ETV Bharat / state

ನೂತನ ಶಿಕ್ಷಣ ನೀತಿ ಉದ್ದೇಶ ಮೇಕ್ ಇನ್ ಇಂಡಿಯಾ ಅಲ್ಲ, ಮೇಕ್ ಇನ್ ಅಮೆರಿಕ ಆಗಿದೆ: ಪ್ರೋ. ರಾಧಾಕೃಷ್ಣ

author img

By

Published : Jul 31, 2021, 5:43 PM IST

ಕೆಪಿಸಿಸಿ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪ್ರೊ.ಕೆ.ಈ.ರಾಧಾಕೃಷ್ಣ ಅವರು ಬಿಜೆಪಿಯವರು ಜಾರಿಗೆ ತಂದಿರುವ ನೂತನ ಶಿಕ್ಷಣ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Pro Radha Krishna
ಪ್ರೋ. ರಾಧಾಕೃಷ್ಣ

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರದ ನೂತನ ಶಿಕ್ಷಣ ನೀತಿ ದೇಶದ ಶೈಕ್ಷಣಿಕ ಕ್ಷೇತ್ರವನ್ನೇ ಹಳ್ಳ ಹಿಡಿಸಲಿದ್ದು, ಇದರ ಉದ್ದೇಶ ಮೇಕ್ ಇನ್ ಇಂಡಿಯಾ ಅಲ್ಲ, ಬದಲಿಗೆ ಮೇಕ್ ಇನ್ ಅಮೆರಿಕ ಎಂಬಂತಾಗಿದೆ. ಈ ನೀತಿಯೂ ಡಿಜಿಟಲ್ ವಿಭಜನೆಯಿಂದ ಶ್ರೀಮಂತರು ಹಾಗೂ ಬಡವರ ನಡುವಣ ಅಂತರವನ್ನು ಮತ್ತಷ್ಟು ಹೆಚ್ಚಿಸಲಿದ್ದು, ಇದು ವಿಭಜಕ ಶಿಕ್ಷಣ ನೀತಿಯಾಗಿದೆ ಎಂದು ಕೆಪಿಸಿಸಿ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಪ್ರೊ.ಕೆ.ಈ.ರಾಧಾಕೃಷ್ಣ ಹೇಳಿದರು.

ಕೇಂದ್ರ ಸರ್ಕಾರದ ನೂತನ ಶಿಕ್ಷಣ ನೀತಿ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಶಿಕ್ಷಣ ನೀತಿಯಲ್ಲಿ ಸಾಕಷ್ಟು ಅಪಾಯಕಾರಿ ಅಂಶಗಳಿದ್ದು, ಇದು ಒಂದು ಮೋಸ ಎಂದು ಕರೆಯಬಹುದು. ಕಾರಣ ದೇಶದಲ್ಲಿ ಶೇ.47ರಷ್ಟು ಮಂದಿ ಆಂತರಿಕ ವಲಸಿಗರಾಗಿದ್ದು, ಕೋವಿಡ್ ಸಮಯದಲ್ಲಿ 23 ಕೋಟಿ ಜನರು ಬಡತನ ರೇಖೆಗಿಂತ ಕೆಳಗೆ ತಳ್ಳಲ್ಪಟ್ಟಿದ್ದಾರೆ.

ಈ ಕುಟುಂಬದ ಮಕ್ಕಳನ್ನು ಈ ನೂತನ ಶಿಕ್ಷಣ ನೀತಿಯಲ್ಲಿ ನಿರ್ಲಕ್ಷಿಸಲಾಗಿದೆ. ಆನ್​​ಲೈನ್ ಶಿಕ್ಷಣ ಎನ್ನುವ ಬಿಜೆಪಿ ಸರ್ಕಾರ ಅದಕ್ಕೆ ಪೂರಕವಾಗಿ ಆಫ್​ಲೈನ್ ಶಿಕ್ಷಣ ವ್ಯವಸ್ಥೆ ನೀಡಲು ಗಮನಹರಿಸಿಲ್ಲ. ಇನ್ನು ಡಿಜಿಟಲ್ ವಿಭಜನೆ ಹೆಚ್ಚಾಗಿದ್ದು, ಇದೊಂದು ವಿಭಜಕ ಶಿಕ್ಷಣ ನೀತಿಯಾಗಿದೆ ಎಂದು ಟೀಕಿಸಿದರು.

