ಡಿಕೆಶಿ ಬಂಧನ ಖಂಡಿಸಿ ನಾಳೆ ಪ್ರತಿಭಟನೆ: ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ರಾಮಲಿಂಗರೆಡ್ಡಿ ಸೂಚನೆ - DK shivkumar news
ಡಿಕೆಶಿ ಬಂಧನ ಖಂಡಿಸಿ ನಾಳೆ ಪ್ರತಿಭಟನೆ ನಡೆಯಲಿದ್ದು, ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಸದಂತೆ ಮಾಜಿ ಸಚಿವ ರಾಮಲಿಂಗರೆಡ್ಡಿ ಸೂಚಿಸಿದ್ದಾರೆ.
![ಡಿಕೆಶಿ ಬಂಧನ ಖಂಡಿಸಿ ನಾಳೆ ಪ್ರತಿಭಟನೆ: ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ರಾಮಲಿಂಗರೆಡ್ಡಿ ಸೂಚನೆ](https://etvbharatimages.akamaized.net/etvbharat/prod-images/768-512-4394578-960-4394578-1568107157882.jpg?imwidth=3840)
ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ನಾಳೆ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಯಾವುದೇ ರೀತಿಯ ಅಹಿತಕರ ಕೃತ್ಯ ಎಸಗದಂತೆ ಕಾರ್ಯಕರ್ತರಿಗೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದರು.
ಬೆಂಗಳೂರಿನ ಮೌರ್ಯ ಹೋಟೆಲ್ ನಲ್ಲಿ ಬೆಂಬಲಿಗರ ಸಭೆ ನಡೆಯಿತು. ಪ್ರತಿಭಟನೆ ವೇಳೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಈಗಾಗಲೇ ಕರೆ ನೀಡಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐಟಿ, ಇಡಿ ದುರ್ಬಳಕೆ ಮಾಡಲಾಗುತ್ತಿದೆ. ದೆಹಲಿಯ ಸುನೀಲ್ ಶರ್ಮಾ ಅವರ ನಿವಾಸದಲ್ಲಿ ದೊರೆತ ಹಣ ನಮ್ಮದೇ ಅಂತಾ ಸುನೀಲ್ ಶರ್ಮ ಈಗಾಗಲೇ ಹೇಳಿದ್ದಾರೆ. ಆದ್ರೂ ಕೂಡ ಅದು ಡಿಕೆಶಿ ಹಣ ಅಂತಾ ಇಡಿ ಒತ್ತಡ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷಗಳನ್ನ ಮುಗಿಸುವ ಕೆಲಸ ನಡೆಯುತ್ತಿದೆ. ಐಟಿ, ಇಡಿ, ಸಿಬಿಐ ಎಲ್ಲವೂ ಅವರ ಸುಪರ್ದಿಯಲ್ಲಿವೆ. ಐಟಿ, ಇಡಿಯವರು ಅವರ ಕೆಲಸ ಅವರು ಮಾಡಲಿ. ಅದನ್ನ ಬಿಟ್ಟು ಬಿಜೆಪಿ ನಿರ್ದೇಶನದಂತೆ ಮಾಡಿದರೆ ಸರಿಯಲ್ಲ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ದುರುದ್ದೇಶಪೂರಿತವಾಗಿ ಕಿರುಕುಳ ಕೊಡುತ್ತಿದ್ದಾರೆ. ಇದನ್ನ ವಿರೋಧಿಸಿ ನಾಳೆ ಪ್ರತಿಭಟನೆ ನಡೆಸುತ್ತೇವೆ. ಇಂದು ನಮ್ಮ ಮುಖಂಡರ ಸಭೆ ನಡೆಸಿದ್ದೇವೆ. ನ್ಯಾಷನಲ್ ಕಾಲೇಜಿನಿಂದ ಫ್ರೀಡಂಪಾರ್ಕ್ ವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಭೀಕರ ಪ್ರವಾಹದಿಂದ ನಷ್ಟವಾಗಿದೆ. ಜನರು ಅನ್ನ, ನೀರಿಲ್ಲದೇ ಬೀದಿಗೆ ಬಿದ್ದಿದ್ದಾರೆ. ಇಲ್ಲಿಯವರೆಗೆ ಒಂದೇ ಒಂದು ಪೈಸೆ ಹಣ ನೀಡಿಲ್ಲ. ಅವರು ಕೊಡೋದು ಅವರ ದುಡಿಮೆ ಹಣವನ್ನೇನಲ್ಲ. ನಾವು ತೆರಿಗೆ ಕಟ್ಟಿದ ಅನುದಾನವನ್ನೇ ನೀಡೋದು. ಅದಕ್ಕೂ ವಿಳಂಬ ಮಾಡಿದರೆ ಹೇಗೆ ಎಂದು ರಾಮಲಿಂಗಾರೆಡ್ಡಿ ಪ್ರಶ್ನೆ ಮಾಡಿದರು.
ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಅಕ್ರಮ ಬಂಧನ ವಿರೋಧಿಸಿ ನಾಳೆ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯಲ್ಲಿ ಹಲವಾರು ಸಂಘ ಸಂಸ್ಥೆಗಳು, ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗುತ್ತಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನ ಮೌರ್ಯ ಹೋಟೆಲ್ ನಲ್ಲಿ ಬೆಂಬಲಿಗರ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲು ಈಗಾಗಲೇ ಕರೆ ನೀಡಲಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐಟಿ, ಇಡಿ ದುರ್ಬಳಕೆ ಮಾಡಲಾಗುತ್ತಿದೆ. ದೆಹಲಿಯ ಸುನೀಲ್ ಶರ್ಮ ಅವರ ನಿವಾಸದಲ್ಲಿ ದೊರೆತ ಹಣ ನಮ್ಮದೇ ಅಂತಾ ಸುನೀಲ್ ಶರ್ಮ ಈಗಾಗಲೇ ಹೇಳಿದ್ದಾರೆ. ಆದ್ರೂ ಕೂಡ ಅದು ಡಿಕೆಶಿ ಹಣ ಅಂತಾ ಇಡಿ ಒತ್ತಡ ತರುತ್ತಿದ್ದಾರೆ ಎಂದು ಹೇಳಿದರು.
ಪ್ರತಿಪಕ್ಷ ಹತ್ತಿಕ್ಕುವ ಕಾರ್ಯ
ಪ್ರತಿಪಕ್ಷಗಳನ್ನ ಮುಗಿಸುವ ಕೆಲಸ ನಡೆಯುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರ ಅಂತ ಕೆಲಸ ಮಾಡುತ್ತಲೇ ಇದೆ. ಐಟಿ,ಇಡಿ,ಸಿಬಿಐ ಎಲ್ಲವೂ ಅವರ ಸುಪರ್ದಿಯಲ್ಲಿವೆ. ಐಟಿ,ಇಡಿಯವರು ಅವರ ಕೆಲಸ ಅವರು ಮಾಡಲಿ. ಅದನ್ನ ಬಿಟ್ಟು ಬಿಜೆಪಿ ನಿರ್ದೇಶನದಂತೆ ಮಾಡಿದರೆ ಸರಿಯಲ್ಲ. ಮಾಜಿ ಸಚಿವ ಡಿಕೆಶಿಯನ್ನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ದುರುದ್ದೇಶಪೂರಿತವಾಗಿ ಕಿರುಕುಳ ಕೊಡುತ್ತಿದ್ದಾರೆ. ಇದನ್ನ ವಿರೋಧಿಸಿ ನಾಳೆ ಪ್ರತಿಭಟನೆ ನಡೆಸುತ್ತೇವೆ. ಇಂದು ನಮ್ಮ ಮುಖಂಡರ ಸಭೆ ನಡೆಸಿದ್ದೇವೆ ಎಂದರು.
ನ್ಯಾಷನಲ್ ಕಾಲೇಜಿನಿಂದ ಫ್ರೀಡಂಪಾರ್ಕ್ ವರೆಗೆ ರ್ಯಾಲಿ ನಡೆಯಲಿದೆ. ಶಾಂತಿಯುತ ಪ್ರತಿಭಟನೆಗೆ ನಿರ್ಧಾರ ಮಾಡಿ ಸೂಚನೆ ನೀಡಿದ್ದೇವೆ. ನಮ್ಮ ಎಲ್ಲಾ ಮುಖಂಡರಿಗೆ ಈ ಬಗ್ಗೆ ಸೂಚಿಸಿದ್ದೇವೆ. ದೆಹಲಿಯ ಸುನೀಲ್ ಶರ್ಮಾ ನಿವಾಸದಲ್ಲಿ ಹಣ ಸಿಕ್ಕಿದೆ. 8.5 ಕೋಟಿ ಐಟಿ ದಾಳಿ ವೇಳೆ ಸಿಕ್ಕಿದೆ ಎನ್ನಲಾಗಿದೆ. ಸುನೀಲ್ ಶರ್ಮಾ ಅವರೇ ತಮ್ಮದೆಂದು ಒಪ್ಪಿದ್ದಾರೆ. ಹೀಗಿದ್ದರೂ ಡಿಕೆಶಿಯದ್ದೇ ಹಣವೆಂದು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಡಿಕೆಶಿಯನ್ನ ದುರುದ್ದೇಶಪೂರಕವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಕೇಂದ್ರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಕೆಟ್ಟ ಸಂಪ್ರದಾಯವನ್ನ ಬಿಜೆಪಿ ಬೆಳೆಸುತ್ತಿದೆ. ಇದು ಮುಂದೊಂದು ದಿನ ಅವರಿಗೇ ಶಾಪವಾಗಲಿದೆ ಎಂದು ಎಚ್ಚರಿಸಿದರು.
