ETV Bharat / state

ನೆರೆ ಪರಿಹಾರ ನೀಡಲು ಕೇಂದ್ರದ ವಿಳಂಬ ಧೋರಣೆ ಖಂಡಿಸಿ ಅ.10ರ ನಂತರ ಪ್ರತಿಭಟನೆ..  ಕೈ ಎಂಲ್‌ಸಿ ಸಿ ಎಂ ಇಬ್ರಾಹಿಂ

author img

By

Published : Oct 5, 2019, 3:47 PM IST

ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಅಕ್ಟೋಬರ್​ 10 ರ ನಂತರ ಕಾಂಗ್ರೆಸ್ ವಿಭಿನ್ನ ಹೋರಾಟಕ್ಕೆ ಮುಂದಾಗಲಿದೆ ಎಂದು ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಅಕ್ಟೋಬರ್​ 10ರ ನಂತರ ಕಾಂಗ್ರೆಸ್ ವಿಭಿನ್ನ ಹೋರಾಟಕ್ಕೆ ಮುಂದಾಗಲಿದೆ ಎಂದು ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ ತಿಳಿಸಿದ್ದಾರೆ.

ಕಾಂಗ್ರೆಸ್ ನಾಯಕ ಸಿ ಎಂ ಇಬ್ರಾಹಿಂ..

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮಾಧ್ಯಮಗಳು, ಮಠ ಮಾನ್ಯಗಳು ರಾಜ್ಯದ ಜನರ ಪರ ಹೋರಾಟಕ್ಕೆ ಮುಂದಾಗಬೇಕು. ಇವರ ಬೆನ್ನಿಗೆ ನಾವಿರುತ್ತೇವೆ. ಅಕ್ಟೋಬರ್​ 10ಕ್ಕೆ ಅಧಿವೇಶನ ಆರಂಭವಾಗಲಿದೆ. ಇದರ ಬಳಿಕ ನಾವೂ ಪ್ರಬಲ ಹೋರಾಟಕ್ಕೆ ರೂಪುರೇಷೆ ಮಾಡಿಕೊಳ್ಳುತ್ತೇವೆ. ರಾಜ್ಯದಲ್ಲಿ ಹಿಂದೆಂದೂ ಇಂತಹ ಪ್ರವಾಹ ಆಗಿರಲಿಲ್ಲ. ಪ್ರವಾಹದಿಂದ ಸಾಕಷ್ಟು ನಷ್ಟ ಆಗಿದ್ದು, ರಾಜ್ಯ ಸರ್ಕಾರ 38 ಸಾವಿರ ಕೋಟಿ ನೆರವಿಗೆ ಕೇಂದ್ರದ ಮುಂದೆ ಬೇಡಿಕೆ ಇಟ್ಟಿದೆ.

ಇನ್ನು, ಕೇಂದ್ರ 1200 ಕೋಟಿ ಬಿಡುಗಡೆ ಮಾಡಿದ್ದು, ಸದಾನಂದಗೌಡರು ಹಂತಹಂತವಾಗಿ ಬರುತ್ತೆ ಅಂತಾರೆ. ನಾನು ಎರಡು ವರ್ಷ ಮಂತ್ರಿಯಾಗಿದ್ದವನು. ಹಿಂದೆ ಪ್ರವಾಹದ ವೇಳೆ ನಾನು ಸ್ಥಳಗಳಿಗೆ ಭೇಟಿ ನೀಡಿದ್ದೆ. ಆಗಿನ ಪ್ರಧಾನಿ ತಕ್ಷಣವೇ ಪರಿಹಾರ ಘೋಷಿಸುತ್ತಿದ್ದರು. ಈಗ ಅಧ್ಯಯನ ತಂಡವೂ ಬಂದು ಹೋಗಿದೆ. ಆದರೂ ಸಹ ಕೇಂದ್ರಕ್ಕೆ ವರದಿಯನ್ನೇ ಸಲ್ಲಿಸಿಲ್ಲವಂತೆ. ಡಿಸಿ, ತಹಶೀಲ್ದಾರ್ ಇದ್ದಾರೆ ಅವರೇ ಹಂಚುತ್ತಾರೆ. ಸಿಎಂ ಹೋಗಿ ಪರಿಹಾರ ಹಂಚುವಂತದ್ದೇನಿಲ್ಲ. ಟ್ರಜರಿಯಿಂದ ಹಣ ಬಿಡುಗಡೆ ಮಾಡಿದ್ರೇ ಸಾಕು ಎಂದರು.

