ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ಸಿಡಿಯಲ್ಲಿನ ಯುವತಿ ಮೂರನೇ ಬಾರಿ ವಿಡಿಯೋ ಮಾಡಿದ ಬೆನ್ನಲೇ ಆಕೆಯ ಪರ ವಕೀಲ ಜಗದೀಶ್ ಇಂದು ಮಧ್ಯಾಹ್ನ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಿದ್ದಾರೆ.
29 ಸೆಕೆಂಡುಗಳ ವಿಡಿಯೋದಲ್ಲಿ ಜೀವ ಬೆದರಿಕೆಯಿಂದ ಬದುಕುತ್ತಿದ್ದೇನೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವುದಾಗಿ ಯುವತಿ ಹೇಳಿದ್ದಳು. ವಕೀಲ ಜಗದೀಶ್ ಮುಖಾಂತರ ಮಧ್ಯಾಹ್ನ 2.30ಕ್ಕೆ ಸಿಡಿ ಲೇಡಿ ದೂರು ನೀಡಲಿದ್ದಾಳೆ.
- " class="align-text-top noRightClick twitterSection" data="">
ಕಮೀಷನರ್ ಕಚೇರಿಗೆ ವಕೀಲ ಜಗದೀಶ್ ದೂರು ನೀಡಿದ ನಂತರ ದೂರು ಆಧರಿಸಿ ಸಂಬಂಧಪಟ್ಟ ಠಾಣೆಗೆ ಶಿಫಾರಸು ಮಾಡಲಾಗುವುದು. ದೂರಿನಲ್ಲಿ ಉಲ್ಲೇಖಿಸಿರುವ ಅಂಶಗಳ ಮೇಲೆ ಎಫ್ಐಆರ್ ದಾಖಲಾಗುವ ಸಾಧ್ಯತೆಯಿದೆ. ಎಫ್ಐಆರ್ ದಾಖಲಾಗುವ ಮುನ್ನ ಕಾನೂನು ಅಭಿಪ್ರಾಯ ಪಡೆಯುವ ಸಾಧ್ಯತೆಯಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ಸಂತ್ರಸ್ತ ಮಹಿಳೆ ನಂಬಿಕಸ್ಥರ ಮುಖಾಂತರ ದೂರು ಸಲ್ಲಿಸಬಹುದು. ಸಂತ್ರಸ್ತೆ ದೂರು ಬಂದ ಕೂಡಲೇ ಎಫ್ಐಆರ್ ದಾಖಲು ಮಾಡಬೇಕು. ಆದರೆ ಈ ಪ್ರಕರಣದಲ್ಲಿ ಎಸ್ಐಟಿ ಈಗಾಗಲೇ ತನಿಖೆ ಮಾಡ್ತಾ ಇದ್ದು, ಹನಿಟ್ರ್ಯಾಪ್ ಎನ್ನುವ ದಿಕ್ಕಿನ ಸಾಕ್ಷ್ಯಗಳು ಲಭ್ಯವಾಗಿವೆ. ಹೀಗಾಗಿ ಯುವತಿಯನ್ನ ಸಂತ್ರಸ್ತೆ ಎನ್ನುವುದೋ ಅಥವಾ ಆರೋಪಿತೆ ಎಂದು ಪರಿಗಣಿಸುವುದು ಎಂಬು ಗೊಂದಲ ಶುರುವಾಗಲಿದೆ.
ದೂರು ಸ್ವೀಕಾರದ ನಂತರ ಪೊಲೀಸರು ಕಾನೂನು ಅಭಿಪ್ರಾಯ ಪಡದೇ ಮುಂದುವರೆಯುವ ಸಾಧ್ಯತೆಯಿದೆ.