ಅಧ್ಯಾಪಕರ ಕೊರತೆ:

ದೇಶದಲ್ಲಿ ಅಧ್ಯಾಪಕರ ಕೊರತೆ ಹೆಚ್ಚಾಗಿದೆ. 2015ರ ವೇಳೆಗೆ ಸಾಕ್ಷರತೆ ಮತ್ತು ಗಣಿತಜ್ಞಾನ ಹೆಚ್ಚುಸುತ್ತೇವೆ ಎನ್ನುವ ಪ್ರಧಾನಿಗಳು ತಮ್ಮ 7 ವರ್ಷದ ಆಡಳಿತ ಅವಧಿಯಲ್ಲಿ ಶಿಕ್ಷಣ ವ್ಯವಸ್ಥೆ ಎಷ್ಟು ಪ್ರಮಾಣದಲ್ಲಿ ಕುಸಿದಿದೆ ಎಂಬುದನ್ನು ಅರಿತಿಲ್ಲ. ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣದಲ್ಲಿ ಶೇ.50 ರಷ್ಟು ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣ ನೀಡುವುದಾಗಿ ಹೇಳುತ್ತಾರೆ.

ಆದರೆ, ಈ ವಿಚಾರವಾಗಿ ಯಾವುದೇ ಪ್ರಾಥಮಿಕ ಪ್ರಯತ್ನವನ್ನು ಮಾಡಿಲ್ಲ. ದೇಶದಲ್ಲಿನ ಐಐಟಿ ಸಂಸ್ಥೆಗಳ ದುಃಸ್ಥಿತಿ ಬಗ್ಗೆ ಪ್ರಧಾನಮಂತ್ರಿಗಳು ಮನ್ ಕಿ ಬಾತ್​​ನಲ್ಲಿ ಮಾತನಾಡುವುದಿಲ್ಲ. ಇನ್ನು ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಶೇ.60ರಷ್ಟು ಅಧ್ಯಾಪಕರು ಅತಿಥಿ ಉಪನ್ಯಾಸಕರಾಗಿದ್ದಾರೆ. ಈ ಸಂದರ್ಭದಲ್ಲಿ ಶಿಕ್ಷಕರ ತರಬೇತಿಗೆ ಯಾವ ಸಮಗ್ರ ಯೋಜನೆ ಹಾಕಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ವಿವಿಗಳು ಕಲಿಕಾ ಕಾಲೇಜುಗಳಾಗಬಾರದು:

ಇನ್ನು ವಿಶ್ವವಿದ್ಯಾಲಯಗಳನ್ನು ಸಂಶೋಧನಾ, ಸ್ವಾಯತ್ತ ಹಾಗೂ ಕಲಿಕಾ ವಿಶ್ವವಿದ್ಯಾಲಯ ಎಂದು ವಿಂಗಡನೆ ಮಾಡುವ ಕ್ರಮ ಹಾಸ್ಯಾಸ್ಪದ. ವಿಶ್ವವಿದ್ಯಾಲಯ ಎಂದರೆ ಸಂಶೋಧನೆ ಹಾಗೂ ಕಲಿಕೆಯ ಕೇಂದ್ರ. ಸಂಶೋಧನೆಯನ್ನು ವಿಶ್ವವಿದ್ಯಾಲಯಗಳಿಂದ ಪ್ರತ್ಯೇಕ ಮಾಡಿದರೆ ಅದು ವಿಶ್ವವಿದ್ಯಾಲಯವಾಗುವುದಿಲ್ಲ.

ಕೇವಲ ಕಲಿಕಾ ಕಾಲೇಜು ಕೇಂದ್ರವಾಗುತ್ತದೆ. ಇನ್ನು ದೇಶದ ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಮಟ್ಟದಲ್ಲಿ ಪ್ರಶಂಸಾರ್ಹ ಸಂಶೋಧನೆಗಳನ್ನು ಮಾಡಿರುವ ಉಲ್ಲೇಖವೂ ಇಲ್ಲವಾಗಿದೆ.

2035ರ ವೇಳೆಗೆ ಶೇ.50ರಷ್ಟು ಉನ್ನತ ಶಿಕ್ಷಣ ಪ್ರವೇಶಾತಿ ಹೆಚ್ಚಿಸುವ ಗುರಿ ಹೊಂದಿರುವ ಕೇಂದ್ರ ಸರ್ಕಾರ ಅದಕ್ಕಾಗಿ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಈಗಾಗಲೇ ಉನ್ನತ ಶಿಕ್ಷಣ ಮಾಡಿರುವ ಸ್ನಾತಕೋತ್ತರ ಪದವೀಧರರು ಉತ್ತರ ಪ್ರದೇಶದಲ್ಲಿ ಸ್ವಚ್ಛತಾ ಕೆಲಸಕ್ಕೆ ಅರ್ಜಿ ಹಾಕಿರುವುದನ್ನು ಮಾಧ್ಯಮಗಳ ವರದಿಯಲ್ಲಿ ನೋಡಿದ್ದೇವೆ ಎಂದು ಹರಿಹಾಯ್ದರು.