ಅನರ್ಹ ಶಾಸಕರ ಕುರಿತು ಮಾತನಾಡಿ, ಪಾಪ ಪತಿವ್ರತರು 17 ಜನ ಹೋಗಿಬಿಟ್ಟಿದ್ದಾರೆ. ಅವರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಎಲ್ಲರ ಗಮನ ಅತ್ತ ಹೋಗಲಿದೆ. ಆಗ ಪ್ರವಾಹ ಸಂತ್ರಸ್ತರ ಕಥೆ ಅಷ್ಟೇ.. ಪರಿಹಾರ ವಿತರಣೆ ಆಗುವವರೆಗೆ ಎಲೆಕ್ಷನ್ ಮುಂದೂಡಿ. ಬೈ ಎಲೆಕ್ಷನ್ ಮುಂದಕ್ಕೆ ಹಾಕಿದ್ರೇನೂ ತೊಂದರೆಯಿಲ್ಲ. ಇಲ್ಲ ಅವರು ಗೆದ್ದು, ಸಚಿವ ಸ್ಥಾನಕ್ಕೆ ಕಿತ್ತಾಡೋದು ಬೇಡ ಎಂದರು.

ಇನ್ನು, ಸರ್ಕಾರದ ಪ್ರತಿನಿಧಿಗಳು ನಿರಾಶ್ರಿತರ ತಾಣಗಳಿಗೆ ಭೇಟಿ ಕೊಡುವುದಕ್ಕೆ ಪ್ರತಿ ಕಿಲೋಮೀಟರ್ 12 ರೂಪಾಯಿ ಟಿಎ/ಡಿಎ ಪಡೆದುಕೊಳ್ಳುತ್ತಿದ್ದಾರೆ. ಇದೇ ಹಣವನ್ನು ಸಂತ್ರಸ್ತರಿಗೆ ನೀಡಿದ್ರೆ ಒಂದೊಂದು ಹಳ್ಳಿಯಲ್ಲಿ 25 ಮನೆ ಕಟ್ಟಬಹುದಿತ್ತು ಎಂದರು.

Intro:newsBody:ರಾಜ್ಯಕ್ಕೆ ನೆರವು ನೀಡಲು ಕೇಂದ್ರದ ವಿಳಂಬ ಧೋರಣೆ ಖಂಡಿಸಿ ಅ.10ರ ನಂತರ ಪ್ರತಿಭಟನೆ :ಇಬ್ರಾಹಿಂ

ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯದ ನೆರೆ ಪರಿಹಾರ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಅ.10 ರ ನಂತರ ಕಾಂಗ್ರೆಸ್ ವಿಭಿನ್ನ ಹೋರಾಟಕ್ಕೆ ಮುಂದಾಗಲಿದೆ ಎಂದು ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾಧ್ಯಮಗಳು, ಮಠ ಮಾನ್ಯಗಳು ರಾಜ್ಯದ ಜನರ ಪರ ಹೋರಾಟಕ್ಕೆ ಮದಾಗಬೇಕು, ಇವರ ಬೆನ್ನಿಗೆ ನಾವಿರುತ್ತೇವೆ. ಅ.10 ಕ್ಕೆ ಅಧಿವೇಶನ ಆರಂಭವಾಗಲಿದೆ. ಇದರ ಬಳಿಕ ನಾವು ಹೋರಾಟದ ಯೋಜನೆ ರೂಪಿಸಿ ಪ್ರತಿಭಟನೆ ಸಂಬಂಧ ಯೋಜನೆ ರೂಪಿಸುತ್ತೇವೆ. ಪ್ರಭಲ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.
ರಾಜ್ಯದಲ್ಲಿ ಹಿಂದೆಂದೂ ಇಂತ ಪ್ರವಾಹ ಆಗಿರಲಿಲ್ಲ. ಪ್ರವಾಹದಿಂದ ಸಾಕಷ್ಟು ಲುಕ್ಸಾನ್ ಆಗಿದೆ. ರಾಜ್ಯ ಸರ್ಕಾರ 38 ಸಾವಿರ ಕೋಟಿ ನೆರವಿಗೆ ಕೇಂದ್ರದ ಮುಂದೆ ಬೇಡಿಕೆ ಇಟ್ಟಿದೆ. ಕೇಂದ್ರ 1200 ಕೋಟಿ ಬಿಡುಗಡೆ ಮಾಡಿದೆ. ಸದಾನಂದಗೌಡರು ಹಂತಹಂತವಾಗಿ ಬರುತ್ತೆ ಅಂತಾರೆ. ನಾನು ಎರಡು ವರ್ಷ ಮಂತ್ರಿಯಾಗಿದ್ದವನು. ಹಿಂದೆ ಪ್ರವಾಹದ ವೇಳೆ ನಾನು ಸ್ಥಳಗಳಿಗೆ ಭೇಟಿ ನೀಡಿದ್ದೆ. ಆಗಿನ ಪ್ರಧಾನಿ ತಕ್ಷಣವೇ ಪರಿಹಾರ ಘೋಷಿಸುತ್ತಿದ್ದರು. ಈಗ ಅಧ್ಯಯನ ತಂಡವೂ ಬಂದು ಹೋಗಿದೆ. ಆದರೆ ಕೇಂದ್ರಕ್ಕೆ ವರದಿಯನ್ನೇ ಸಲ್ಲಿಸಿಲ್ಲವಂತೆ. ಡಿಸಿ, ತಹಸೀಲ್ದಾರ್ ಇದ್ದಾರೆ ಅವರೇ ಹಂಚುತ್ತಾರೆ. ಸಿಎಂ ಹೋಗಿ ಪರಿಹಾರ ಹಂಚುವಂತದ್ದೇನಿಲ್ಲ. ಟ್ರಜರಿಯಿಂದ ಹಣ ಬಿಡುಗಡೆ ಮಾಡಿದ್ರೆ ಸಾಕು ಎಂದರು.
ಸಂಸದ ಶ್ರೀನಿವಾಸ್ ಪ್ರಸಾದ್ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನೆರೆಗೆ ಪರಿಹಾರ ಬಂದಿಲ್ಲ ಎಂದು ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಅವರ ಸಂಕಟ ನಮಗೆ ಗೊತ್ತಾಗ್ತಿದೆ. ಸಂತೋಷ್ ಅವರ ಕೈ ಮೇಲುಗೈ ಆಯ್ತೊ ಅಥವಾ ಬೇರೆ ಯಾರೋದೊ ಕೈ ಮೇಲುಗೈ ಆಯ್ತೊ ಅದು ನಮಗೆ ಬೇಕಿಲ್ಲ. ಕೇಂದ್ರದಿಂದ ಮಂತ್ರಿಗಳು ಬಂದ್ರು ಹೋದ್ರು. ಒಂದು ರುಪಾಯಿ ಪರಿಹಾರ ಘೋಷಣೆ ಮಾಡಲಿಲ್ಲ ಎಂದರು.
ರೇಣುಕಾಚಾರ್ಯ ವಿರುದ್ಧ ಸಿ.ಎಂ.ಇಬ್ರಾಹಿಂ ವಂಗ್ಯವಾಡಿ, ಮೊದಲು ಕಟೀಲು, ಸಿಎಂನ ಪ್ರಧಾನಿ ಮುಂದೆ ನಿಲ್ಲಿಸಿ. ಪ್ರಧಾನಿ ಮುಂದೆ ನಿಲ್ಲಿಸಿ ಅಲ್ಲಿಂದ ಪರಿಹಾರ ತನ್ನಿ. ನಾವು ಬಾಯಿ ಬಿಗಿ ಹಿಡಿಬೇಕು , ಸಡಿಲ ಹಿಡಿಬೇಕಾ? ಅವರ ಹೆಸರಲ್ಲೇ ರೇಣುಕಾಚಾರ್ಯ ಅಂತ ಇದೆ ಇನ್ನೇನು ಹೇಳೊದು ಎಂದರು.
