ETV Bharat / state

1,510 ಕೋಟಿ ರೂಪಾಯಿ ಆಸ್ತಿಯ ಒಡೆಯ ಎಂ.ಟಿ.ಬಿ.ನಾಗರಾಜ್; 3 ವರ್ಷದಲ್ಲಿ ₹286 ಕೋಟಿ ಹೆಚ್ಚಳ

author img

By

Published : Apr 17, 2023, 8:14 PM IST

Updated : Apr 17, 2023, 9:52 PM IST

ಸಚಿವ ಎಂ.ಟಿ.ಬಿ ನಾಗರಾಜ್ ಅವರ ಒಟ್ಟು ಆಸ್ತಿ ವಿವರ ಇಲ್ಲಿದೆ.

Minister MTB Nagaraj
ಸಚಿವ ಎಂಟಿಬಿ ನಾಗರಾಜ್

ಬೆಂಗಳೂರು : ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಮುಂಚೂಣಿಯಲ್ಲಿರುವ ಸಚಿವ ಎಂ.ಟಿ.ಬಿ.ನಾಗರಾಜ್ ಕಳೆದ ಚುನಾವಣೆಗಿಂತ ಈ ಸಾರಿ ಶೇ.50ರಷ್ಟು ತಮ್ಮ ಆಸ್ತಿ ಹೆಚ್ಚಿಸಿಕೊಂಡಿದ್ದಾರೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಎಂಟಿಬಿ ಇಂದು ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದು, ದಾಖಲೆ ಪತ್ರಗಳಲ್ಲಿ 1,510 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

2019ರ ವಿಧಾನಸಭೆ ಉಪ ಚುನಾವಣೆ ವೇಳೆ ಅವರು ಸಲ್ಲಿಸಿದ್ದ ದಾಖಲೆಯಲ್ಲಿ ಭಾರಿ ಪ್ರಮಾಣದ ಹೆಚ್ಚಳ ತೋರಿಸಿದ್ದಾರೆ. ಕೇವಲ ಮೂರು ವರ್ಷದಲ್ಲಿ ಆಸ್ತಿ 286 ಕೋಟಿ ರೂ. ಹೆಚ್ಚಾಗಿದೆ. 2018ರ ಚುನಾವಣೆಯಲ್ಲಿ 1,015 ಕೋಟಿ ರೂ. ಆಸ್ತಿಯನ್ನು ಘೋಷಿಸಿದ್ದರು. 2019ರ ಉಪಚುನಾವಣೆಯಲ್ಲಿ 1195 ಕೋಟಿ ರೂ. ಆಸ್ತಿಯನ್ನು ಘೋಷಿಸಿಕೊಂಡರು. ಅದಾದ ಬಳಿಕ, 2020ರಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆ ವೇಳೆ 1224 ಕೋಟಿ ರೂ. ಆಸ್ತಿ ವಿವರ ನೀಡಿದ್ದರು. ಇದೀಗ 1510 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಎಂಟಿಬಿ ಘೋಷಿಸಿದ್ದು, ಮೂರು ವರ್ಷದಲ್ಲಿ 286 ಕೋಟಿ ರೂ. ಆಸ್ತಿ ಹೆಚ್ಚಾಗಿದೆ.

ವಿಸ್ತೃತವಾಗಿ ಅಂಕಿಅಂಶ ಗಮನಿಸಿದಾಗ ಎಂಟಿಬಿ ನಾಗರಾಜ್‌ ಅವರು ನಾನಾ ಬ್ಯಾಂಕ್‌ಗಳಲ್ಲಿ 29.12 ಕೋಟಿ ರೂ. ಉಳಿತಾಯ ಹೊಂದಿದ್ದಾರೆ. 33.08 ಕೋಟಿ ರೂ. ನಿಶ್ಚಿತ ಠೇವಣಿ ಹೊಂದಿದ್ದಾರೆ. ಎಂಟಿಬಿ ಎಸ್ಟೇಟ್ಸ್‌ ಮತ್ತು ಪ್ರಾಪರ್ಟಿಸ್‌ನಲ್ಲಿ 196.54 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ಶಬರಿ ಎಂಟರ್‌ಪ್ರೈಸಸ್‌ ಹೆಸರಿನ ಸಂಸ್ಥೆಯಲ್ಲಿ 2.81 ಕೋಟಿ ರೂ. ಹೂಡಿಕೆ, ಎಂಟಿಬಿ ಪ್ರಾಪರ್ಟಿಸ್‌ ಪ್ರೈವೆಟ್‌ ಲಿಮಿಟೆಡ್‌ನಲ್ಲಿ 20,000 ರೂ. ಇಕ್ವಿಟಿ ಷೇರುಗಳಿವೆ. ಎಂಟಿಬಿ ಶುಭಮೇರು ಕನ್ವೆನ್ಷನ್‌ ಹಾಲ್‌ನಲ್ಲಿ 5.54 ಕೋಟಿ ರೂ. ಹೂಡಿಕೆ ಮಾಡಿದ್ದು, 105 ಕೋಟಿ ರೂ. ಸಾಲ ನೀಡಿದ್ದಾರೆ.