ಕೇವಲ ಪ್ರಚಾರ:

ಘೋಷಣೆಗಳ ಮೂಲಕ ಪ್ರಚಾರ ಪಡೆಯುವ ಮೋದಿ ಅವರು ಸ್ಲೋಗನ್ ಸೇನಾಪತಿಯಾಗಿದ್ದಾರೆ. ಆಲ್ ಫಾರ್ ಆಲ್ ಎಂಬ ಪರಿಕಲ್ಪನೆಯಲ್ಲಿ ಎಲ್ಲಾ ವಯಸ್ಸಿನವರಿಗೆ ಕೃತಕ ಬುದ್ದಿಮತ್ತೆ ಮೂಲಕ ಶಿಕ್ಷಣ ನೀಡುವುದಾಗಿ ಹೇಳುತ್ತಾರೆ. ಆದರೆ, ದೇಶದಲ್ಲಿ ಈಗಾಗಲೆ ಸಾವಿರಾರು ಮಂದಿ ಅಥಿತಿ ಶಿಕ್ಷಕರು ಸಂಕಷ್ಟದಲ್ಲಿದ್ದಾರೆ. ಜೊತೆಗೆ ಶಿಕ್ಷಕರು ರಸ್ತೆಬದಿಯಲ್ಲಿ ತರಕಾರಿ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಸ್ಥಳೀಯ ಭಾಷೆಯಲ್ಲಿ ಇಂಜಿನಿಯರಿಂಗ್ ಕಾರ್ಯಕ್ರಮ ಎನ್ನುತ್ತಾರೆ. ದೇಶದ ಬೇರೆ ಬೇರೆ ಭಾಷೆಗಳಲ್ಲಿ ಶಿಕ್ಷಣ ನೀಡುವ ಬಿಜೆಪಿ ಸರ್ಕಾರ ಕನ್ನಡದಲ್ಲಿ ಶಿಕ್ಷಣ ನೀಡುತ್ತಿಲ್ಲ ಯಾಕೆ, ಬ್ಯಾಂಕಿಂಗ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡುತ್ತಿಲ್ಲ ಯಾಕೆ ಎಂದು ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ವಿದ್ಯಾ ಪ್ರಕಾಶ್ ಎಂಬ 3 ತಿಂಗಳ ತರಬೇತಿಯೇ ಹಾಸ್ಯಾಸ್ಪದ

ಉಳಿದಂತೆ 1ನೇ ತರಗತಿಗೆ ಸೇರುವ ವಿದ್ಯಾರ್ಥಿಗೆ ಶಾಲೆ ಸೇರುವ ಮುನ್ನ ವಿದ್ಯಾ ಪ್ರಕಾಶ್ ಎಂಬ 3 ತಿಂಗಳ ತರಬೇತಿ ನೀಡುವುದು ಮತ್ತೊಂದು ಹಾಸ್ಯಾಸ್ಪದ ವಿಚಾರ. ಉಳಿದಂತೆ ನಿಷ್ಠ, ಸಫಲ್ ಎಂಬ ಹೆಸರನ್ನು ಇಡುವ ಮೂಲಕ ಮೋದಿ ಅವರು ತಾನು ನಾಮಕರಣ ಪ್ರವೀಣ ಎಂದು ಸಾಬೀತುಪಡಿಸಿದ್ದಾರೆ ಎಂದು ರಾಧಾಕೃಷ್ಣ ಹರಿಹಾಯ್ದರು.

ಉನ್ನತ ಶಿಕ್ಷಣ ಅಂತಾರಾಷ್ಟ್ರೀಕರಣ ಎನ್ನುವ ಬಿಜೆಪಿ ನೂತನ ಶಿಕ್ಷಣ ನೀತಿ ಹೆಸರಲ್ಲಿ ಅಮೆರಿಕದ ಶೈಕ್ಷಣಿಕ ವ್ಯವಸ್ಥೆಯನ್ನು ತರಲು ಹೊರಟಿದ್ದಾರೆ. ಇದು ದೇಶಕ್ಕೆ ಮಾರಕ. ಕಾರಣ ನಮ್ಮದು ಕೃಷಿ ಪ್ರಧಾನ ರಾಷ್ಟ್ರವಾದರೆ, ಅಮೆರಿಕದಲ್ಲಿ ಉದ್ಯೋಗ ಪ್ರಧಾನ ರಾಷ್ಟ್ರ. ಹೀಗಾಗಿ ಅಲ್ಲಿನ ಶಿಕ್ಷಣ ವ್ಯವಸ್ಥೆ ನಮ್ಮ ದೇಶಕ್ಕೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಓದಿ: ಬೊಮ್ಮಾಯಿ, ಬಿಎಸ್​ವೈ ನೆರಳಿನಲ್ಲೇ ಇದ್ದಾರೆ.. ಇವರ ಬಗ್ಗೆ ದೊಡ್ಡ ನಿರೀಕ್ಷೆ ಏನೂ ಇಲ್ಲ: HDK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.