ಬೆಂಗಳೂರು: ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿರುವ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸಾಮಾಜಿಕ ಅಂತರದೊಂದಿಗೆ ಸಭೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಆಯೋಜನೆ ಮಾಡಲಾಗಿದೆ. ಸಭೆಗೆ ಬರುವ ಶಾಸಕರಿಗೆ ರಾತ್ರಿ ಔತಣಕೂಟ, ಸಭೆಗೆ ಬರುವ ಶಾಸಕರಿಗೆ ಫೇಸ್‌ಶೀಲ್ಡ್ ಹಾಗೂ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಶೀಲ್ಡ್ ಧರಿಸಿ ಸಭೆಗೆ ಶಾಸಕರು ತೆರಳುತ್ತಿದ್ದಾರೆ. ಕೊರೊನಾ ಹಿನ್ನೆಲೆ ಬಿಗಿ ಎಚ್ಚರಿಕೆ ಕ್ರಮಗಳೊಂದಿಗೆ ಸಭೆ ಆಯೋಜಿಸಲಾಗಿದೆ.
ಸಂಜೆ 6 ಗಂಟೆಗೆ ಸಭೆ ನಿಗದಿಯಾಗಿತ್ತು. ಆದರೆ, ಸದನ ಮುಗಿಯುವುದು ತಡವಾದ ಕಾರಣ ಮತ್ತೆ ತಡವಾಗಿ ಶಾಸಕಾಂಗ ಪಕ್ಷದ ಸಭೆ ಆರಂಭಿಸಲು ನಿರ್ಧರಿಸಲಾಗಿದೆ. ಆದರೂ ಈಗಾಗಲೇ ಹೋಟೆಲ್ಗೆ ಬಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶಾಸಕರ ಬರುವಿಕೆಯ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ಶಾಸಕರಾದ ಬೆಳ್ಳಿ ಪ್ರಕಾಶ್, ಭರತ್ ಶೆಟ್ಟಿ, ಸುಕುಮಾರ್ ಶೆಟ್ಟಿ, ರಾಮಪ್ಪ ಲಮಾಣಿ, ಪ್ರೊ. ಲಿಂಗಣ್ಣ, ಉದಯ್ ಗರುಡಾಚಾರ್, ಬಸವರಾಜ್ ದಡೆಸ್ಗೂರ್ ಆಗಮನಿಸಿದ್ದಾರೆ. ಸಭೆಗೆ ಹಲವು ಹಿರಿಯ ಶಾಸಕರು, ಸಿಎಂ ಬಿಎಸ್ವೈ ಕೂಡ ಬರಬೇಕು, ಅವರೆಲ್ಲ ಆಗಮನದ ನಂತರ ಸಭೆ ಆರಂಭವಾಗಲಿದೆ.
ಅವಿಶ್ವಾಸ ನಿರ್ಣಯದ ಕಾರಣ ಸರ್ಕಾರದ ಪರ ಶಾಸಕರು ನಿಲ್ಲುವುದು, ನಾಳೆ ಸದನದ ಕಡೆಯ ದಿನವಾಗಿದ್ದು ನಾಳಿನ ನಡೆ, ಶಾಸಕರ ಕುಂದು ಕೊರತೆ ಆಲಿಸುವುದು, ಅತೃಪ್ತಿ, ಅಸಮಾಧಾನ ಇದ್ದಲ್ಲಿ ಪರಿಹರಿಸುವ ಸಲುವಾಗಿ ಸಿಎಂ ಯಡಿಯೂರಪ್ಪ ಶಾಸಕಾಂಗ ಸಭೆ ಕರೆದಿದ್ದಾರೆ.