ETV Bharat / state

ಸಭಾಪತಿಗಳ ವಿವೇಚನಾಧಿಕಾರ ಬಳಸಿದ ಪ್ರತಾಪ್ ಚಂದ್ರ ಶೆಟ್ಟಿ: ದೊರೆಸ್ವಾಮಿ ವಿರುದ್ಧದ‌ ಹೇಳಿಕೆ ಕುರಿತು ಚರ್ಚೆಗೆ ಅವಕಾಶ..! - ರಾಜ್ಯಪಾಲರ ಭಾಷಣ

ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಹೇಳಿಕೆ ನೀಡುವ ಮೂಲಕ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನವೆಸಗಿದ ಆರೋಪ ಕುರಿತು ಕಡೆಗೂ ವಿಧಾನ ಪರಿಷತ್​ನಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಲಾಯಿತು. ಇಂದು ದಿನದ ಕಲಾಪ ಬಲಿಯಾದ ನಂತರ ಸಭಾಪತಿಗಳು ವಿವೇಚನಾಧಿಕಾರ ಬಳಸಿ ಚರ್ಚೆಗೆ ಅವಕಾಶ ನೀಡಿದರು.

Karnataka Legislative Council
ವಿಧಾನ ಪರಿಷತ್
author img

By

Published : Mar 3, 2020, 1:54 PM IST

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ಅವರ ಬಗ್ಗೆ ಹೇಳಿಕೆ ನೀಡುವ ಮೂಲಕ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನವೆಸಗಿದ ಆರೋಪ ಕುರಿತು ಕಡೆಗೂ ವಿಧಾನ ಪರಿಷತ್​ನಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಲಾಯಿತು. ಇಂದು ದಿನದ ಕಲಾಪ ಬಲಿಯಾದ ನಂತರ ಸಭಾಪತಿಗಳು ವಿವೇಚನಾಧಿಕಾರ ಬಳಸಿ ಚರ್ಚೆಗೆ ಅವಕಾಶ ನೀಡಿದರು.

ವಿಧಾನ ಪರಿಷತ್ ಕಲಾಪದ ಮೂರನೇ ದಿನದ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಜೆಡಿಎಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ಮುಂದುವರೆಸಿ ದೊರೆಸ್ವಾಮಿ ಅವರ ಬಗ್ಗೆ ಅಗೌರವ ತರುವ ಹೇಳಿಕೆ ನೀಡಿರುವ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದರು. ಸಭಾಪತಿಗಳ ವಿವೇಚನಾಧಿಕಾರ ಬಳಸುವ ಸಭಾ ನಡವಳಿಕೆ 342ರ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಪ್ರಸ್ತಾಪ ಸಲ್ಲಿಸಿದರು. ಸರ್ಕಾರದ ಉತ್ತರ ಬೇಕಿದ್ದರೆ ಯಾವುದಾದರೂ ನಿಯಮದ ಅಡಿಯಲ್ಲಿ ಪ್ರಸ್ತಾಪ ಸಲ್ಲಿಸಿ ಎನ್ನುವ ಸಭಾನಾಯಕರ ಹೇಳಿಕೆಯಂತೆಯೇ ಪ್ರಸ್ತಾಪ ಸಲ್ಲಿಸಿದ್ದು ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ಪ್ರತಿಪಕ್ಷದ ಪ್ರಸ್ತಾಪ ಕುರಿತು ಮಾತನಾಡಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, 342ರ ನಿಯಮ ನಿರ್ದಿಷ್ಟವಾಗಿ ವಿಧೇಯಕ ಮಾಡದೇ ಇರುವ ಎಲ್ಲ ವಿಷಯಗಳ ಕುರಿತು ಆಗಿಂದಾಗ್ಗೆ ನಿರ್ಧರಿಸುವ ಅಧಿಕಾರ‌ ಸಭಾಪತಿಗಳಿಗೆ ಇದೆ ಅದರಂತೆ ತಮ್ಮ ಪರಮಾಧಿಕಾರ‌ ಚಲಾಯಿಸಲಿದ್ದಾರೆ ಅದಕ್ಕೆ‌ ನಾವು ಬದ್ದರಿದ್ದೇವೆ. ಆದರೆ, ಈಗ ಚರ್ಚೆಗೆ ಅವಕಾಶ ಬೇಡ ನಾಳೆ ಅವಕಾಶ ಕೊಡಿ, ಇಂದು ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗೆ ಅವಕಾಶ ಕಲ್ಪಿಸಿ ಎಂದು ಮನವಿ ಮಾಡಿದರು.

ಪ್ರತಿ ಪಕ್ಷದ ಪ್ರಸ್ತಾಪ ಮತ್ತು ಸಭಾನಾಯಕರ ಮನವಿ ಎರಡನ್ನೂ ಆಲಿಸಿದ ಸಭಾಪತಿ ಪ್ರತಾಪ್ ಚಂದ್ರ‌ಶೆಟ್ಟಿ ಚರ್ಚೆಗೆ ಅವಕಾಶ ಕಲ್ಪಿಸಿ ರೂಲಿಂಗ್ ನೀಡಿ‌ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಅವರಿಗೆ ಚರ್ಚೆ ಆರಂಭಿಸಲು ಅವಕಾಶ ಕಲ್ಪಿಸಿದರು. ಸಭಾಪತಿಗಳ ನಿರ್ಧಾರ ಸ್ವಾಗತಿಸಿ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಧರಣಿ ಕೈಬಿಟ್ಡರು.

ಈ ವೇಳೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಚರ್ಚೆಗೆ ಅವಕಾಶ ನೀಡಿದ್ದೀರಿ‌ ಇದಕ್ಕೆ ನಮ್ಮ ಆಕ್ಷೇಪ ಇಲ್ಲ ಚರ್ಚೆ ನಡೆಯಲಿದೆ. ಆದರೆ ಸದನದ ಹೊರಗೆ ನಡೆದ ವಿಚಾರಗಳನ್ನು ರಾಜಕೀಯವಾಗಿ ಎದುರಿಸಬೇಕು ಅದನ್ನು ಬಿಟ್ಟು ಎಲ್ಲಿಯವರೆಗೆ ಇಲ್ಲಿ ಚರ್ಚೆ ಮಾಡುತ್ತೀರಿ, ಚರ್ಚೆ ಮಾಡಿ‌ ಅವರ ಘನತೆ ಕಡಿಮೆ ಮಾಡುತ್ತೀರಿ ಅಷ್ಟೇ, ಇದು ಸದನದ ಹೊರಗೆ ನಡೆಯುವ ಹೇಳಿಕೆ,‌ ಪ್ರತಿ ಹೇಳಿಕೆ ಬಗ್ಗೆ ಚರ್ಚೆಯ ವೇದಿಕೆಯಾಗಬಾರದು ಎಂದು ಅಭಿಪ್ರಾಯಪಟ್ಟರು.

ಆದರೂ‌ ಚರ್ಚೆಗೆ ಅನುಮತಿ ನೀಡಿದ‌ ಸಭಾಪತಿಗಳು‌ ಸದನದ ಸದಸ್ಯರಲ್ಲದವರ ಹೆಸರು ಪ್ರಸ್ತಾಪ ಮಾಡದೇ ಚರ್ಚೆ ನಡೆಸುವಂತೆ ಸೂಚಿಸಿ‌ ಚರ್ಚೆಗೆ ಅವಕಾಶ ಕಲ್ಪಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.