ETV Bharat / state

ಪ್ರತಿಷ್ಠಿತ ಖಾಸಗಿ ಅಸ್ಪತ್ರೆಗಳಿಂದ ಮನೆ ಆರೈಕೆ ಪ್ಯಾಕೇಜ್ ಆರಂಭ....

ನಗರದ ಪ್ರತಿಷ್ಠಿತ ಖಾಸಗಿ ಅಸ್ಪತ್ರೆಗಳು ಮನೆ ಆರೈಕೆ ಪ್ಯಾಕೇಕ್​ಗಳನ್ನು ಆರಂಭಿಸಿವೆ.

home isolation package, home isolation package in Bangalore, home isolation package news, Bangalore corona news, ಹೋಂ ಐಸೋಲೇಷನ್​ ಪ್ಯಾಕೇಜ್​, ಬೆಂಗಳೂರಿನಲ್ಲಿ ಹೋಂ ಐಸೋಲೇಷನ್​ ಪ್ಯಾಕೇಜ್​, ಹೋಂ ಐಸೋಲೇಷನ್​ ಪ್ಯಾಕೇಜ್​ ಸುದ್ದಿ, ಬೆಂಗಳೂರಿನಲ್ಲಿ ಹೋಂ ಐಸೋಲೇಷನ್​ ಪ್ಯಾಕೇಜ್​ ಘೋಷಣೆ, ಹೋಂ ಐಸೋಲೇಷನ್​ ಪ್ಯಾಕೇಜ್​ ಸುದ್ದಿ, ಬೆಂಗಳೂರು ಕೊರೊನಾ ಸುದ್ದಿ,
ಪ್ರತಿಷ್ಠಿತ ಖಾಸಗಿ ಅಸ್ಪತ್ರೆಗಳಿಂದ ಮನೆ ಆರೈಕೆ ಪ್ಯಾಕೇಜ್ ಆರಂಭ.
author img

By

Published : Apr 20, 2021, 3:25 AM IST

ಬೆಂಗಳೂರು: ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಕಂಡ ಪರಿಣಾಮ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಎದುರಾಗುತ್ತಿದೆ. ಈ ನಡುವೆ ಖಾಸಗಿ ಆಸ್ಪತ್ರೆಗಳು ಮನೆ ಆರೈಕೆಗೆ ಒಳಗಾದವರಿಗೆ ವೈದ್ಯರಿಂದ ವಿಡಿಯೋ ಸಂವಾದ ಸೇರಿದಂತೆ ವಿವಿಧ ಸೇವೆ ಒಳಗೊಂಡ ಹೋಂ ಐಸೋಲೇಷನ್​ ಪ್ಯಾಕೇಜ್‌ಗಳನ್ನು ಪ್ರಾರಂಭಿಸಿವೆ.

ಸೋಂಕಿನ ಲಕ್ಷಣಗಳು ಅಷ್ಟಾಗಿ ಗೋಚರಿಸದವರಿಗೆ ಮನೆ ಆರೈಕೆಗೆ ಒಳಗಾಗಲು ಸರ್ಕಾರವು ಅವಕಾಶ ನೀಡಿದೆ. ಇದರಿಂದಾಗಿ ಕೋವಿಡ್ ಪೀಡಿತರಲ್ಲಿ ಶೇ 90ರಷ್ಟು ಮಂದಿ ಮನೆ ಆರೈಕೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, 60 ವರ್ಷ ಮೇಲ್ಪಟ್ಟವರು ಸೇರಿದಂತೆ ಕೆಲವರಿಗೆ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಇಳಿಕೆ ಸೇರಿದಂತೆ ವಿವಿಧ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವ ಕಾರಣ ಕೆಲ ದಿನಗಳಿಂದ ಆಸ್ಪತ್ರೆಗೆ ತೆರಳುವವರ ಸಂಖ್ಯೆ ಏರಿಕೆ ಕಂಡಿದೆ.

ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಬಹುತೇಕ ಹಾಸಿಗೆಗಳು ಭರ್ತಿಯಾಗಿವೆ. ಇತ್ತೀಚಿನ ಮಾಹಿತಿಯಂತೆ ನಗರದಲ್ಲಿ 1.03 ಲಕ್ಷ ಮಂದಿ ಆಸ್ಪತ್ರೆ ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಮನೆ ಆರೈಕೆಗೆ ಒಳಗಾದವರಿಗೆ ಕೊಲಂಬಿಯಾ ಏಷ್ಯಾ ಮಣಿಪಾಲ್, ಅಪೋಲೊ, ಆಸ್ಟರ್, ಸಾಕ್ರಾ, ನಾರಾಯಣ ಹೆಲ್ತ್, ವಿಕ್ರಮ್ ಸೇರಿದಂತೆ ನಗರದ ಪ್ರಮುಖ ಆಸ್ಪತ್ರೆಗಳು 7 ರಿಂದ 17 ದಿನಗಳ ಮನೆ ಆರೈಕೆ ಪ್ಯಾಕೇಜ್ ಪರಿಚಯಿಸಿವೆ. ಈ ಪ್ಯಾಕೇಜ್​ಗೆ 4 ಸಾವಿರದಿಂದ 20 ಸಾವಿರದವರೆಗೂ ದರ ನಿಗದಿ ಮಾಡಲಾಗಿದೆ. ಈ ಪ್ಯಾಕೇಜ್ ಅಡಿ ವೈದ್ಯರು ಮತ್ತು ಶುಕ್ರೂಷಕರಿಂದ ಆನ್‌ಲೈನ್ ಸಮಾಲೋಚನೆ ಒದಗಿಸಲಾಗುತ್ತದೆ.

