ETV Bharat / state

ಪ್ರಧಾನಿ ವಿಡಿಯೋ ಸಂವಾದ: ರಾಜ್ಯದಿಂದ ಅರುಣ್ ಸಿಂಗ್, ಕಟೀಲ್, ಸಿ.ಟಿ.ರವಿ ಭಾಗಿ - Prime Minister Narendra Modi Video Conference

ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಸಂಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ಕಾರ್ಯಕ್ರಮವಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಾಲ್ಗೊಳ್ಳಲಿದ್ದಾರೆ.

Modi Video Conference
ಬಿಜೆಪಿ ಸಂಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ
author img

By

Published : Jun 18, 2021, 10:16 AM IST

ಬೆಂಗಳೂರು: ಇಂದು ಬೆಳಗ್ಗೆ 11.30ಕ್ಕೆ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಸಂಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ಕಾರ್ಯಕ್ರಮವಿದ್ದು, ಎಲ್ಲ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ಪಕ್ಷದ ರಾಜ್ಯಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ.

ರಾಜ್ಯದಿಂದ ಅರುಣ್ ಸಿಂಗ್, ಸಿ.ಟಿ.ರವಿ ಹಾಗೂ ನಳಿನ್ ಕುಮಾರ್ ಕಟೀಲ್ ಪಾಲ್ಗೊಳ್ಳಲಿದ್ದಾರೆ. ಮೂರು ದಿನಗಳ ರಾಜ್ಯ ಪ್ರವಾಸದಲ್ಲಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕಳೆದ ಎರಡು ದಿನಗಳಿಂದ ಸಚಿವರ ಸಭೆ, ಶಾಸಕರ ಒನ್ ಟು ಒನ್ ಮೀಟಿಂಗ್ ಮಾಡಿದ್ದು, ಇಂದು ರಾಜ್ಯ ಪದಾಧಿಕಾರಿಗಳ ಸಭೆಗೆ ಮುಂದಾಗಿದ್ದಾರೆ. ಸಂಘಟನೆ ಕುರಿತು ಮಹತ್ವದ ಮಾತುಕತೆ ನಡೆಸಲಿದ್ದಾರೆ. ಮೋದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ಸ್ವಲ್ಪ ವಿಳಂಬವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಂವಾದ ಮುಗಿಯುತ್ತಿದ್ದಂತೆ ಪದಾಧಿಕಾರಿಗಳ ಸಭೆ ನಡೆಯಲಿದೆ.

ಸಂಜೆ 5 ಗಂಟೆಗೆ ನಿಗದಿಯಾಗಿದ್ದ ಕೋರ್ ಕಮಿಟಿ ಸಭೆಯನ್ನು ನಂತರ 4 ಗಂಟೆಗೆ ನಿಗದಿಪಡಿಸಲಾಗಿದೆ. ಸಂಜೆ 7.30ಕ್ಕೆ ವಿಮಾನದಲ್ಲಿ ಅರುಣ್ ಸಿಂಗ್ ನವದೆಹಲಿಗೆ ವಾಪಸಾಗಲಿರುವ ಹಿನ್ನೆಲೆ ಒಂದು ಗಂಟೆ ಮೊದಲೇ ಸಭೆ ಆರಂಭಿಸಲು ನಿರ್ಧರಿಸಲಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ, ಪುನಾರಚನೆ ಸೇರಿದಂತೆ ಇರುವ ಗೊಂದಲಕ್ಕೆ ತೆರೆ ಎಳೆಯುವ ನಿರ್ಧಾರವನ್ನು ಅರುಣ್ ಸಿಂಗ್ ಪ್ರಕಟಿಸಲಿದ್ದಾರೆ ಎನ್ನಲಾಗಿದೆ.

ಓದಿ: 4E ಮೂಲಕ ದೇಶದಲ್ಲಿ ರಸ್ತೆಗಳ ಸುರಕ್ಷತೆ: ಅಪಘಾತ ಪ್ರಮಾಣ ತಗ್ಗಿಸಲು ಕೇಂದ್ರದ ಸಂಕಲ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.