ಪ್ರವಾಹದಿಂದ ನಷ್ಟ
ರಾಜ್ಯದಲ್ಲಿ ಭೀಕರ ಪ್ರವಾಹದಿಂದ ನಷ್ಟವಾಗಿದೆ. ಜನರು ಅನ್ನ, ನೀರಿಲ್ಲದೆ ಬೀದಿಗೆ ಬಿದ್ದಿದ್ದಾರೆ. ಇಲ್ಲಿಯವರೆಗೆ ಒಂದೇ ಒಂದು ಪೈಸೆ ಹಣ ನೀಡಿಲ್ಲ. ಅವರು ಕೊಡೋದು ಅವರ ದುಡಿಮೆ ಹಣವನ್ನೇನಲ್ಲ. ನಾವು ತೆರಿಗೆ ಕಟ್ಟಿದ ಅನುದಾನವನ್ನೇ ನೀಡೋದು. ಅದಕ್ಕೂ ವಿಳಂಬ ಮಾಡಿದರೆ ಹೇಗೆ ಎಂದು ಕೇಂದ್ರದ ವಿರುದ್ಧ ರಾಮಲಿಂಗಾರೆಡ್ಡಿ ಪ್ರಶ್ನೆ ಮಾಡಿದರು.
ದೇಶದ ಆರ್ಥಿಕ ವ್ಯವಸ್ಥೆಯೇ ಕುಸಿದು ಬಿದ್ದಿದೆ. ಆರ್ಥಿಕ ಕುಸಿತವನ್ನ ಆರ್ ಬಿಐ ಒಪ್ಪಿಕೊಂಡಿದೆ. ನೋಟ್ ಬ್ಯಾನ್ ನಿಂದಲೂ ಆರ್ಥಿಕ ವ್ಯವಸ್ಥೆ ಕುಸಿದಿದೆ. ಇದನ್ನ ಮನಮೋಹನ್ ಸಿಂಗ್ ಸಾಕಷ್ಟು ಬಾರಿ ಹೇಳಿದ್ದಾರೆ. ಅವರ ಸಲಹೆಯನ್ನೂ ಬಿಜೆಪಿಯವರು ಕೇಳುತ್ತಿಲ್ಲ. ಇದನ್ನ ದಿಕ್ಕು ತಪ್ಪಿಸುವ ಕಾರ್ಯ ಮಾಡೋಕೆ ಬೇರೆಬೇರೆ ಪ್ರಯತ್ನ ಮಾಡ್ತಿದ್ದಾರೆ. ಕಾಂಗ್ರೆಸ್ ಶಾಸಕರ ಅನುದಾನ ತಡೆಹಿಡಿದಿದ್ದಾರೆ. ಕೈ ಶಾಸಕರ ಅನುದಾನ ಕಿತ್ತು ಬಿಜೆಪಿಯವರಿಗೆ ನೀಡಿದ್ದಾರೆ. ಬೇಕಾದರೆ ಬಿಜೆಪಿ ಶಾಸಕರಿಗೆ ಹೆಚ್ಚಿನ ಅನುದಾನ ನೀಡಲಿ. ಅದನ್ನ ಬಿಟ್ಟು ಕಾಂಗ್ರೆಸ್ ಶಾಸಕರ ಅನುದಾನ ಕಿತ್ತರೆ ಹೇಗೆ? ಇದರ ಬಗ್ಗೆಯೂ ಮುಂದೆ ಹೋರಾಟ ಮಾಡುತ್ತೇವೆ ಎಂದರು.
ಪೂರ್ವಬಾವಿ ಸಭೆ
ಇದಕ್ಕೂ ಮುನ್ನ ಮಾಜಿ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆಯ ಪೂರ್ವಭಾವಿ ಸಭೆ ನಡೆಯಿತು. ಮೌರ್ಯ ಹೋಟೆಲ್ ನಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಮಾಜಿ ಶಾಸಕ ಲಕ್ಷ್ಮೀನಾರಾಯಣ್,ಮಾಜಿ ಮೇಯರ್ ಪದ್ಮಾವತಿ, ರಾಮಚಂದ್ರಪ್ಪ, ಸಂಪತ್ ಕುಮಾರ್ , ಮಂಜುನಾಥ್ ರೆಡ್ಡಿ ಹಾಗೂ ಬೆಂಗಳೂರಿನ ಕಾಂಗ್ರೆಸ್ ಕಾರ್ಪೊರೇಟ್ ಗಳು, ಕಾಂಗ್ರೆಸ್ ಪದಾಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
Conclusion:news