ಚಿನ್ನ, ಬೆಳ್ಳಿ, ವಜ್ರ : 38.88 ಲಕ್ಷ ರೂ. ಮೌಲ್ಯದ 996 ಗ್ರಾಂ ಚಿನ್ನ ಹೊಂದಿದ್ದಾರೆ. 98.93 ಲಕ್ಷ ರೂ. ಮೌಲ್ಯದ ವಜ್ರ ಇವರ ಬಳಿ ಇದೆ. 2.21 ಲಕ್ಷ ರೂ. ಮೌಲ್ಯದ ಪ್ಲಾಟಿನಂ ಒಡವೆ ಹೊಂದಿದ್ದಾರೆ. 214.5 ಕೆಜಿ ಬೆಳ್ಳಿ ಉತ್ಪನ್ನಗಳನ್ನು ಹೊಂದಿದ್ದಾರೆ. ಈ ಮೂಲಕ ಒಟ್ಟು 372.42 ಕೋಟಿ ಚರಾಸ್ತಿಯ ಒಡೆಯರಾಗಿದ್ದಾರೆ. ಇನ್ನು ಇವರ ಹೆಸರಲ್ಲಿ 49 ಎಕರೆ 8 ಗುಂಟೆ ಕೃಷಿ ಭೂಮಿ ಇದ್ದು, 71.01 ಕೋಟಿ ರೂ. ಸಾಲ ಹೊಂದಿದ್ದಾರೆ.

ಕಾರುಗಳು: ಎಂಟಿಬಿ ನಾಗರಾಜ್‌ ಬಳಿ ಹುಂಡೈ ಐ10, ಲ್ಯಾಂಡ್‌ ರೋವರ್‌ ಡಿಫೆಂಡರ್‌ ಹಾಗೂ ಮಹೀಂದ್ರಾ ಬೋಲೆರೋ ಕಾರುಗಳಿವೆ. ಪತ್ನಿ ಪೊರ್ಶೆ ಹಾಗೂ ಇನ್ನೋವಾ ಕ್ರಿಸ್ಟಾ ಕಾರು ಹೊಂದಿದ್ದಾರೆ. ಪತ್ನಿಯ ಹೆಸರಲ್ಲಿ 84.67 ಲಕ್ಷ ರೂ. ಮೌಲ್ಯದ 2.87 ಕೆಜಿ ಚಿನ್ನ ಇದ್ದು, 63.50 ಲಕ್ಷ ರೂ. ಮೌಲ್ಯದ ವಜ್ರಾಭರಣ, 2.63 ಲಕ್ಷ ಮೌಲ್ಯದ 74.55 ಗ್ರಾಂ ಪ್ಲಾಟಿನಂ ಹಾಗು 26.48 ಕೆಜಿ ಬೆಳ್ಳಿ ಇದೆ.

ಎಂಟಿಬಿ ನಾಗರಾಜ್ : ಒಟ್ಟು ಆಸ್ತಿ : 1510 ಕೋಟಿ

ಚರಾಸ್ತಿ ಮೌಲ್ಯ : 372 ಕೋಟಿ

ಸ್ಥಿರಾಸ್ತಿ ಮೌಲ್ಯ : 792 ಕೋಟಿ

ಪತ್ನಿ ಶಾಂತಮ್ಮ ನಾಗರಾಜ್ :

ಚರಾಸ್ಥಿ : 163 ಕೋಟಿ

ಸ್ಥಿರಾಸ್ಥಿ : 274 ಕೋಟಿ

ಸಾಲ : ಎಂಟಿಬಿ ನಾಗರಾಜ್ ಅವರಿಗಿರುವ​ ಸಾಲದ ಮೊತ್ತ 71 ಕೋಟಿ ರೂ, ಪತ್ನಿ ಹೆಸರಲ್ಲಿ 27 ಕೋಟಿ ಸಾಲವಿದೆ. ವಿವಿಧ ಬ್ಯಾಂಕ್​ಗಳಲ್ಲಿರುವ ಒಟ್ಟು ಸಾಲ 98 ಕೋಟಿ ರೂ ಆಗಿದೆ.

ಇದನ್ನೂ ಓದಿ : ಬಿಜೆಪಿ 3ನೇ ಪಟ್ಟಿ ರಿಲೀಸ್​: ಜಗದೀಶ್‌ ಶೆಟ್ಟರ್ ವಿರುದ್ಧ ಟೆಂಗಿನಕಾಯಿ​; ಮಹದೇವಪುರಕ್ಕೆ ಮಂಜುಳಾ ಲಿಂಬಾವಳಿ

Last Updated : Apr 17, 2023, 9:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.