ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಗಣರಾಜ್ಯೋತ್ಸವದಂದು ನೀಡಲಾಗುವ 2022 ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ರಾಜ್ಯದ 21 ಮಂದಿ ಪೊಲೀಸರು ಭಾಜನರಾಗಿದ್ದಾರೆ ಎಂದು ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಗುಪ್ತಚರ ಇಲಾಖೆಯ ಎ.ಡಿ.ಜಿ.ಪಿ ಬಿ.ದಯಾನಂದ್, ಕ್ರೈಂ & ಟೆಕ್ನಿಕಲ್ ಸರ್ವಿಸ್ ಎಡಿಜಿಪಿ ಆರ್.ಹಿತೇಂದ್ರ, ಬೆಂಗಳೂರು ಸಂಚಾರ ಜಂಟಿ ಪೊಲೀಸ್ ಆಯುಕ್ತ ಬಿ.ಆರ್.ರವಿಕಾಂತೇಗೌಡ, ಕೆ.ಎಸ್.ಆರ್.ಪಿ 5ನೇಯ ಬೆಟಾಲಿಯನ್ ಕಮಾಂಡೆಂಟ್ ರಾಮಯ್ಯ ಜನಾರ್ಧನ್, ಹಲಸೂರು ಉಪವಿಭಾಗ ಎ.ಸಿ.ಪಿ ಡಿ.ಕುಮಾರ್, ಹುಣಸೂರು ಉಪವಿಭಾಗದ ಡಿ.ಎಸ್.ಪಿ ಪ್ರಭುದೇವ್ ರವಿಪ್ರಸಾದ್ ಪದಕಕ್ಕೆ ಭಾಜನರಾಗಿದ್ದಾರೆ.
ಸಿಂಧನೂರು ಡಿ.ಎಸ್.ಪಿ ವೆಂಕಟಪ್ಪ ನಾಯಕ ಓಲೇಕರ್, ಆನೇಕಲ್ ಉಪವಿಭಾಗದ ಡಿ.ಎಸ್.ಪಿ, .ಎಂ ಮಲ್ಲೇಶಯ್ಯ, ಸಿ.ಐ. ಡಿ ಸೈಬರ್ ಕ್ರೈಂ ಯಶವಂತಕುಮಾರ್, ಕಲಬುರಗಿ ಸಿ.ಸಿ.ಆರ್.ಬಿ ಎ.ಸಿ.ಪಿ ಗಂಗಾಧರ್ ಮಠಪತಿ, ಕರ್ನಾಟಕ ಲೋಕಾಯುಕ್ತದ ಡಿ.ಎಸ್.ಪಿ ಕೆ.ಎಂ.ರಮೇಶ್, ಸಿ.ಐ.ಡಿ ಡಿ.ಎಸ್.ಪಿ ಎಸ್. ಬಿ.ಕೆಂಪಯ್ಯ, ಲೋಕಾಯುಕ್ತ ಇನ್ಸ್ಪೆಕ್ಟರ್ ಎಸ್ ಕೃಷ್ಣಮೂರ್ತಿ, ಬೆಂಗಳೂರಿನ ಕೆಎಸ್ ಆರ್ ಪಿ 1ನೇ ಬೆಟಾಲಿಯನ್ ನ ಸಿ ಎಸ್ ಸಿಂಪಿ, ಬೆಳಗಾವಿ ಡಿ.ಎ.ಆರ್. ಎ.ಆರ್.ಎಸ್ ಐ ಮಹಮ್ಮದ್ ಹನೀಫ್, ಬೆಂಗಳೂರು ಸಿ.ಪಿ ಕಚೇರಿಯ ಎ.ಎಸ್.ಐ ಎಂ ಹೆಚ್ ರೇವಣ್ಣ ಪ್ರತಿಷ್ಠಿತ ಸೇರಿ 21 ಮಂದಿಗೆ ರಾಷ್ಟ್ರಪತಿ ಪೊಲೀಸ್ ಪದಕ ಲಭಿಸಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