ETV Bharat / state

ವಿದೇಶಿ ಪಟಾಕಿಗಳ ಆಮದಿಗೆ ನಿಷೇಧ: ಪ್ರಕಟಣೆ ಹೊರಡಿಸಿದ ರಾಜ್ಯ ಗೃಹ ಇಲಾಖೆ

ವಿದೇಶಿ ಪಟಾಕಿಗಳಿಂದಾಗಿ ದೇಶಿಯ ಗೃಹ ಕೈಗಾರಿಕೆಗಳು, ಪ್ರಕೃತಿ, ಸಾರ್ವಜನಿಕ ಭದ್ರತೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಕಾರಣಗಳಿಗೆ ವಿದೇಶಿ ಪಟಾಕಿಗಳನ್ನು ನಿಷೇಧಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ
author img

By

Published : Oct 17, 2019, 3:41 PM IST

ಬೆಂಗಳೂರು: ವಿದೇಶಿ ಪಟಾಕಿಗಳಿಂದಾಗಿ ದೇಶಿಯ ಗೃಹ ಕೈಗಾರಿಕೆಗಳು, ಪ್ರಕೃತಿ, ಸಾರ್ವಜನಿಕ ಭದ್ರತೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಕಾರಣಕ್ಕೆ ವಿದೇಶಗಳಿಂದ ಪಟಾಕಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ.

ವಿದೇಶಿ ಪಟಾಕಿಗಳನ್ನು ಮಾರಲು ತಾತ್ಕಾಲಿಕ ಪರವಾನಿಗೆಗಳನ್ನು ನೀಡುವಾಗ, ಸಂಬಂಧಪಟ್ಟ ಅಧಿಕಾರಿಗಳು ಸ್ಫೋಟಕ ಕಾಯ್ದೆ 2008, ನಿಯಮ 84 ರ ಪ್ರಕಾರ ಪರಿಶೀಲಿಸುತ್ತಾರೆ. ಆದ್ರೆ ಈ ಬಾರಿ ಪಟಾಕಿಗಳನ್ನು ಮಾರಾಟ ಮಾಡಲು ಪರವಾನಿಗೆ ನೀಡುವಾಗ ಭಾರತೀಯ ತಯಾರಿಕಾ ಕಂಪನಿಗಳಿಗೆ ಮಾತ್ರ ಆದ್ಯತೆ ನೀಡುವಂತೆ ಮತ್ತು ವಿದೇಶದಿಂದ ಆಮದಾಗುವ ಪಟಾಕಿಗಳನ್ನು ಮಾರಾಟ ಮಾಡಲು ಅನುಮತಿ ನೀಡದಂತೆ ಹಾಗೂ ವಿದೇಶಗಳಿಂದ ಆಮದಾಗುವ ಪಟಾಕಿಗಳನ್ನು ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳು, ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ಗೃಹ ಇಲಾಖೆ ನೀಡಿದೆ.

ಒಂದು ವೇಳೆ ವಿದೇಶಗಳಿಂದ ಆಮದಾಗಿರುವ ಪಟಾಕಿಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಕೂಡಲೇ ಈ ಬಗ್ಗೆ ದೂರು ನೀಡಬೇಕು. ಅಲ್ಲದೆ, ಪಟಾಕಿಗಳನ್ನು ಸಿಡಿಸುವಾಗ ಸಾರ್ವಜನಿಕರು ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Intro:ಬೆಂಗಳೂರು : ವಿದೇಶಗಳಿಂದ ಪಟಾಕಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. Body:ವಿದೇಶಿ ಪಟಾಕಿಗಳಿಂದಾಗಿ ದೇಶೀಯ ಗೃಹ ಕೈಗಾರಿಕೆಗಳು, ಪ್ರಕೃತಿ, ಸಾರ್ವಜನಿಕ ಭದ್ರತೆ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಆಮದಾಗುವ ಪಟಾಕಿಗಳು ಪ್ರಕೃತಿ ಹಾಗೂ ಸಾರ್ವಜನಿಕರ ಮೇಲೆ ದುಷ್ಪರಿಣಾಮ ಬೀರುವುದರಿಂದ ವಿದೇಶಿ ಪಟಾಕಿಗಳನ್ನು ಮಾರಾಟ ಮಾಡಲು ತಾತ್ಕಾಲಿಕ ಪರವಾನಗಿಗಳನ್ನು ನೀಡುವಾಗ, ಸಂಬಂಧಪಟ್ಟ ಅಧಿಕಾರಿಗಳು ಸ್ಪೋಟಕ ಕಾಯ್ದೆ 2008, ನಿಯಮ 84 ರ ಪ್ರಕಾರ ಪರವಾನಿಗೆ ನೀಡಬೇಕಾಗುತ್ತದೆ. ಆದುದರಿಂದ, ಪಟಾಕಿಗಳನ್ನು ಮಾರಾಟ ಮಾಡಲು ಪರವಾನಿಗಿ ನೀಡುವಾಗ ಭಾರತೀಯ ತಯಾರಿಕಾ ಕಂಪನಿಗಳಿಗೆ ಮಾತ್ರ ಆದ್ಯತೆ ನೀಡುವಂತೆ, ವಿದೇಶದಿಂದ ಆಮದಾಗುವ ಪಟಾಕಿಗಳನ್ನು ಮಾರಾಟ ಮಾಡಲು ಅನುಮತಿ ನೀಡದಂತೆ ಹಾಗೂ ವಿದೇಶಗಳಿಂದ ಆಮದಾಗುವ ಪಟಾಕಿಗಳನ್ನು ಮಾರಾಟ ಮಾಡುವವರ ವಿರುದ್ದ ಸೂಕ್ತ ಕ್ರಮಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳು, ಎಲ್ಲಾ ಪೊಲೀಸ್ ಆಯುಕ್ತರು ಹಾಗೂ ಎಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಕ್ತ ನಿರ್ದೇಶನವನ್ನು ಗೃಹ ಇಲಾಖೆ ನೀಡಿದೆ.
ಒಂದು ವೇಳೆ ವಿದೇಶಗಳಿಂದ ಆಮದಾಗಿರುವ ಪಟಾಕಿಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೂಡಲೇ ಈ ಬಗ್ಗೆ ದೂರು ನೀಡುವುದು ಹಾಗೂ ಪಟಾಕಿಗಳನ್ನು ಸಿಡಿಸುವಾಗ ಸಾರ್ವಜನಿಕರು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.