ಬೆಂಗಳೂರು : ಪರಿಸರವಾದಿ ದಿಶಾ ರವಿ ಬಿಡುಗಡೆಗೆ ಆಗ್ರಹಿಸಿ ಕಾಂಗ್ರೆಸ್, ಆಪ್ ಸೇರಿ ಹಲವು ಸಂಘಟನೆಗಳು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.
ದಿಶಾ ರವಿ ಬಂಧನ ಅಸಂವಿಧಾನಕ. ರೈತರ ಪ್ರತಿಭಟನೆಗೆ ಬೆಂಬಲಿಸಿದವರನ್ನು ದೇಶ ದ್ರೋಹಿಗಳೆಂದು ಬಿಂಬಿಸಲಾಗುತ್ತಿದೆ. ಈ ವೇಳೆ ಮಾತನಾಡಿದ ಶಾಸಕಿ ಸೌಮ್ಯ ರೆಡ್ಡಿ, ಪರಿಸರ, ಪ್ರಾಣಿಗಳ ಬಗ್ಗೆ ಕಾಳಜಿ ಇರುವ ಹೆಣ್ಣುಮಗಳಿರಲಿ, ರೈತರಾಗಿರಲಿ, ಮಾಧ್ಯಮದವರಾಗಿರಲಿ, ಅಲ್ಪಸಂಖ್ಯಾತರಾಗಿರಲಿ ಬಿಜೆಪಿ ಸರ್ಕಾರದ ಕಾಯ್ದೆಯ ವಿರುದ್ಧ ಮಾತನಾಡಿದರೆ ಇದೇ ರೀತಿ ಮಾಡಲಾಗುತ್ತಿದೆ. ಅಮಾಯಕ ಹೆಣ್ಣುಮಗಳ ಮೇಲೆ ದರ್ಪ ತೋರಿಸಿದ್ದಾರೆ.
70 ದಿನದಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ, 200 ಜನ ಮೃತಪಟ್ಟಿದ್ದಾರೆ. ಒಬ್ಬ ಹೆಣ್ಣುಮಗಳ ಮೇಲೆ ಗುರಿ ಇಡುವ ಮೂಲಕ ಪ್ರತಿಭಟನಾಕಾರರನ್ನು ಹತ್ತಿಕ್ಕಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಕೃಷಿ ಕಾಯ್ದೆ ಕಡ್ಡಾಯವಲ್ಲದ ಮೇಲೆ ಏಕೆ ಕಾಯ್ದೆಯನ್ನು ಹಿಂಪಡೆಯಬಾರದು ಎಂದು ಪ್ರಶ್ನಿಸಿದರು.