ETV Bharat / state

ಪಿಪಿಹೆಚ್‌ ರಕ್ತಸ್ರಾವ: ಗರ್ಭಿಣಿಯರ ರಕ್ಷಣೆಗೆ ಪೂರ್ವ ಸಿದ್ಧತೆ ಅಗತ್ಯ.. - ಪಿಪಿಹೆಚ್‌ ರಕ್ತಸ್ರಾವ ಸುದ್ದಿ 2021

ಪಿಪಿಹೆಚ್‌ ಸಮಸ್ಯೆ ಬಹಳ ಬೇಗನೇ ತಾಯಂದಿರ ಮರಣಕ್ಕೆ ಕಾರಣವಾಗಬಲ್ಲದು. ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಆರೋಗ್ಯವಂತ ತಾಯಿ ಸಹ ಕೇವಲ ಎರಡು ಗಂಟೆಗಳಲ್ಲಿ ಮರಣ ಹೊಂದುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

World Health Organization
ವಿಶ್ವ ಆರೋಗ್ಯ ಸಂಸ್ಥೆ
author img

By

Published : Dec 29, 2021, 9:56 PM IST

ಬೆಂಗಳೂರು: ಪೋಸ್ಟ್‌ಪಾರ್ಟಮ್‌ ಹ್ಯಾಮರೇಜ್‌ (ಪಿಪಿಎಚ್‌) ಸಮಸ್ಯೆ ಮಹಿಳೆಯರಿಗೆ ಮಾರಣಾಂತಿಕವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ವರದಿಯೊಂದು ಭಾರತದಲ್ಲಿ ಪ್ರತಿ ಗಂಟೆಗೆ ಐವರು ಗರ್ಭಿಣಿಯರು ಪ್ರಸೂತಿ ಸಮಯದಲ್ಲಿ ವಿವಿಧ ಕಾರಣಗಳಿಗಾಗಿ ಮರಣ ಹೊಂದುತ್ತಿದ್ದಾರೆ. ಇದಕ್ಕೆ ರಕ್ತಸ್ರಾವ ಪ್ರಮುಖ ಕಾರಣ ಎಂದು ತಿಳಿಸಿದೆ.

ಪಿಪಿಹೆಚ್‌ ಸಮಸ್ಯೆ ಬಹಳ ಬೇಗನೇ ತಾಯಂದಿರ ಮರಣಕ್ಕೆ ಕಾರಣವಾಗಬಲ್ಲದು. ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಆರೋಗ್ಯವಂತ ತಾಯಿ ಸಹ ಕೇವಲ ಎರಡು ಗಂಟೆಗಳಲ್ಲಿ ಮರಣ ಹೊಂದುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ನಗರದ ಅನುಗ್ರಹ ನರ್ಸಿಂಗ್‌ ಹೋಮ್‌ನ ವೈದ್ಯರಾದ ಡಾ. ಶೀಲಾ ಮಾನೆ ಮಾತನಾಡಿ 'ಪ್ರಸೂತಿಯ ಸಮಯದಲ್ಲಿ ವೈದ್ಯರು ಗರ್ಭಿಣಿ ರಕ್ತಹೀನತೆಯ ಚಿಕಿತ್ಸೆ ಸಿದ್ಧರಾಗಿರಬೇಕು. ತೀವ್ರ ರಕ್ತಸ್ರಾವದಿಂದ ಗರ್ಭಿಣಿಯರ ಸ್ಥಿತಿ ಗಂಭೀರವಾಗಬಹುದು' ಎಂದು ಎಚ್ಚರಿಸಿದ್ದಾರೆ.

