ETV Bharat / state

ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಅರ್ಚಕರ ಒಕ್ಕೂಟದಿಂದ ಸಚಿವೆಗೆ ಮನವಿ ಪತ್ರ

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಮೊಬೈಲ್​ ಬಳಕೆ ನಿಷೇಧಿಸುವಂತೆ ಕೋರಿ ಅರ್ಚಕರ ಒಕ್ಕೂಟವು ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನಿವ ಪತ್ರ ಸಲ್ಲಿಸಿತು.

KN_BNG
ಅರ್ಚಕರ ಒಕ್ಕೂಟದಿಂದ ಸಚಿವೆಗೆ ಮನವಿಪತ್ರ
author img

By

Published : Dec 17, 2022, 8:45 PM IST

ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಕೋರಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟವು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಗೆ ಮನವಿ ಪತ್ರ ಸಲ್ಲಿಸಿತು.

ವಿಕಾಸಸೌಧದಲ್ಲಿ ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್.ದೀಕ್ಷಿತ್, ಸಚಿವೆಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರದಲ್ಲಿ ದೇವಾಲಯಗಳಲ್ಲಿ ಮೊಬೈಲ್ ಬಳಕೆ ತುಂಬಾ ಅಪಾಯಕಾರಿಯಾಗಿರುತ್ತದೆ. ದೇವಾಲಯದಲ್ಲಿ ನಡೆಯುತ್ತಿರುವ ಧಾರ್ಮಿಕ ಆಚರಣೆಯ ಮಧ್ಯದಲ್ಲಿ ಅಶ್ಲೀಲವಾದ ರಿಂಗ್ ಟೋನ್‌ಗಳ ಕಿರಿಕಿರಿ, ಭಕ್ತರು ಧ್ಯಾನಾಸ್ತಕರಾಗಿ ಧ್ಯಾನ ಮಾಡುವಾಗ ಕೆಲವು ಹೆಣ್ಣು ಮಕ್ಕಳ ಫೋಟೋ ತೆಗೆಯುವುದು, ಜೋರಾಗಿ ಮಾತನಾಡುವುದು, ದೇವರ ಫೋಟೋ ತೆಗೆಯುವುದು, ಆರ್ಚನೆ ಮಾಡುತ್ತಿರುವಾಗ ಮಂತ್ರಗಳ ಉಚ್ಛಾರಣೆ ಮಾಡುವಾಗ ಮೊಬೈಲ್‌ನಲ್ಲಿ ಹಾಡುಗಳನ್ನು ಹಾಕುವುದು, ದೇವರ ಮೇಲಿರುವ ಆಭರಣಗಳ ಫೋಟೋ, ಇತ್ತೀಚೆಗೆ ಸಲ್ಫೀ ಫೋಟೋ, ದೇವರ ಗರ್ಭಗುಡಿಗೆ ಬೆನ್ನು ಹಾಕಿ ಫೋಟೋ ತೆಗೆಯುವುದು, ದೇವಾಲಯಗಳ ಆವರಣದಲ್ಲಿ ಇಟ್ಟಿರುವ ಹುಂಡಿಗಳ ಫೋಟೋ ತೆಗೆಯುವುದು ಹೆಚ್ಚಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.

ದೇವಸ್ಥಾನಗಳಲ್ಲಿ ಹೋಮ, ಹವನಾದಿ ಪೂಜೆ, ಜಪ, ತಪ ಇತ್ಯಾದಿಗಳಲ್ಲಿ ನಿರತರಾಗಿರುವಾಗ ಮಂತ್ರ ಪುಷ್ಪ ಅಭಿಷೇಕಾಧಿ ಧಾರ್ಮಿಕ ಕಾರ್ಯಗಳಲ್ಲಿ ಮೊಬೈಲ್‌ಗಳನ್ನು ಬಳಕೆ ಮಾಡಿದಲ್ಲಿ ಪೂಜೆಯ ಏಕಾಗ್ರತೆ ತಪ್ಪುತ್ತದೆ. ಹಾಗೂ ಭಕ್ತರ ಏಕಾಗ್ರತೆಗೆ ಧಕ್ಕೆ ಉಂಟಾಗುತ್ತದೆ. ಭಕ್ತಿಯಿಂದ ಪೂಜಿಸಲು ಬರುವ ಭಕ್ತರಿಗೆ ದೇವಸ್ಥಾನದ ವ್ಯವಸ್ಥೆಯ ಬಗ್ಗೆ ತಪ್ಪು ಭಾವನೆಗಳು ಹಾಗೂ ತಪ್ಪು ಕಲ್ಪನೆಗಳು ಮೂಡುವ ಸಂಭವ ಇದೆ ಎಂದು ಆತಂಕ ವ್ಯಕ್ತಪಡಿಸಿದೆ.

ಹೀಗಾಗಿ ದೇವಸ್ಥಾನದ ಧಾರ್ಮಿಕ ಕಾರ್ಯಗಳು ವ್ಯವಸ್ಥಿತವಾಗಿ ಯಾವುದೇ ಅಡ್ಡಿ ಅಡಚಣೆಗಳು ಇಲ್ಲದೆ ನಡೆಯಲು ಮೊಬೈಲ್ ಬಳಕೆಯ ನಿಷೇಧವನ್ನು ಜಾರಿಗೆ ತರುವುದು ತುಂಬಾ ಅವಶ್ಯಕವಾಗಿರುತ್ತದೆ. ಆದುದರಿಂದ ದೇವಸ್ಥಾನಕ್ಕೆ ಬರುವ ಮುಂಚೆ, ಪ್ರವೇಶಿಸುವ ಮುಂಚೆ ಮೊಬೈಲ್‌ನ್ನು ಸೀಮಿತ ಜಾಗದಲ್ಲಿ ಇಟ್ಟು ಒಳಗೆ ಬರುವಂತೆ ಆದೇಶಿಸಬೇಕಾಗಿ ಕೋರುತ್ತೇವೆ. ಇದನ್ನು ಆದಷ್ಟು ಶೀಘ್ರವಾಗಿ ಜಾರಿಗೊಳಿಸಬೇಕಾಗಿ ಒಕ್ಕೂಟದ ಪರವಾಗಿ ಕೋರುತ್ತೇವೆ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಬೆಳ್ತಂಗಡಿಯ ಪೆರ್ಲದಲ್ಲಿ ಪುರಾತನ ಶಿವಲಿಂಗ ಪತ್ತೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.