ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಲಾಕ್ ಡೌನ್ ಇದ್ದರೂ ಕೃಷಿ ಚಟುವಟಿಕೆಗಳ ಅವಕಾಶ ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಮುಂಗಾರು ಪೂರ್ವ ಕೃಷಿ ಚಟುವಟಿಕೆಗಳು ಆರಂಭಗೊಳ್ಳುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು, ಕೃಷಿ ಯೋಜನೆ, ಕೃಷಿ ವಿಮೆ ಮುಂತಾದ ವಿಚಾರಗಳ ಕುರಿತು ಸಮಗ್ರ ವರದಿ ಇಲ್ಲಿದೆ.
1. ಬಿತ್ತನೆ ವಿವರ
• ಮುಂಗಾರು ಹಂಗಾಮಿನ ಗುರಿ 73.00 ಲಕ್ಷ ಹೆಕ್ಟೇರ್
• ಪೂರ್ವ ಮುಂಗಾರಿನ ಗುರಿ 2.22 ಲಕ್ಷ ಹೆಕ್ಟೇರ್
• ಹಾಲಿ ಬಿತ್ತನೆ ವಿಸ್ತಿರ್ಣ 15719 ಹೆಕ್ಟೇರ್ (9%)
2. ಬಿತ್ತನೆ ಬೀಜಗಳ ಬೇಡಿಕೆ
• ಪೂರ್ವ ಮುಂಗಾರಿನ ಬೇಡಿಕೆ 14,171 ಕ್ವಿಂಟಾಲ್
• ಹಾಲಿ ದಾಸ್ತಾನ 15,066.5 ಕ್ವಿಂಟಾಲ್
• ವಿತರಣೆ 5,391 ಕ್ವಿಂಟಾಲ್
3. ರಸಗೊಬ್ಬರ ವಿವರ
• ಮುಂಗಾರು ಹಂಗಾಮಿನ ಬೇಡಿಕೆ 2,210 ಲಕ್ಷ ಮೆಟ್ರಿಕ್ ಟನ್
• ಏಪ್ರಿಲ್ ಹಾಗೂ ಮೇ ತಿಂಗಳ ಬೇಡಿಕೆ 5.87 ಲಕ್ಷ ಮೆಟ್ರಿಕ್ ಟನ್
• ಹಾಲಿ ದಾಸ್ತಾನು 7.11 ಲಕ್ಷ ಮೆಟ್ರಿಕ್ ಟನ್
• ವಿತರಣೆ 1.07 ಲಕ್ಷ ಮೆಟ್ರಿಕ್ ಟನ್
4.ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ನಿಧಿ
• 50.73 ಲಕ್ಷ ರೈತ ಫಲಾನುಭವಿಗಳು
• 1014.61 ಕೋಟಿ ಹಣ ವರ್ಗಾವಣೆ
5.ಮುಖ್ಯಮಂತ್ರಿಗಳ ಕಿಸಾನ್ ಸಮ್ಮಾನ್ ನಿಧಿ
• 44.49 ಲಕ್ಷ ರೈತ ಫಲಾನುಭವಿಗಳು
• 889.82 ಕೋಟಿ ಹಣ ವರ್ಗಾವಣೆ
6.ಬೆಳೆ ವಿಮೆ ವಿವರ
2019ರ ಬೆಳೆ ವಿಮೆ ಅಡಿ 198.49 ಕೋಟಿ ಹಣವನ್ನು 2,02,494 ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ. 2019 ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಎಲ್ಲ ವಿಮಾ ಸಂಸ್ಥೆಗಳು ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆಯನ್ನು ತೆರೆದು ಸದರಿ ಖಾತೆಯನ್ನು ತಂತ್ರಾಂಶವೊಂದರಲ್ಲಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಈ ಪ್ರಕ್ರಿಯನ್ನು 2019ರ ಮುಂಗಾರು ಹಂಗಾಮಿನಲ್ಲಿ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿರುವುದರಿಂದ ವಿಮಾ ಪರಿಹಾರ ವಿತರಿಸುವ ಕಾರ್ಯ ಈಗ ಪ್ರಾರಂಭವಾಗಿದೆ.
2021-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955, ಬೀಜ ನಿಯಂತ್ರಣ ಆದೇಶ 1983ರ ನಿಯಮ ಉಲ್ಲಂಘನೆ ನಿಮಿತ್ತ ಒಟ್ಟು ಪ್ರಮಾಣ 19,894.1 ಕ್ವಿಂಟಾಲ್ ಅಂದರೆ ಅಂದಾಜು ಮೌಲ್ಯ 10.77 ಕೋಟಿ (ಮುಸುಕಿನ ಜೋಳ 10,194 ಕ್ವಿಂಟಾಲ್, ಸೂರ್ಯಕಾಂತಿ 288.4 ಕ್ವಿಂಟಾಲ್, ಹತ್ತಿ 0.16 ಕ್ವಿಂಟಾಲ್) ಮೊತ್ತದ ಬಿತ್ತನೆ ಬೀಜ ವಶಪಡಿಸಿಕೊಳ್ಳಲಾಗಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ಹಾವೇರಿ, ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಹೂವಿನಹಡಗಲಿ, ಧಾರವಾಡ ಜಿಲ್ಲೆಯ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.