ETV Bharat / state

ಗಣೇಶ ಚತುರ್ಥಿಯ ಪೂಜಾ ವಿಧಿ ವಿಧಾನ ತಿಳಿಯಿರಿ... - ಗಣೇಶೋತ್ಸವಕ್ಕೆ ಭರದ ಸಿದ್ಧತೆ

ಆಗಸ್ಟ್ 31ರಂದು ನಡೆಯುವ ಗಣೇಶೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.

preparation for ganesha festival
ಗಣೇಶೋತ್ಸವಕ್ಕೆ ಭರದ ಸಿದ್ಧತೆ
author img

By

Published : Aug 27, 2022, 5:10 PM IST

Updated : Aug 30, 2022, 12:47 PM IST

ಬೆಂಗಳೂರು: ಆಗಸ್ಟ್ 31ರ ಗಣೇಶೋತ್ಸವಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿಯಂದು ಗಣೇಶ ಉತ್ಸವಕ್ಕೆ ಚಾಲನೆ ಸಿಗಲಿದೆ. ನಂತರದ 10 ದಿನ ವಿಜೃಂಭಣೆಯಿಂದ ಎಲ್ಲೆಡೆ ಆಚರಣೆಗಳು ನಡೆಯಲಿದೆ. ಗಣೇಶನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಜನಿಸಿದ ಹಿನ್ನೆಲೆ ಅಂದೇ ಗಣೇಶೋತ್ಸವ ಹಮ್ಮಿಕೊಳ್ಳಲಾಗುತ್ತದೆ.

ಪೂಜಾ ವಿಧಿ-ವಿಧಾನ: ಗಣೇಶ ಚತುರ್ಥಿಯ ದಿನ ಮನೆಮಂದಿಯೆಲ್ಲ ಮುಂಜಾನೆ ಬೇಗ ಎದ್ದು, ಸ್ನಾನ ಮಾಡಿ ಹೊಸ ಬಟ್ಟೆ ಇಲ್ಲವೇ ಮಡಿ ಬಟ್ಟೆ ಧರಿಸಬೇಕು. ನಂತರ ಚಿನ್ನ, ಬೆಳ್ಳಿ, ತಾಮ್ರ ಅಥವಾ ಜೇಡಿ ಮಣ್ಣಿನಿಂದ ಮಾಡಿದ ಗಣೇಶನ ಮೂರ್ತಿಯನ್ನು ಇಟ್ಟು ಪೂಜೆಯ ಸಿದ್ಧತೆ ಆರಂಭಿಸಬೇಕು. ಗಣೇಶ ಚತುರ್ಥಿಯ ವಿಧಿ-ವಿಧಾನವನ್ನು ಶೋಡಶೋಪಚಾರ ವಿಧಾನದಲ್ಲಿ ನೆರವೇರಿಸಿದರೆ ಪೂಜಾ ಫಲ ಲಭ್ಯವಾಗುವುದು ಎಂಬ ನಂಬಿಕೆ ಇದೆ.

preparation for ganesha festival
ಗಣೇಶೋತ್ಸವಕ್ಕೆ ಭರದ ಸಿದ್ಧತೆ

ಹಬ್ಬದಂದು ಗಣೇಶನಿಗೆ ಇಪ್ಪತ್ತೊಂದು ಮೋದಕ, ಲಾಡು, ಕಡಬುಗಳನ್ನು ಮಾಡಿ ನೈವೇದ್ಯ ಮಾಡಿದರೆ ದೇವರು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಇನ್ನೂ ಒಂದು ತಾಮ್ರದ ಕಲಶವನ್ನು ತೆಗೆದುಕೊಳ್ಳಿ ಮತ್ತು ಅದರಲ್ಲಿ ನೀರು ತುಂಬಿಸಿ. ಕೆಂಪು ಬಟ್ಟೆಯಿಂದ ಅದನ್ನು ಮುಚ್ಚಿ ಮತ್ತು ಕಲಶ ಮತ್ತು ಬಟ್ಟೆಯನ್ನು ಎರಡೂ ಮೊಲಿ (ಪವಿತ್ರ ಕೆಂಪು ದಾರ) ಬಳಸಿ ಒಟ್ಟಿಗೆ ಕಟ್ಟಿ. ವಾಯುವ್ಯದಲ್ಲಿ ಕಲಶವನ್ನಿರಿಸಿ ಅಥವಾ ಗಣೇಶನ ವಿಗ್ರಹದ ಎಡಭಾಗದಲ್ಲಿ ಇರಿಸಿ. ಗಣೇಶನ ವಿಗ್ರಹದ ಪ್ರತಿ ಬದಿಯಲ್ಲಿ ಎರಡು ಅಡಿಕೆಯನ್ನು ಇರಿಸಲು ಮರೆಯಬೇಡಿ. ಇವು ಗಣೇಶನ ಪತ್ನಿಯರಾದ ರಿದ್ಧಿ ಮತ್ತು ಸಿದ್ಧಿಯನ್ನು ಸಂಕೇತಿಸುತ್ತದೆ.

