ETV Bharat / state

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿದ್ದು ಸರಿಯಲ್ಲ, ಆದರೆ... : ಪ್ರತಾಪ್ ಸಿಂಹ - ಸಿದ್ದರಾಮಯ್ಯ ಬಗ್ಗೆ ಪ್ರತಾಪ್​ ಸಿಂಹ ಮಾತು

ಮಡಿಕೇರಿಯಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ವಿಚಾರ ನನ್ನ ಗಮನಕ್ಕೆ ಬಂದಿದೆ. ಮೊಟ್ಟೆ ಎಸೆಯುವುದು ಒಳ್ಳೆಯ ಸಂಸ್ಕೃತಿ ಅಲ್ಲ ಎಂದು ಪ್ರತಾಪ್​ ಸಿಂಹ ಹೇಳಿದ್ದಾರೆ.

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದು ಸರಿಯಲ್ಲ ಎಂದ ಪ್ರತಾಪ್​ ಸಿಂಹ

author img

By

Published : Aug 18, 2022, 8:38 PM IST

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಸರಿಯಲ್ಲ. ಅಂತಹ ಸಂಸ್ಕೃತಿ ಒಳ್ಳೆಯದಲ್ಲ. ಆದರೆ, ಇಂತಹ ಘಟನೆ ನಡೆಯಲು ಕಾರಣವೇನು ಎಂದು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಡಿಕೇರಿಯಲ್ಲಿ ಸಿದ್ದರಾಮಯ್ಯ ‌ಕಾರಿಗೆ ಬಿಜೆಪಿ ಕಾರ್ಯಕರ್ತರಿಂದ ಮೊಟ್ಟೆ ಎಸೆತ ವಿಚಾರ ನನ್ನ ಗಮನಕ್ಕೆ ಬಂದಿದೆ. ಇವತ್ತು ಮೊಟ್ಟೆ ಬಿಸಾಡಲು ಕಾರಣ ಏನು ಅಂತಾ ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಬೇಕು. ಟಿಪ್ಪು ಜಯಂತಿ ಮಾಡಿ ಅಂತಾ ಯಾರು ಕೇಳಿಕೊಂಡರು?, ಟಿಪ್ಪು ಬಗ್ಗೆ ಕೊಡಗಿನಲ್ಲಿ ಯಾವ ಅಭಿಪ್ರಾಯ ಇದೆ ಎಂದು ಸಿದ್ದರಾಮಯ್ಯಗೆ ಗೊತ್ತಿಲ್ವಾ?, ಕೊಡಗಿನಲ್ಲಿ ಇವತ್ತು ಆಕ್ರೋಶ, ನೋವು ಇದೆ, ಕೊಡಗಿನ ಜನ ನಾಯಿಗೆ ಟಿಪ್ಪು ಅಂತಾ ಹೆಸರಿಡುವಷ್ಟು ಆಕ್ರೋಶ ಇದೆ ಎಂದು ಹೇಳಿದರು.

ಪ್ರತಾಪ್ ಸಿಂಹ

ಮುಸ್ಲಿಮರಲ್ಲಿ ಅಲ್ಲಾಹುವನ್ನು ಹೊರತುಪಡಿಸಿ ಉಳಿದ ಯಾರೂ ಪೂಜೆಗೆ ಭಾಜನರಲ್ಲ. ಅಂದು ಕೋಮು ಅಜೆಂಡಾ ಇಟ್ಟುಕೊಂಡು ಟಿಪ್ಪು ಜಯಂತಿ ‌ಮಾಡಿದರು. ಟಿಪ್ಪು ಜಯಂತಿ ವೇಳೆ ಕುಟ್ಟಪ್ಪ ಕಾಲು ಜಾರಿ ಸತ್ತ ಎಂದಿದ್ದು ಕೊಡಗಿನವರಿಗೆ ನೋವಾಗಿದೆ. ಇತ್ತೀಚೆಗೆ ಕೊಡವರು ಜಾನುವಾರು ತಿನ್ನುವವರು ಅಂತಾ ಸಿದ್ದರಾಮಯ್ಯ ಹೇಳಿದ್ದರು. ಕೊಡಗಿನವರ ಬಗ್ಗೆ ಸುಳ್ಳು ಆರೋಪ ಮಾಡಿರುವಾಗ ಸಹಜವಾಗಿ ಆಕ್ರೋಶದ ಧ್ವನಿ ಹೊರ ಬರುತ್ತದೆ ಎಂದರು.

ಟಿಪ್ಪು ಯಾವ ಹುಲಿ?, ಅವನು ಹೆದರಿ ಓಡಿ ಹೋದವ. ಅವನನ್ನು ಹುಲಿ ಎಂದು ವೈಭವೀಕರಿಸಲಾಗಿದೆ ಅಷ್ಟೇ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈದ್ಗಾ ಮೈದಾನದಲ್ಲಿ ಗಣೇಶ, ದುರ್ಗಾಪೂಜೆ: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಬೇಕು. ಅದು ಕಂದಾಯ ಭೂಮಿ ಎಂದು ಆರ್.ಅಶೋಕ್ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಹಿಂದೂಗಳು ಎರಡು ಹಬ್ಬವನ್ನು ದೊಡ್ಡದಾಗಿ ಆಚರಣೆ ಮಾಡ್ತಾರೆ. ಗಣೇಶ ಚತುರ್ಥಿ, ದುರ್ಗಾಪೂಜೆ ಸಾರ್ವಜನಿಕವಾಗಿ ಮಾಡ್ತೇವೆ. ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿಗರಿಂದ ಮೊಟ್ಟೆ ಎಸೆತ, ಕಪ್ಪು ಬಾವುಟ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.