ETV Bharat / state

ಕೈಗೆ ಕಪ್ಪುಪಟ್ಟಿ ಧರಿಸಿ ಬೆಂಗಳೂರು ಮೆಡಿಕಲ್ ಕಾಲೇಜು ಸ್ಟಾಫ್ ನರ್ಸ್​ಗಳಿಂದ ಪ್ರತಿಭಟನೆ

ಆರೋಗ್ಯ ಇಲಾಖೆಯ‌ ಸ್ಟಾಫ್ ನರ್ಸ್​ಗಳಿಗೆ ಸಿಗುವ ಸೌಲಭ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ಟಾಫ್ ನರ್ಸ್​ಗಳಿಗೂ ಸಿಗಬೇಕು. ನೂತನ‌ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಹಾಗೂ ಜ್ಯೋತಿ ಸಂಜೀವಿನಿ ಯೋಜನೆ ಅಡಿ ವೈದ್ಯಕೀಯ ‌ಶಿಕ್ಷಣ ಇಲಾಖೆ ಸ್ಟಾಫ್ ನರ್ಸ್​ಗಳಿಗೂ ಸೌಲಭ್ಯ ಸಿಗಬೇಕೆಂದು ಬೇಡಿಕೆ ಇಟ್ಟಿದ್ದಾರೆ.

protest
protest
author img

By

Published : Jul 30, 2020, 1:23 PM IST

ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತೋ ಇಲ್ವೋ, ಆದರೆ ಒಂದರ ಮೇಲೊಂದು ಪ್ರತಿಭಟನೆಗಳು ನಡೆಯುತ್ತಲೇ ಇದೆ. ಗುತ್ತಿಗೆ ನೌಕರರು, ವೈದ್ಯರು, ನರ್ಸ್ ಗಳು ಹೀಗೆ ಎಲ್ಲರೂ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ.

ಇದೀಗ ಕೈಗೆ ಕಪ್ಪುಪಟ್ಟಿ ಧರಿಸಿ ಬೆಂಗಳೂರು ಮೆಡಿಕಲ್ ಕಾಲೇಜ್ ಸ್ಟಾಫ್ ನರ್ಸ್ ಪ್ರತಿಭಟನೆಗಿಳಿದಿದ್ದಾರೆ. ಕೊರೊನಾ ವಿಚಾರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯಕೀಯ ಇಲಾಖೆ ಸಿಬ್ಬಂದಿ ಮೇಲೆ ತಾರತಮ್ಯದ ಆರೋಪ ಮಾಡಿದ್ದಾರೆ.

ಸ್ಟಾಫ್ ನರ್ಸ್​ಗಳಿಂದ ಪ್ರತಿಭಟನೆ

ಆರೋಗ್ಯ ಇಲಾಖೆಯ‌ ಸ್ಟಾಫ್ ನರ್ಸ್​ಗಳಿಗೆ ಸಿಗುವ ಸೌಲಭ್ಯ ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ಟಾಫ್ ನರ್ಸ್​ಗಳಿಗೂ ಸಿಗಬೇಕು. ನೂತನ‌ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಹಾಗೂ ಜ್ಯೋತಿ ಸಂಜೀವಿನಿ ಯೋಜನೆ ಅಡಿ ವೈದ್ಯಕೀಯ ‌ಶಿಕ್ಷಣ ಇಲಾಖೆ ಸ್ಟಾಫ್ ನರ್ಸ್​ಗಳಿಗೂ ಸೌಲಭ್ಯ ಸಿಗಬೇಕು ಎಂದು ಒತ್ತಾಯಿಸಿದ್ದಾರೆ.

protest by staff nurse
ಸ್ಟಾಫ್ ನರ್ಸ್​ಗಳಿಂದ ಪ್ರತಿಭಟನೆ

ಕೊರೊನಾ‌ ಕಾರ್ಯದಲ್ಲಿರುವ ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ಟಾಫ್ ನರ್ಸ್​ಗಳಿಗೆ ಪ್ರೋತ್ಸಾಹ ಧನ, ವಿಶೇಷ ಭತ್ಯೆ ನೀಡಿಲ್ಲ. ಮೂಲ ವೇತನದ ಶೇ. 50ರಷ್ಟು ಹೆಚ್ಚುವರಿ ವೇತನ ಪರಿಷ್ಕರಿಸಲು ಆಗ್ರಹಿಸಿ ಹಲವು ಬೇಡಿಕೆಗಳೊಂದಿಗೆ ಶುಶ್ರೂಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಂದಿನಿಂದ ಬೇಡಿಕೆ ಈಡೇರುವವರೆಗೂ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.