ETV Bharat / state

ಡ್ರಗ್ಸ್​ ಪ್ರಕರಣ: ನಿರ್ಮಾಪಕನ ಬಂಧನ ಬೆನ್ನಲ್ಲೇ ಸಂಪರ್ಕದಲ್ಲಿದ್ದವರಿಗೂ ನಡುಕ

ಕನ್ನಡ ಚಿತ್ರರಂಗ ಸಂಜನಾ, ರಾಗಿಣಿ ಡ್ರಗ್ಸ್​ ಪ್ರಕರಣದ ಶಾಕ್​ನಿಂದ ಹೊರ ಬರುವ ಮುನ್ನವೇ ಮತ್ತೋರ್ವ ನಿರ್ಮಾಪಕ ಶಂಕರ್ ಗೌಡ ಡ್ರಗ್ಸ್ ಕೇಸ್​ನಲ್ಲಿ ಸಿಕ್ಕಿಹಾಕಿಕೊಂಡಿರುವುದು ಬೆಂಬಲಿಗರಿಗೆ ನಡುಕ ಉಂಟುಮಾಡಿದೆ. ಈತನ ಸಂಪರ್ಕದಲ್ಲಿದ್ದ ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್​ನ ಹಲವು ನಟ-ನಟಿಯರಿಗೆ ಈಗ ಢವ ಢವ ಶುರುವಾಗಿದೆ.

ನಿರ್ಮಾಪಕ ಶಂಕರ್ ಗೌಡ
ನಿರ್ಮಾಪಕ ಶಂಕರ್ ಗೌಡ
author img

By

Published : Mar 24, 2021, 4:48 PM IST

ಬೆಂಗಳೂರು: ನಟಿಯರಾದ ರಾಗಿಣಿ ಮತ್ತು ಸಂಜನಾ ಡ್ರಗ್ಸ್ ಪ್ರಕರಣದ ಬಳಿಕ ತನಿಖೆಗೆ ಸಣ್ಣ ವಿರಾಮ ನೀಡಲಾಗಿತ್ತು. ಸದ್ಯ ನಿರ್ಮಾಪಕ ಶಂಕರ್ ಗೌಡ ಬಂಧನದ ಮೂಲಕ ಗೋವಿಂದಪುರ ಠಾಣೆ ಪೊಲೀಸರು ಸೆಕೆಂಡ್ ಹಾಫ್ ಶುರುಮಾಡಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಅಂದು ಸಿಸಿಬಿ ಪೊಲೀಸರು ನಟಿಯರಾದ ರಾಗಿಣಿ ಹಾಗೂ ಸಂಜನಾರನ್ನು ಬಂಧನ ಮಾಡಿದ್ದೇ ತಡ. ಇಡೀ ಚಿತ್ರರಂಗವೇ ಬೆಚ್ಚಿ ಬಿದ್ದಿತ್ತು. ದೊಡ್ಡ ದೊಡ್ಡ ಸ್ಟಾರ್ ಗಳು ಸೆಲೆಬ್ರೆಟಿಗಳಿಗೆ ಢವಢವ ಅಷ್ಟೇ ಅಲ್ಲಾ ಇದೇ ಕೇಸ್​ನಲ್ಲಿ ನಟ ದಿಗಂತ್, ನಟಿ ಐಂದ್ರಿತಾ, ಆ್ಯಂಕರ್ ಅಕುಲ್ ಬಾಲಾಜಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ವಿಚಾರಣೆ ಎದುರಿಸಿದ್ದರು. ಚಿತ್ರರಂಗ ಈ ಶಾಕ್​ನಿಂದ ಹೊರ ಬರುವ ಮುನ್ನವೇ ಮತ್ತೋರ್ವ ನಿರ್ಮಾಪಕ ಶಂಕರ್ ಗೌಡ ಡ್ರಗ್ಸ್ ಕೇಸ್​ನಲ್ಲಿ ಸಿಲುಕಿದ್ದಾರೆ. ಈತನ ಸಂಪರ್ಕದಲ್ಲಿದ್ದ ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್ ಹಾಗೂ ಟಾಲಿವುಡ್​ನ ಹಲವು ನಟ-ನಟಿಯರಿಗೆ ಈಗ ಢವಢವ ಶುರುವಾಗಿದೆ.

ತಮ್ಮ ಕಚೇರಿಯಲ್ಲೇ ಡ್ರಗ್ಸ್ ಪಾರ್ಟಿ ಮಾಡ್ತಿದ್ದ ನಿರ್ಮಾಪಕ ಶಂಕರೇಗೌಡ:

ಶಂಕರ್ ಗೌಡ ಸಂಜಯ್ ನಗರದ ತಮ್ಮ ಕಚೇರಿಯಲ್ಲಿ ಡ್ರಗ್ಸ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ವಾಸನೆ ಗೋವಿಂದಪುರ ಠಾಣೆ ಪೊಲೀಸರ ಮೂಗಿಗೆ ಬಡಿದಿದೆ. ಅಷ್ಟೇ ಅಲ್ಲಾ, ಕೆಲವು ಫ್ಯಾಷನ್ ಶೋಗಳನ್ನು ಆಯೋಜಿಸಿ, ಅಲ್ಲಿಗೆ ಬರುವ ಮಂದಿಗೆ ಡ್ರಗ್ಸ್​ ಪೆಡ್ಲರ್ ಜಾನ್ ಹಾಗೂ ಬಿಗ್​ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರ ಮೂಲಕ ಡ್ರಗ್ಸ್ ತರಿಸಿಕೊಂಡು ನಶೆಯಲ್ಲಿ ತೇಲಾಡಿಸ್ತಿದ್ದ ಎನ್ನಲಾಗ್ತಿದೆ. ಇದನ್ನು ಖಚಿತಪಡಿಸಿಕೊಂಡು ಎಲ್ಲಾ ಸಾಕ್ಷ್ಯಾಧಾರ ಕಲೆಹಾಕಿದ ಖಾಕಿ ಪಡೆ ಮಾರ್ಚ್ 8ರಂದು ಸಂಜಯ ನಗರದಲ್ಲಿರುವ ಶಂಕರೇಗೌಡ ಕಚೇರಿ ಮೇಲೆ ದಾಳಿ ಮಾಡಿದ್ದರು. ಹಲವು ಬಾರಿ ಠಾಣೆಗೆ ಕರೆಯಿಸಿ ವಿಚಾರಣೆ ಬಳಿಕ ಬಂಧಿಸಿದ್ದಾರೆ‌.

ಅಕ್ರಮ ಚಟುವಟಿಕೆಗಳಿಗೆ ಸ್ಥಳಾವಕಾಶ ನೀಡಿದ್ದು, ಮಾದಕ ವಸ್ತು ಸರಬರಾಜುಗಾರರಿಗೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷ ನೆರವು ನೀಡಿದ್ದು, ಕ್ರಿಮಿನಲ್ ಉದ್ದೇಶದಿಂದ ಪಾರ್ಟಿಗಳ ಆಯೋಜನೆ ಮಾಡಿದ ಆರೋಪದಡಿಯಲ್ಲಿ ಶಂಕರೇಗೌಡನನ್ನು ಬಂಧಿಸಿರುವ ಗೋವಿಂದಪುರ ಠಾಣೆ ಪೊಲೀಸರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ‌.

ಒನ್ ಲವ್ ಪಾಸ್​ವರ್ಡ್ ಮೂಲಕ ಡ್ರಗ್ ಪೆಡ್ಲಿಂಗ್..!

ಶಂಕರ್ ಗೌಡ ಆಯೋಜನೆ ಮಾಡುತ್ತಿದ್ದ ಪಾರ್ಟಿಗೆ ಡ್ರಗ್ಸ್ ಹೇಗೆ ಸರಬರಾಜು ಆಗುತಿತ್ತು ಎಂಬುದನ್ನು ನೋಡುವುದಾದರೆ ಬಂಧನಕ್ಕೆ ಒಳಗಾಗಿರುವ ಪೆಡ್ಲರ್ ಜಾನ್ ಹಾಗೂ ಮಸ್ತಾನ್ ಚಂದ್ರ ಒನ್ ಲವ್ ಎಂಬ ಪಾಸ್​ವರ್ಡ್ ಮೂಲಕ ವ್ಯವಹರಿಸುತ್ತಿದ್ದರು ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಪೆಡ್ಲರ್ ಜಾನ್ ಮೂಲಕ ಪಡೆದ ಮಾದಕ ವಸ್ತುವನ್ನು ಮಸ್ತಾನ್ ಚಂದ್ರ ಶಂಕರೇಗೌಡ ಆಯೋಜನೆ ಮಾಡ್ತಿದ್ದ ಪಾರ್ಟಿಗೆ ಸರಬರಾಜು ಮಾಡುತ್ತಿದ್ದ ಎಂದು ಹೇಳಲಾಗ್ತಿದೆ. ಒಟ್ಟಿನಲ್ಲಿ ಸ್ಯಾಂಡಲ್​ವುಡ್ ಡ್ರಗ್ಸ್ ಘಾಟು ಸದ್ಯಕ್ಕೆ ಮುಗಿಯುವ ಲಕ್ಷಣೆಗಳೇ ಕಾಣಿಸುತ್ತಿಲ್ಲ.

ಶಂಕರ್ ​ಗೌಡನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದರು. ಮಾರ್ಚ್​ 8ರಂದು ಈತನ ನಿವಾಸದ ಮೇಲೆ ಗೋವಿಂದಪುರ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ಶಂಕರ್​ ಗೌಡ 'ಕೆಂಪೇಗೌಡ' ಚಿತ್ರದ ನಿರ್ಮಾಪಕ.

ಇದನ್ನೂ ಓದಿ.. ಗೋವಿಂದಪುರ ಡ್ರಗ್ಸ್​ ಕೇಸ್​: ಕೆಂಪೇಗೌಡ ಸಿನಿಮಾ ನಿರ್ಮಾಪಕ ಶಂಕರ್​ಗೌಡ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.