'ಪಿಪಿಎಚ್‌ ಜನನ ಸಮಯದಲ್ಲಿ ಸ್ತ್ರೀಯರ ಮರಣಕ್ಕೆ ಮುಖ್ಯ ಕಾರಣವಾಗಿದೆ. ಶೇ. 5 ರಷ್ಟು ಗರ್ಭಿಣಿಯರಲ್ಲಿ ಇದು ಕಾಣಿಸುತ್ತದೆ. ಭಾರತದಲ್ಲಿ ಸಹಜ ಪ್ರಸೂತಿಯ ಶೇ 2ರಿಂದ 4, ಮತ್ತು ಸೀಸೆರಿಯನ್‌ ಪ್ರಸೂತಿಯ ಶೇ. 6 ಪ್ರಕರಣಗಳಲ್ಲಿ ಪಿಪಿಹೆಚ್‌ ಸಮಸ್ಯೆ ಕಂಡು ಬರುತ್ತಿದೆ. ದುರದೃಷ್ಟವಶಾತ್‌ ಪಿಪಿಹೆಚ್‌ನ ಅಪಾಯಕಾರಿ ಅಂಶಗಳ ಬಗ್ಗೆ ವೈದ್ಯರಲ್ಲಿಯೇ ಸರಿಯಾದ ತಿಳಿವಳಿಕೆ ಇಲ್ಲ' ಎಂದು ಹೇಳಿದ್ದಾರೆ.

ಔಷಧೋಪಚಾರ ಮತ್ತು ಶಸ್ತ್ರಚಿಕಿತ್ಸೆ ಅವಶ್ಯ: ಪೋಸ್ಟ್‌ಪಾರ್ಟಮ್‌ ಹ್ಯಾಮರೇಜ್‌ ಗಂಭೀರ ಸಮಸ್ಯೆಯಾಗಿದ್ದು, ಇದಕ್ಕೆ ಔಷಧೋಪಚಾರ ಮತ್ತು ಶಸ್ತ್ರಚಿಕಿತ್ಸೆಗಳೆರಡರ ಅವಶ್ಯಕತೆ ಇದೆ. ರಕ್ತಸ್ರಾವವನ್ನು ತಕ್ಷಣವೇ ಪತ್ತೆ ಹಚ್ಚಿ ಚಿಕಿತ್ಸೆ ದೊರೆತರೆ ಮಹಿಳೆ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ಡಾ. ಮಾನೆ ತಿಳಿಸಿದ್ದಾರೆ.

2030ಕ್ಕೆ ಪ್ರಸೂತಿ ಸಮಯದ ಸಾವು ಪ್ರತಿ ಒಂದು ಲಕ್ಷದಲ್ಲಿ 70ಕ್ಕಿಂತ ಕಡಿಮೆ: 2030ಕ್ಕೆ ಪ್ರಸೂತಿ ಸಮಯದ ಸಾವನ್ನು ಪ್ರತಿ ಒಂದು ಲಕ್ಷದಲ್ಲಿ 70ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಪಿಪಿಹೆಚ್‌ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ ಇದು ಸಾಧ್ಯವಿದೆ. ಪಿಪಿಹೆಚ್‌ ತಡೆಯಲು ಈಗ ಪರಿಣಾಮಕಾರಿ ಔಷಧಗಳೂ ಲಭ್ಯವಿದೆ. ಕೋವಿಡ್‌ ಲಸಿಕೆಯನ್ನು ಕಂಡುಹಿಡಿದಿದ್ದ ಭಾರತ್‌ ಸೆರಮ್ಸ್‌ ಆಂಡ್‌ ವ್ಯಾಕ್ಸಿನ್ಸ್‌ ಲಿಮಿಟೆಡ್‌ (ಬಿಎಸ್‌ವಿ) ಕಾರ್ಬೆಟೊಸಿನ್‌ ಚುಚ್ಚುಮದ್ದನ್ನು ಪರಿಚಯಿಸಿದ್ದು, ಪಿಪಿಎಚ್‌ ರಕ್ತಸ್ರಾವವನ್ನು ಇದು ತಡೆಗಟ್ಟಲು ಯಶಸ್ವಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಓದಿ: ಕೋಟದಲ್ಲಿ ಪೊಲೀಸ್ ದೌರ್ಜನ್ಯ ಪ್ರಕರಣ: ಎಎಸ್​ಐ ಸಸ್ಬೆಂಡ್, ಐವರು ಪೊಲೀಸರ ಎತ್ತಂಗಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.