ನೆಲಮಂಗಲ: ಖಾಲಿ ನಿವೇಶನದ ಬಳಿ ನಿಶಕ್ತಿಯಿಂದ ಬಳಲಿ ಬಿದ್ದಿದ್ದ ವೃದ್ಧನ ರಕ್ಷಣೆ ಮಾಡಿ, ಆತನನ್ನು ಮನೆಗೆ ಸೇರಿಸುವ ಕೆಲಸವನ್ನು ಸೊಲದೇವನಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ವೆಂಕಟೇಶ್ ಮಾಡಿದ್ದಾರೆ.
ಬೆಂಗಳೂರು ಹೊರವಲಯದ ಹೆಸರಘಟ್ಟ ರಸ್ತೆಯ ಚಿಕ್ಕಸಂದ್ರ ಬಳಿಯ ಖಾಲಿ ನಿವೇಶನದ ಜಾಗದಲ್ಲಿ ವೃದ್ಧ ರಾಜಪ್ಪ (60) ನಿಶಕ್ತಿಯಿಂದ ಬಳಲಿ ಬಿದ್ದಿದ್ದರು. ಕಳೆದ 15 ದಿನದಿಂದ ಸ್ಥಳೀಯರು ಅನ್ನ ನೀರು ಕೊಟ್ಟು ವೃದ್ಧನನ್ನು ಆರೈಕೆ ಮಾಡುತ್ತಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಸೊಲದೇವನಹಳ್ಳಿ ಪೊಲೀಸ್ ಠಾಣೆಯ ಎಎಸ್ಐ ವೆಂಕಟೇಶ್, ವೃದ್ಧನ ವಿಳಾಸ ಪತ್ತೆ ಮಾಡಿ, ಆತನನ್ನು ಮನೆಗೆ ಕಳಿಸುವ ಕೆಲಸ ಮಾಡಿದ್ದಾರೆ. ಈತ ಹೆಬ್ಬಾಳ ಬಳಿಯ ನಾಗವಾರದ ನಿವಾಸಿಯಾಗಿದ್ದಾನೆ. ASI ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.