ಇದು ಬೈಠಕ್ ಸರ್ಕಾರ. ಕೂತ ಮೇಲೆ ಎದ್ದೇಳಲು ಬಿಡಲ್ಲ. ಚಂದ್ರಯಾನ ನೋಡೋಕೆ ಬಂದ್ರು. ಪ್ರಧಾನಿಗೆ ಹಾರದ ಮೇಲೆ ಹಾರ ಹಾಕಿದ್ರು. ಆದ್ರೂ ಸಿಎಂ ಕಡೆ ಮೋದಿ ತಿರುಗಿ ನೋಡಲೇ ಇಲ್ಲ ಎಂದು ಸಿಎಂ ಯಡಿಯೂರಪ್ಪ ಬಗ್ಗೆ ಇಬ್ರಾಹಿಂ ವ್ಯಂಗ್ಯವಾಡಿದರು.
ಕೇಂದ್ರ ಇದೇ ರೀತಿಯಲ್ಲಿ ತಾರತಮ್ಯ ಮಾಡುತ್ತಾ ಹೋದ್ರೆ ರಾಜ್ಯದಲ್ಲಿ ವ್ಯತಿರಿಕ್ತವಾಗಿ ಪರಿಣಾಮಾವನ್ನು ಎದುರಿಸಬೇಕಾಗುತ್ತೆ. ಇವತ್ತು ನನ್ನ ಮನಸು ನೊಂದು ನಿಮ್ಮ ಮುಂದೆ ಇಡುತ್ತಿದ್ದೇನೆ. ಇವತ್ತು ಪಂಚ ಪೀಠದ ಸ್ವಾಮಿಗಳು ಶೋಕಾಸ್ ನೋಟಿಸ್ ಕೊಟ್ಟಿರುವ ಬಗ್ಗೆ ಮಾತಾಡುತ್ತಾರೆ. ನಳಿನ್ ಕುಮಾರ್ ಕಟೀಲು ಅವರು ಹೇಳುತ್ತಾರೆ. ಪರಿಹಾರ ಲೆಕ್ಕಾಚಾರ ಸರಿಯಾಗಿ ಕೊಟ್ಟಿಲ್ಲ ಅದಕ್ಕೆ ಪುನಃ ಸಮೀಕ್ಷೆ ಮಾಡಬೇಕು ಎಂದು ಹೇಳಿದ್ದಾರೆ. ದಯವಿಟ್ಟು ಆ ಭಾಗದ ಜನರ ಕೂಗನ್ನು ಆಲಿಸಿ. ಎತ್ತು ಏರಿಗೆ ಎಳೆಯಿತು ಕೋಣ ನೀರಿಗೆ ಎಳೆಯಿತು ಎಂದಾಗುತ್ತೆ ಎಂದರು.
ಅನರ್ಹ ಶಾಸಕರ ಕುರಿತು ಮಾತನಾಡಿ, ಪಾಪ ಪತಿವ್ರತರು 17 ಜನ ಹೋಗಿಬಿಟ್ಟಿದ್ದಾರೆ. ಅವರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ. ಎಲ್ಲರ ಗಮನ ಅತ್ತ ಹೋಗಲಿದೆ. ಆಗ ಪ್ರವಾಹ ಸಂತ್ರಸ್ಥರ ಕಥೆ ಅಷ್ಟೇ. ಪರಿಹಾರ ವಿತರಣೆ ಆಗುವವರೆಗೆ ಎಲೆಕ್ಷನ್ ಮುಂದೂಡಿ. ಬೈ ಎಲೆಕ್ಷನ್ ಮುಂದಕ್ಕೆ ಹಾಕಿದ್ರೇನೂ ತೊಂದರೆಯಿಲ್ಲ. ಇಲ್ಲ ಅವರು ಗೆದ್ದು, ಸಚಿವ ಸ್ಥಾನಕ್ಕೆ ಕಿತ್ತಾಡೋದು ಬೇಡ ಎಂದರು.
ಟಿಎಡಿಎ
ಸರ್ಕಾರ ಪ್ರತಿನಿಧಿಗಳು ನಿರಾಶ್ರಿತರ ತಾಣಗಳಿಗೆ ಭೇಟಿ ಕೊಡುವುದಕ್ಕೆ ಪ್ರತಿ ಕಿಲೋಮೀಟರ್ 12 ರುಪಾಯಿ ಟಿಎ ಡಿಎ ಪಡೆದುಕೊಳ್ಳುತ್ತಿದ್ದಾರೆ. ಇದೇ ಹಣವನ್ನು ಸಂತ್ರಸ್ತರಿಗೆ ನೀಡಿದ್ರೆ ಒಂದೊಂದು ಹಳ್ಳಿಯಲ್ಲಿ 25 ಮನೆ ಕಟ್ಟಬಹುದಿತ್ತು. ನಿಮಗೆ ಟಿಎ ಡಿಎ ಬೇಕಾದ್ರೆ ಇಟ್ಟುಕೊಳ್ಳಿ , ನೀವು ಇಪ್ಪತೈದು ಜನ ಸಂಸದರ ಜೊತೆಗೆ ಪ್ರಧಾನಿ ಮುಂದೆ ಹೋಗಿ ಆಗ್ರಹ ಮಾಡಿ. ಇದು ಮಾಡುವುದಕ್ಕೆ ಆಗಲಿಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಹೋಗಿ. ಈ ಹಿಂದೆ ನಾಯಕರುಗಳು ಹೀಗೆ ಮಾಡಿದ್ರು ಎಂದು ಸಿಎಂ ಯಡಿಯೂರಪ್ಪಗೆ ಸವಾಲು ಹಾಕಿದರು.

Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.