ಬೆಂಗಳೂರು: ಇತ್ತೀಚೆಗೆ ಸಿಎಎ ವಿರೋಧಿ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯಳ ಎರಡನೇ ದಿನದ ವಿಚಾರಣೆಯನ್ನ, ಬಸವೇಶ್ವರ ನಗರ ಠಾಣೆಯಲ್ಲಿ ಎಸಿಪಿ ಮಹಂತೇಶ್ ರೆಡ್ಡಿ ನೇತೃತ್ವದ ತಂಡ ನಡೆಸುತ್ತಿದ್ದಾರೆ.
ನಿನ್ನೆ ನಡೆದ ವಿಚಾರಣೆಯಲ್ಲಿ ಅಮೂಲ್ಯ ಕೆಲವೊಂದು ವಿಚಾರಗಳಿಗೆ ಮಾತ್ರ ಸ್ಪಂದಿಸಿದ್ದಾಳೆ ಎಂದು ತಿಳಿದುಬಂದಿದೆ. ಈ ರೀತಿ ಘೋಷಣೆ ಕೂಗುವುದರ ಹಿಂದೆ ಯಾರದ್ದಾದರೂ ಕೈವಾಡ ಇದೆಯಾ ಎಂಬ ವಿಚಾರಕ್ಕೆ ಆಕೆಯಿಂದ ಯಾವುದೇ ಉತ್ತರ ಬಂದಿಲ್ಲ. ನಾನು ಯಾವುದೇ ಅಪರಾಧ ಮಾಡಿಲ್ಲ. ನಾನು ಕಾರ್ಯಕ್ರಮದಲ್ಲಿ ಹಲವಾರು ವಿಚಾರಗಳ ಕುರಿತು ಪ್ರಸ್ತಾಪ ಮಾಡಬೇಕಿತ್ತು. ಆದರೆ ನನಗೆ ಅದಕ್ಕೆ ಅವಕಾಶ ಸಿಕ್ಕಿಲ್ಲ ಎಂದು ಉತ್ತರ ನೀಡಿದ್ದಾಳೆಂದು ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಕಾರ್ಯಕ್ರಮಕ್ಕೆ ಆಯೋಜಕರು ಆಹ್ವಾನ ಮಾಡಿದ್ದರಾ ಅಥವಾ ಸ್ವತಃ ನಿನೇ ಕಾರ್ಯಕ್ರಮಕ್ಕೆ ಬಂದಿದ್ದಾ ಅನ್ನೋ ಪ್ರಶ್ನೆಗೆ ಉತ್ತರ ನೀಡಿಲ್ಲ.
ಹೀಗಾಗಿ ಪೊಲೀಸರಿಗೆ ಕೆಲವೊಂದು ವಿಚಾರ ತಿಳಿದುಕೊಳ್ಳಲು ಕಷ್ಟವಾಗುತ್ತಿದ್ದು, ಇಂದೂ ಕೂಡ ಮಹಿಳಾ ತನಿಖಾ ತಂಡ ಅಮೂಳ್ಯಲಿಂದ ಮಾಹಿತಿಯನ್ನ ಕಲೆ ಹಾಕ್ತಿದ್ದಾರೆ. ಈ ನಡುವೆ ಬಸವೇಶ್ವರ ನಗರದಲ್ಲಿರುವ ಅಮೂಲ್ಯ ಉಳಿದುಕೊಂಡಿದ್ದ ಪಿಜಿಗೂ ಕೂಡ ಪೊಲೀಸರು ಭೇಟಿ ನೀಡಿ ತಪಾಸಣೆ ನಡೆಸಿ, ಕೆಲ ದಾಖಲೆ ಡೈರಿಗಳನ್ನ ವಶಕ್ಕೆ ಪಡೆದಿದ್ದಾರೆ. ಹಾಗೆ ಪಿಜಿಯಲ್ಲಿ ಆಕೆಯ ಹಾವ ಭಾವ ಹೇಗಿತ್ತು ಅನ್ನೋದ್ರ ಮಾಹಿತಿಯನ್ನ ಪಿ.ಜಿ ಮಾಲೀಕರು ಹಾಗೂ ಪಿಜಿ ರೂಮ್ ಮೆಟ್ಸ್ನಿಂದ ಪಡೆದಿದ್ದಾರೆ.