ಡಿಜಿಟಲ್ ಸೇರಿದಂತೆ ವಿವಿಧ ಸಾಧನಗಳನ್ನು ಒಳಗೊಂಡ ಕಿಟ್‌ಗಳನ್ನು ಒದಗಿಸಲಾಗುತ್ತಿದೆ. ದಿನದ 24 ಗಂಟೆಗಳೂ ತುರ್ತು ದೂರವಾಣಿ ಕರೆಗೆ ಅವಕಾಶ ನೀಡಲಾಗಿದೆ.

ಕೊಲಂಬಿಯಾ ಏಷ್ಯಾ ಆಸ್ಪತ್ರೆಯು 7 ದಿನಗಳಿಗೆ 4,999 ದರ ನಿಗದಿಪಡಿಸಿದೆ. ಇದರಲ್ಲಿ ಮನೆ ಆರೈಕೆ ಮಾರ್ಗದರ್ಶನ, ವೈದ್ಯರು ಮತ್ತು ಆಹಾರ ತಜ್ಞರಿಂದ ಸಮಾಲೋಚನೆ ಸೇರಿದಂತೆ ಆರು ಸೇವೆಗಳನ್ನು ನೀಡಲಾಗುತ್ತಿದೆ.

ಔಷಧ ಹಾಗೂ ಕಿಟ್‌ಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ. ಮಣಿಪಾಲ್ ಆಸ್ಪತ್ರೆಯು 9 ಪ್ಯಾಕೇಜ್‌ಗಳನ್ನು ಪರಿಚಯಿಸಿದೆ. 3,960 ರಿಂದ 17 ಸಾವಿರದವರೆಗೂ ಶುಲ್ಕ ನಿಗದಿಪಡಿಸಲಾಗಿದೆ. ವೈದ್ಯಕೀಯ ಸೇವೆ ಪ್ಯಾಕೇಜ್ ಮತ್ತು ಕೋವಿಡ್ ಕಿಟ್ ಪ್ಯಾಕೇಜ್ ಎಂದು ವಿಂಗಡಿಸಲಾಗಿದೆ. ವೈದ್ಯಕೀಯ ಸೇವೆಗಳು 17 ದಿನಗಳು ಇರಲಿವೆ. ಸಾಕ್ರಾ ಆಸ್ಪತ್ರೆಯು 14 ದಿನಗಳಿಗೆ 10,500 ನಿಗದಿಪಡಿಸಿದೆ.

ಅಷ್ಟಾಗಿ ಸೋಂಕಿನ ಲಕ್ಷಣಗಳು ಗೋಚರಿಸಿದವರಿಗೆ ಮನೆ ಆರೈಕೆಗೆ ಶಿಫಾರಸು ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಲ್ಲಿ ತುರ್ತಾಗಿ ಚಿಕಿತ್ಸೆ ಅಗತ್ಯ ಇರುವವರಿಗೆ ಸಮಸ್ಯೆಯಾಗಲಿದೆ.

ಕೋವಿಡ್ ಪೀಡಿತ ವ್ಯಕ್ತಿಗಳು ಮನೆ ಆರೈಕೆಗೆ ಒಳಪಡಲು ಇಚ್ಛಿಸಿದಲ್ಲಿ ಬಿಬಿಎಂಪಿ ಅಧಿಕಾರಿಗಳು ಮನೆ ಪರಿಶೀಲಿಸಿ, ಅಗತ್ಯ ವ್ಯವಸ್ಥೆಯಿದ್ದಲ್ಲಿ ಅವಕಾಶ ನೀಡಬೇಕು. ವೈದ್ಯರು ಸೋಂಕಿತ ವ್ಯಕ್ತಿಯ ಮೌಲ್ಯಮಾಪನ ನಡೆಸಿ, ಮನೆ ಆರೈಕೆ ಬಗ್ಗೆ ನಿರ್ಧರಿಸಬೇಕು. ದೂರವಾಣಿ ಕರೆ ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಬೇಕು. ಈಗ ಈ ಪ್ರಕ್ರಿಯೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಕೋವಿಡ್ ಸೋಂಕಿತರು ಆರೋಪಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.