preparation for ganesha festival
ಗಣೇಶೋತ್ಸವಕ್ಕೆ ಭರದ ಸಿದ್ಧತೆ

ಗಣೇಶನಿಗೆ ಗಂಗಾ ಜಲ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಿ. ಈ ಸಮಯದಲ್ಲಿ ದರ್ಬೆ ಹುಲ್ಲು ಮತ್ತು ವೀಳ್ಯದೆಲೆಯನ್ನು ಬಳಸಿ. ಶೋಡಶೋಪಚಾರ ಪೂಜೆಯನ್ನು ಮಾಡಿ, ವಿಗ್ರಹವನ್ನು ಹಳದಿ ಬಣ್ಣದ ಬಟ್ಟೆಯಿಂದ ಅಲಂಕರಿಸಿ. ಕುಂಕುಮ ಮತ್ತು ಅಕ್ಕಿಯಿಂದ ತಿಲಕವನ್ನು ಹಚ್ಚಿ. ಹೂವು ಅರ್ಪಿಸಿ ಮತ್ತು ಗಣಪನಿಗೆ ಸಿಹಿಯನ್ನು ಪ್ರಸಾದವಾಗಿ ನೀಡಿ. ಮೋದಕ ಅಥವಾ ಲಾಡನ್ನು ನೀವು ಪ್ರಸಾದವಗಿ ಗಣಪನಿಗೆ ನೀಡಬಹುದು. ಪಂಚಮೇವವನ್ನು ನೀಡಿ (ಐದು ಹಣ್ಣುಗಳು). ನಂತರ ದೀಪವನ್ನು ಹಚ್ಚಿ ಆರತಿಯನ್ನು ಬೆಳಗಿ.

ಪೂಜಾ ಸಾಮಗ್ರಿ: ಗಣೇಶನ ಪೂಜೆಗೆ ಗರಿಕೆ, ಎಕ್ಕೆ ಹೂವು, ತೆಂಗಿನ ಕಾಯಿ, ಗೋ ಮೂತ್ರ, ಗಂಗಾಜಲ, ಗುಲಾಬಿ ನೀರು, ದೀಪದ ಹಣತೆ, ತುಪ್ಪ, ಧೂಪ, ಕರ್ಪೂರ, ವೀಳ್ಯದೆಲೆ, ಅಡಿಕೆ ಪುಡಿ, ಅಕ್ಷತೆ, ಪೂಜಾ ನಾಣ್ಯ, ಅರಿಶಿನ, ಕುಂಕುಮ, ಅತ್ತರ್, ಜೇನುತುಪ್ಪ, ಪಂಚಮೇವಾ, ಜನಮೌಲಿ, ಲಕಶದ ವಸ್ತ್ರ, ಗಂಟೆ ಸೇರಿದಂತೆ ಇನ್ನಿತರೆ ಪೂಜಾ ವಸ್ತುಗಳು ಬೇಕಾಗುತ್ತದೆ.

ಇದನ್ನೂ ಓದಿ: ಬೈಪಾಸ್ ಗಣೇಶೋತ್ಸವಕ್ಕೆ ಭರದ ಸಿದ್ಧತೆ.. 19 ಅಡಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ

ಮೋದಕವೆಂದರೆ ಗಣೇಶನಿಗೆ ಪಂಚಪ್ರಾಣ: ಗಣೇಶನಿಗೆ ಆಹಾರ, ವಿಶೇಷವಾಗಿ ಸಿಹಿತಿಂಡಿ ಎಂದರೆ ಬಹಳ ಅಚ್ಚುಮೆಚ್ಚು. ಅದರಲ್ಲೂ ಲಾಡು ಮತ್ತು ಮೋದಕವೆಂದರೆ ಗಣೇಶನಿಗೆ ಪಂಚಪ್ರಾಣ. ಗಣಪನಿಗೆ ಲಾಡು ಮತ್ತು ಮೋದಕವನ್ನು ಪ್ರಸಾದವಾಗಿ ನೀಡಬೇಕು.

ಮುಹೂರ್ತ: ಈ ಬಾರಿ ಗಣೇಶ ಚತುರ್ಥಿಯ ಮುಹೂರ್ತವು ಆಗಸ್ಟ್ 31 ಬುಧವಾರ ಬಂದಿದೆ. ಬೆಳಿಗ್ಗೆ 11.05 ರಿಂದ ಮಧ್ಯಾಹ್ನ 1.38 ರವರೆಗೆ ಪೂಜೆಗೆ ಶುಭ ಮುಹೂರ್ತವಾಗಿದೆ. ಕೊರೊನಾ ಅಡೆತಡೆ ನಂತರ ಈ ಬಾರಿ ನಿರಾತಂಕವಾಗಿ, ಅದ್ಧೂರಿಯಾಗಿ ಗಣೇಶನ ಪೂಜೆ ನೆರವೇರುತ್ತಿದೆ. ಧಾರ್ಮಿಕ ಹಾಗೂ ಸಾಂಪ್ರದಾಯಿಕ ಆಚರಣೆಗೆ ಮಹತ್ವ ನೀಡಿದರೆ ಗಣೇಶ ಪ್ರಸನ್ನನಾಗುತ್ತಾನೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಹೇಳಲಾಗಿದೆ ಎಂದು ವಿಜಯನಗರದ ಪ್ರಸನ್ನ ವಿನಾಯಕ ಮಂದಿರದ ಅರ್ಚಕರಾದ ವಿಶ್ವನಾಥ ಶರ್ಮ ತಿಳಿಸಿದ್ದಾರೆ.

ಚತುರ್ಥಿಯ ದಿನ ಚಂದ್ರನನ್ನು ನೋಡಬಾರದು. ಹಾಗೊಮ್ಮೆ ನೋಡಿದರೆ ಶಾಪ ದೊರೆಯುವುದು. ಇದರಿಂದ ಭವಿಷ್ಯದಲ್ಲಿ ಮಾಡದ ತಪ್ಪಿಗೆ ಅಪರಾಧಿ ಎನಿಸಿಕೊಳ್ಳಬೇಕಾಗುವುದು ಎಂದು ಹೇಳಲಾಗುತ್ತದೆ.

Last Updated : Aug 30, 2022, 12:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.