ETV Bharat / state

ದೂರು-ಪ್ರತಿದೂರು: ಹೆಂಡ್ತಿ ವಿರುದ್ಧ ಪೊಲೀಸ್ ಠಾಣಾ ಮೆಟ್ಟಿಲೇರಿದ ಸ್ಯಾಂಡಲ್​ವುಡ್ ನಿರ್ಮಾಪಕ.. ಗಂಡನ ವಿರುದ್ಧ ಪ್ರತಿದೂರು​ ದಾಖಲಿಸಿದ ಪತ್ನಿ - ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆ

ನಟ ಹಾಗೂ ನಿರ್ಮಾಪಕ ಟಿ ಚಂದ್ರಶೇಖರ್ ತಮ್ಮ ಹೆಂಡತಿ ವಿರುದ್ಧ ಪೊಲೀಸ್​ ಠಾಣಾ ಮೆಟ್ಟಿಲೇರಿದ್ದಾರೆ. ಪತ್ನಿ ಕೂಡ ಪತಿ ವಿರುದ್ಧ ಪ್ರತಿದೂರು ನೀಡಿದ್ದಾರೆ.

t chandrashekar
ಟಿ ಚಂದ್ರಶೇಖರ್
author img

By

Published : Jun 26, 2023, 1:10 PM IST

ಬೆಂಗಳೂರು: ತಮ್ಮ ಪತ್ನಿ ಮಾದಕ ವ್ಯಸನಿ, ಮಾದಕ ವಸ್ತು ಸರಬರಾಜುಗಾರನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಸ್ಯಾಂಡಲ್​ವುಡ್​ ನಟ ಹಾಗೂ ನಿರ್ಮಾಪಕರೊಬ್ಬರು ಪೊಲೀಸ್​ ಠಾಣಾ ಮೆಟ್ಟಿಲೇರಿದ್ದಾರೆ. 'ಹೀಗೊಂದು ದಿನ' ಹಾಗೂ 'ಅಪ್ಪುಗೆ' ಎಂಬ ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಟಿ ಚಂದ್ರಶೇಖರ್​ ತಮ್ಮ ಪತ್ನಿ ನಮಿತಾ ಮತ್ತು ಲಕ್ಷ್ಮೀಶ್​ ಪ್ರಭು ಎಂಬುವರ ವಿರುದ್ಧ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಆರೋಪವೇನು..?: ಎರಡು ವರ್ಷಗಳ ಹಿಂದೆ ಚಂದ್ರಶೇಖರ್​ ಹಾಗೂ ನಮಿತಾ ವಿವಾಹವಾಗಿದ್ದು, ಬನಶಂಕರಿ ಎರಡನೇ ಹಂತದ ಚೆನ್ನಮ್ಮಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು. ತನ್ನ ಪತ್ನಿ ಮಾದಕ ವ್ಯಸನಿಯಾಗಿದ್ದು, ಬುದ್ಧಿವಾದ ಹೇಳಿದರೂ ಸಹ ಕದ್ದುಮುಚ್ಚಿ ಮಾದಕ ಪದಾರ್ಥ ಸೇವಿಸುವ ಅಭ್ಯಾಸ ಹೊಂದಿದ್ದಾಳೆ. ಈ ಜನವರಿಯಿಂದ ಆಕೆಗೆ ಲಕ್ಷ್ಮೀಶ್ ಪ್ರಭು ಎಂಬ ಡ್ರಗ್ ಪೆಡ್ಲರ್ ಜೊತೆ ಅನೈತಿಕ ಸಂಬಂಧವಿದೆ. ಮನೆಯಲ್ಲಿ ಪತ್ನಿ ಹಾಗೂ ಲಕ್ಷ್ಮೀಶ್ ದೈಹಿಕ ಸಂಪರ್ಕದಲ್ಲಿದ್ದ ವೇಳೆ ನೋಡಿ ಪ್ರಶ್ನಿಸಿದಾಗ ಇಬ್ಬರೂ ಸೇರಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಟ, ನಿರ್ಮಾಪಕ ಚಂದ್ರಶೇಖರ್​ ಆರೋಪಿಸಿದ್ದಾರೆ.

ಪತಿ ವಿರುದ್ಧ ಪತ್ನಿ ಪ್ರತಿದೂರು: ಪತಿ ಟಿ ಚಂದ್ರಶೇಖರ್​ಗೆ ಮೊದಲನೇ ಮದುವೆಯಾಗಿದ್ದು, ಮಕ್ಕಳಿದ್ದಾರೆ. ತನ್ನ ಸ್ನೇಹಿತ ಲಕ್ಷ್ಮೀಶ್​ ಪ್ರಭುಗೆ ವಿನಾಕರಣ ಚಂದ್ರಶೇಖರ್​ ಮತ್ತು ಆತನ ಸ್ನೇಹಿತರಾದ ಅರುಣ್, ಹೇಮಂತ್ ಥಳಿಸಿದ್ದಾರೆ‌. ಅಲ್ಲದೇ ಆತನ ಬಟ್ಟೆ ಬಿಚ್ಚಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ತನ್ನ ಮೇಲೆಯೂ ಚಾಕುವಿನಿಂದ ಹಲ್ಲೆ ಮಾಡಿದ್ದು, 'ಮನೆಯಲ್ಲಿ ಡ್ರಗ್ಸ್ ಇಟ್ಟು ಅರೆಸ್ಟ್ ಮಾಡಿಸ್ತೀನಿ' ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಮಿತಾ ತಮ್ಮ ಪತಿ ವಿರುದ್ಧ ಪ್ರತಿದೂರು ನೀಡಿದ್ದಾರೆ.

ಸದ್ಯ ಈ ನಟ ಹಾಗೂ ನಿರ್ಮಾಪಕನ ಕೌಟುಂಬಿಕ ಕಲಹ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪರಸ್ಪರ ದೂರು ಹಾಗೂ ಪ್ರತಿದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಿವೇಶನ ಮಾರಾಟ ಹೆಸರಿನಲ್ಲಿ ನಟ ಮಾಸ್ಟರ್ ಆನಂದ್​ಗೆ ವಂಚನೆ - ದೂರು ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.