಪರ್ಕಕ್ಕೆ ಸಿಕ್ಕಿದ್ದು ಶರಣಾಗುವಂತೆ ಹೇಳಿದಾಗ ಅರೆಸ್ಟ್ ಮಾಡಲು ವಾರೆಂಟ್ ಇದೆಯಾ ಎಂದು ಅಸಂಬದ್ಧವಾಗಿ ಪ್ರಶ್ನಿಸಿ ಕರೆ ಕಡಿತಗೊಳಿಸಿದ್ದಾರೆ.
ಸಾಮಾನ್ಯವಾಗಿ ಹುಸಿ ಬಾಂಬ್ ಕರೆಗಳ ಹಿಂದೆ ತನ್ನ ಪ್ರತಾಪ ತೋರಿಸಲು ಹುಡುಗಿ ಮೆಚ್ಚಿಸಲು ಬಾಂಬ್ ಹುಸಿ ಕರೆಗಳನ್ನು‌ ಮಾಡುತ್ತಾರೆ. ಇಂತಹ ಕರೆ ಮಾಡಿದವರನ್ನು ಈ ಹಿಂದೆ ವಶಕ್ಕೆ ಲಘುವಾಗಿ ವಾರ್ನ್ ಮಾಡಿ ಕಳುಹಿಸುತ್ತಿದ್ದೇವು.. ಅದರೆ ಇನ್ನೂ ಮುಂದೆ ಹಾಗೇ ಮಾಡುವುದಿಲ್ಲ..ಇಂತಹ ಕರೆ ಮಾಡಿದರೆ ಇನ್ನೂ ಮುಂದೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು..

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.